
ಬೆಂಗಳೂರು, ಜ.9: ಪ್ರತಿಯೊಂದು ಹೆಣ್ಣಿಗೂ ತಾಯಿಯಾಗುವ ಹಕ್ಕಿದೆ. ಆದರೆ ಆ ಮಗುವನ್ನು ಪಡೆಯುವ ರೀತಿಯೂ ಮುಖ್ಯವಾಗಿರುತ್ತದೆ. ಈ ಪ್ರಕೃತಿಯ ಪ್ರಕಾರ ಒಂದು ಹೆಣ್ಣು ಗಂಡಿನಿಂದಲ್ಲೇ ಪಡೆಯಬೇಕು ಎಂಬ ನಿಯಮವಿದೆ. ಗಂಡು-ಹೆಣ್ಣು ಸೇರಿದಾಗ ಮಾತ್ರ ಸಂಬಂಧಗಳಿಗೆ ಅರ್ಥ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ವಿರುದ್ಧವಾಗಿ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಈಗಿನ ಟ್ರೆಂಡ್ ಪ್ರಕಾರ ಸಮಲಿಂಗಿ ಸಂಬಂಧಗಳು ಅಂದರೆ ಸಲಿಂಗ ಪ್ರೇಮ, ಇದು ಸಾಮಾಜಿಕ ವ್ಯವಸ್ಥೆಯಲ್ಲಿ ಹಾಗೂ ಭಾರತದ ಪದ್ಧತಿಗೂ ವಿರುದ್ಧವಾಗಿದೆ. ಇಂದಿಗೂ ಕೂಡ ಸಲಿಂಗ ಸಂಬಂಧಕ್ಕೆ ಕಾನೂನತ್ಮಕ ಸ್ಥಾನಮಾನ ಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಒಂದು ವಿಚಿತ್ರ ಘಟನೆ ನಡೆದಿರುವ ಪೋಸ್ಟ್ವೊಂದು ವೈರಲ್ ಆಗಿದೆ. ಬೆಂಗಳೂರಿನ ಸಲಿಂಗಕಾಮಿ ದಂಪತಿಯಲ್ಲಿ (lesbian couple) ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎಂಬ ಪೋಸ್ಟ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ವ್ಯಾಪಕ ಚರ್ಚೆಗೂ ಕಾರಣವಾಗಿದೆ.
ಇದೀಗ ಈ ಬಗ್ಗೆ ಫೋಟೋವೊಂದು ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗಿದೆ. ಕೆಲವರು ಈ ಸುದ್ದಿ ನಿಜವಲ್ಲ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ವೈರಲ್ ಆಗಿದೆ. ಈ ಜೋಡಿ ತಮ್ಮ ಸಂಬಂಧ ಹಾಗೂ ಗರ್ಭಿಣಿಯಾಗಿರುವ ಬಗ್ಗೆ ಎಲ್ಲೂ ಹಂಚಿಕೊಂಡಿಲ್ಲ. ಆದರೆ ಈ ಫೋಟೋವನ್ನು ನೋಡಿ ಅನೇಕರು ಇದು ಎಐಯಿಂದ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಬ್ಬರೂ ಈ ಸಲಿಂಗ ಸಂಬಂಧವನ್ನು ಹೊಂದಿದ್ದಾರೆ ಎಂಬುದಕ್ಕೆ ಯಾವ ಮಾಹಿತಿ ಇಲ್ಲ. ಒಂದು ಹೆಣ್ಣಿನಿಂದ ಮತ್ತೊಂದು ಹೆಣ್ಣು ಮಗು ಪಡೆಯಲು ಹೇಗೆ? ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇದು ಸುಳ್ಳು ಸುದ್ದಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಜೀವನಶೈಲಿ ದುಬಾರಿ ಅಲ್ಲ: ತಿಂಗಳಿಗೆ 27,300 ರೂ ಖರ್ಚು ಮಾಡುವ ಯುವತಿಯ ಸಲಹೆ
ಈ ಫೋಟೋವನ್ನು ನೋಡಿ ಹಲವು ತಜ್ಞರು ತುಂಬಾ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ತಮ್ಮ ಪೋಟೋಗಳನ್ನು ಎಐಗೆ ಹಾಕುವ ಮುನ್ನ ತಂತ್ರಿಕಾ ರಕ್ಷಣೆಯ ಬಗ್ಗೆ ನೋಡಬೇಕು. ಕೆಲವೊಂದು ಬಾರಿ ಎಐಗೆ ಹಾಕುವ ಕಾರಣ ಫೋಟೋಗಳನ್ನು ಕದಿಯುವ ಸಾಧ್ಯತೆಗಳು ಇದೆ ಎಂದು ಹೇಳಿದ್ದಾರೆ. ಅದರಲ್ಲಿಯೂ ನೋಡಲು ಸುಂದರ ಆಗಿರುವ ಯುವತಿಯರು ಇದರಲ್ಲಿ ಅಪ್ಲೋಡ್ ಮಾಡಿದ್ರೆ ಮುಗಿದೇ ಹೋಯ್ತು. ಇಂತಹ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹೇಳಲಾಗಿದೆ. ಸಲಿಂಗಿಗಳ ವಿವಾಹಕ್ಕೆ ಸುಪ್ರೀಂಕೋರ್ಟ್ ಅಕ್ಟೋಬರ್ 2023 ರಲ್ಲಿ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದರೂ, ಅದಕ್ಕೂ ಮುನ್ನ ಅವರ ಹಕ್ಕುಗಳನ್ನು ಕೋರ್ಟ್ ಎತ್ತಿಹಿಡಿದಿದೆ, ಸಲಿಂಗ ಸಂಬಂಧಗಳು ಈಗ ಅಪರಾಧವಲ್ಲ ಎಂದು ಹೇಳಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:31 pm, Fri, 9 January 26