Toll Rates: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ತಾತ್ಕಾಲಿಕ ಟೋಲ್ ದರಗಳನ್ನು ಇಲ್ಲಿ ಪರಿಶೀಲಿಸಿ

| Updated By: ನಯನಾ ಎಸ್​ಪಿ

Updated on: Feb 14, 2023 | 1:27 PM

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಲಘು ಮತ್ತು ಭಾರೀ ವಾಹನಗಳಿಗೆ ಮಾಸಿಕ ಪಾಸ್‌ಗಳನ್ನು ನೀಡುತ್ತದೆ ಆದರೆ ಅವುಗಳನ್ನು ತಿಂಗಳಿಗೆ ನಿರ್ದಿಷ್ಟ ಸಂಖ್ಯೆಗೆ ನಿರ್ಬಂಧಿಸುತ್ತದೆ ಎಂದು ಮೂಲಗಳು ತಿಳಿಸಿವೆ.

Toll Rates: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ: ತಾತ್ಕಾಲಿಕ ಟೋಲ್ ದರಗಳನ್ನು ಇಲ್ಲಿ ಪರಿಶೀಲಿಸಿ
Bengaluru-Mysuru expressway
Image Credit source: Twitter
Follow us on

Toll Rate: ಸೋಮವಾರ (ಫೆಬ್ರವರಿ 13) ಸಂಸದ ಪ್ರತಾಪ್ ಸಿಂಹ, “ಟೋಲ್ ದರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಬೆಂಗಳೂರಿನಿಂದ ನಿಡಘಟ್ಟದವರೆಗಿನ ಮೊದಲ ಮಾರ್ಗಕ್ಕೆ 135 ರೂ. ಮತ್ತು ಮೈಸೂರು-ಬೆಂಗಳೂರು ಹೈವೇ ಎರಡೂ ಕಡೆ ಸೇರಿ ಟೋಲ್​ ದರ 250 ರೂಪಾಯಿ ಆಗಬಹುದು. ಫ್ಲೈಓವರ್​​ಗಳು ಬಂದಾಗ ಟೋಲ್ ದರ ಕೊಂಚ ಹೆಚ್ಚಾಗುತ್ತದೆ. ಫ್ಲೈ ಓವರ್​​ಗಳು ಇರುವ ಕಾರಣ 250 ರೂ. ಟೋಲ್ ನಿಗದಿ ಆಗಬಹುದು” ಎಂದು ಹೇಳಿದರು.

ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಮಾರ್ಚ್ 2 ಅಥವಾ 3ನೇ ವಾರದಲ್ಲಿ ಹೈವೇ ಲೋಕಾರ್ಪಣೆ ಆಗುತ್ತೆ. ಸುಮಾರು 3,500 ಕೋಟಿ ವೆಚ್ಚದಲ್ಲಿ 115 ಕಿ.ಮೀ. ಹೈವೇ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳು ಅಥವಾ ಮುಂದಿನ ತಿಂಗಳು ಎಕ್ಸ್‌ಪ್ರೆಸ್‌ವೇಯನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಎಕ್ಸ್‌ಪ್ರೆಸ್‌ವೇಗೆ ಕಾವೇರಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರಿಸುವಂತೆ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಬೆಂಗಳೂರಿನಿಂದ ನಿಡಘಟ್ಟವರೆಗಿನ 56-ಕಿಮೀ ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಬಳಸುವ ವಾಹನಗಳ ಟೋಲ್ ದರಗಳ ಮಾಹಿತಿಯನ್ನು NHAI ಅಧಿಕಾರಿಗಳು ತಿಳಿಸಿದ್ದಾರೆ. ಕಾರುಗಳು ಮತ್ತು ಇತರ ಲಘು ಮೋಟಾರು ವಾಹನಗಳ ಏಕಮುಖ ಸಂಚಾರಕ್ಕೆ 135 ರೂ. ಪಾವತಿಸಬೇಕಾಗುತ್ತದೆ. ಬಸ್‌ಗಳು 460 ರೂ. ಮತ್ತು ಭಾರೀ ಮೋಟಾರು ವಾಹನಗಳು 750-900 ರೂ.ಗಳ ನಡುವೆ ಪಾವತಿಸಬೇಕಾಗಬಹುದು ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ. ಮೇಲಧಿಕಾರಿಗಳಿಂದ ಅನುಮೋದನೆ ಪಡೆದು ಉದ್ಘಾಟನೆಗೂ ಮುನ್ನ ಟೋಲ್ ದರದ ಬಗ್ಗೆ ಅಧಿಕೃತ ಸೂಚನೆ ಹೊರಡಿಸಲಾಗುವುದು ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆಬ್ರವರಿ 16ರವರೆಗೆ ಪವರ್​ ಕಟ್​​​​

ಮೂಲಗಳ ಪ್ರಕಾರ, NHAI ಲಘು ಮತ್ತು ಭಾರೀ ವಾಹನಗಳಿಗೆ ಮಾಸಿಕ ಪಾಸ್‌ಗಳನ್ನು ನೀಡುತ್ತದೆ ಆದರೆ ಅವುಗಳನ್ನು ತಿಂಗಳಿಗೆ ನಿರ್ದಿಷ್ಟ ಸಂಖ್ಯೆಗೆ ನಿರ್ಬಂಧಿಸುತ್ತದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ, ಎಕ್ಸ್‌ಪ್ರೆಸ್‌ವೇಯಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಟೋಲ್ ದರದ ಅಧಿಕೃತ ಸೂಚನೆ ಹೊರಡಿಸಿದ ನಂತರ, ಎಕ್ಸ್‌ಪ್ರೆಸ್‌ವೇ ನಲ್ಲಿ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು NHAI ಯೋಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ