3 ದಿನದಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದಿದ್ದರೆ ಬ್ಲ್ಯಾಕ್​ಲಿಸ್ಟ್​​ಗೆ ಜಿವಿಕೆ: ಆರೋಗ್ಯ ಆಯುಕ್ತ ಎಚ್ಚರಿಕೆ

ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಜಿವಿಕೆ ಸಂಸ್ಥೆಗೆ 3 ದಿನಗಳ ಗಡುವು ನೀಡಿದ್ದಾರೆ. 3 ದಿನದಲ್ಲಿ ವೇತನ ನೀಡದಿದ್ದರೆ ಬ್ಲ್ಯಾಕ್​ಲಿಸ್ಟ್​​ಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

3 ದಿನದಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡದಿದ್ದರೆ ಬ್ಲ್ಯಾಕ್​ಲಿಸ್ಟ್​​ಗೆ ಜಿವಿಕೆ: ಆರೋಗ್ಯ ಆಯುಕ್ತ ಎಚ್ಚರಿಕೆ
ಆ್ಯಂಬುಲೆನ್ಸ್
Edited By: ಆಯೇಷಾ ಬಾನು

Updated on: Nov 15, 2022 | 9:23 AM

ಬೆಂಗಳೂರು: ಕಳೆದು 2 ತಿಂಗಳಿಂದ ಜಿವಿಕೆ ಸಂಸ್ಥೆ ವೇತನ ನೀಡಿಲ್ಲ ಎಂದು ಬೀದಿಗಿಳಿದಿದ್ದ 108 ಆ್ಯಂಬುಲೆನ್ಸ್​ ಸಿಬ್ಬಂದಿ ಈಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿ ಆಗಿದೆ. ಸಿಬ್ಬಂದಿಗೆ ಸಂಸ್ಥೆ ಸಂಬಳ ಪಾವತಿಸಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದರು. ಆದ್ರೆ ಆರೋಗ್ಯ ಇಲಾಖೆ ಸೂಚನೆ ಬಳಿಕವೂ ಜಿವಿಕೆ ಸಂಸ್ಥೆ 108 ಌಂಬುಲೆನ್ಸ್‌ ಸಿಬ್ಬಂದಿಗೆ ವೇತನ ನೀಡಿಲ್ಲ. ಹೀಗಾಗಿ ವೇತನಕ್ಕೆ ಆಗ್ರಹಿಸಿ ಮತ್ತೆ 108 ಌಂಬುಲೆನ್ಸ್‌ ಸಿಬ್ಬಂದಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಆರೋಗ್ಯಸೌಧದ ಎದುರು ಧರಣಿ ನಡೆಸಲಿದೆ. ಇದರ ನಡುವೆ ಈಗ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಜಿವಿಕೆಗೆ ಕೊನೆಯ ಗಡುವು ನೀಡಿದ್ದಾರೆ.

ಆರೋಗ್ಯ ಇಲಾಖೆ ಆದೇಶಕ್ಕೂ ಜಿವಿಕೆ ಸಂಸ್ಥೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಸಂಬಳವಿಲ್ಲದೆ ಆ್ಯಂಬುಲೆನ್ಸ್​ ಸಿಬ್ಬಂದಿ ಕಂಗಾಲಾಗಿದ್ದಾರೆ. ಕಳೆದ 15 ದಿನಗಳ ಹಿಂದೆ ಸಭೆ ನಡೆಸಿ ಮೂರು ತಿಂಗಳ ವೇತನ ನೀಡುವಂತೆ ಜಿವಿಕೆ ಸಂಸ್ಥೆಗೆ ಆರೋಗ್ಯ ಇಲಾಖೆ ಆಯುಕ್ತರು ಸೂಚಿಸಿದ್ರು. ಆದ್ರೆ ಜಿವಿಕೆ ಕೇವಲ ಒಂದು ತಿಂಗಳ ವೇತನ ಮಾತ್ರ ನೀಡಿದ್ದು 2 ತಿಂಗಳ ವೇತನ ಬಾಕಿ ಉಳಿಸಿದೆ. ಹಾಗೂ ವೇತನ ಹೆಚ್ಚಳ ಮಾಡಿಲ್ಲ. ಈ‌ ಹಿನ್ನೆಲೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಜಿವಿಕೆ ಸಂಸ್ಥೆಗೆ ಕೊನೆಯ ಗಡುವು ನೀಡಿದ ಆರೋಗ್ಯ ಇಲಾಖೆ

ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಜಿವಿಕೆ ಸಂಸ್ಥೆಗೆ 3 ದಿನಗಳ ಗಡುವು ನೀಡಿದ್ದಾರೆ. 3 ದಿನದಲ್ಲಿ ವೇತನ ನೀಡದಿದ್ದರೆ ಬ್ಲ್ಯಾಕ್​ಲಿಸ್ಟ್​​ಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಜಿವಿಕೆ ಮೇಲೆ ಈಗಾಗಲೇ ಅನೇಕ ಆರೋಪಗಳು ಕೇಳಿ ಬಂದಿವೆ. ನ.14ರೊಳಗೆ ಸಿಬ್ಬಂದಿಗೆ ಸಂಬಳ ನೀಡುವುದಾಗಿ ಸಂಸ್ಥೆ ಹೇಳಿತ್ತು. ನ.14 ಮುಗಿದರೂ 108 ಆ್ಯಂಬುಲೆನ್ಸ್​​ ನೌಕರರಿಗೆ ಸಂಬಳ ನೀಡಿಲ್ಲ. ವೇತನ ನೀಡದಿದ್ದರೆ ಸಂಸ್ಥೆ ವಿರುದ್ಧ ಸರ್ಕಾರಕ್ಕೆ ವರದಿ ನೀಡುತ್ತೇವೆ. ಕಂಪನಿಗೆ ನಾವು ಸ್ಯಾಟಿಸ್‌ಫ್ಯಾಕ್ಟರಿ ( satisfactory) ಸರ್ಟಿಫಿಕೇಟ್ ಕೊಡಲ್ಲ. ಸರ್ಟಿಫಿಕೇಟ್ ಬಂದಿಲ್ಲ ಅಂದ್ರೆ ಮುಂದಿನ ದಿನದಲ್ಲಿ ಟೆಂಡರ್ ನಲ್ಲಿ ಅವಕಾಶ ಸಿಗುವುದಿಲ್ಲ. 3 ದಿನದಲ್ಲಿ ಸಂಬಳ ನೀಡದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ.ರಂದೀಪ್​​ ಎಚ್ಚರಿಕೆ ನೀಡಿದ್ದಾರೆ.

Published On - 9:22 am, Tue, 15 November 22

TV9 Web

TV9 Kannada

Read More
Loading...
Unable to load recommendations.
Follow Us