ಬೆಂಗಳೂರು, ಡಿ.31: ಬೆಂಗಳೂರಿನ ಪ್ರೆಸ್‌ಕ್ಲಬ್ (Bengaluru Press Club) ವತಿಯಿಂದ ಹಮ್ಮಿಕೊಳ್ಳಲಾಗಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ (Bengaluru Press Club Award)ವಿತರಣ ಕಾರ್ಯಕ್ರಮ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯನವರು ಮಾಧ್ಯಮ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಪರ್ತಕರ್ತರಿಗೆ ಪ್ರೆಸ್‌ಕ್ಲಬ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಟಿವಿ9ನ ಕ್ರೈಂ ವಿಭಾಗದ ಹಿರಿಯ ವರದಿಗಾರ ಹೆಚ್.ವಿ.ಕಿರಣ್ (Kiran H.V) ಅವರು ಸಿಎಂ ಸಿದ್ದರಾಮಯ್ಯರವರ (Siddaramaiah) ಕೈಯಿಂದ ಜೀವಮಾನ ಸಾಧನೆ ಪ್ರಶಸ್ತಿ ಪಡೆದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಶ್ಯಾಮನೂರು ಶಿವಶಂಕರಪ್ಪ, ಸಂತೋಷ್ ಲಾಡ್, ಕೆ.ಗೋವಿಂದ ರಾಜು ಹಾಗೂ 29 ಪತ್ರಕರ್ತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಟಿವಿ9 ಹಿರಿಯ ವರದಿಗಾರ ಕಿರಣ್.H.V.ಗೆ ಜೀವಮಾನ ಸಾಧನೆಗಾಗಿ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಿರಣ್ ಅವರು ಸೇರಿ ಒಟ್ಟು 29 ಪತ್ರಕರ್ತರ ಜೀವಮಾನ ಸಾಧನೆಗಾಗಿ ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ವರ್ಷದ ವ್ಯಕ್ತಿ, ಶಾಸಕ ಶ್ಯಾಮನೂರು ಶಿವಶಂಕರಪ್ಪಗೆ ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ, ಸಂತೋಷ್ ಲಾಡ್, ಕೆ.ಗೋವಿಂದ ರಾಜುಗೆ ಪ್ರೆಸ್‌ಕ್ಲಬ್ ಪ್ರಶಸ್ತಿ ಪ್ರದಾನ ಮಾಡಿ ಸಿಎಂ ಸಿದ್ದರಾಮಯ್ಯನವರು ಸನ್ಮಾನಿಸಿದರು.
ಇದನ್ನೂ ಓದಿ: ಟಿವಿ9ನ ಕಿರಣ್ ಸೇರಿದಂತೆ 29 ಮಂದಿಗೆ ಬೆಂಗಳೂರು ಪ್ರೆಸ್‌ಕ್ಲಬ್ ವಾರ್ಷಿಕ ಪ್ರಶಸ್ತಿ, ಡಿಕೆಶಿ ʼವರ್ಷದ ವ್ಯಕ್ತಿʼ
ಕಿರಣ್ ಎಚ್.ವಿ (ಟಿವಿ9), ಸದಾಶಿವ ಶೆಣೈ. ಕೆ, ಆರ್. ಶಂಕರ್, ಡಾ. ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ (ಕಂ.ಕ ಮೂರ್ತಿ), ನಾಗರಾಜ. ಎಂ, ರೂಪಾ ಆರ್. ರಾವ್, ಸತೀಶ್‌ಕುಮಾರ್ ಬಿ.ಎಸ್, ರಾಕೇಶ್ ಪ್ರಕಾಶ್ , ರಮೇಶ್ ಬಿ.ಎನ್ (ಅಭಿಮನ್ಯು), ಚನ್ನಕೃಷ್ಣ ಪಿ.ಕೆ, ವಿಜಯ್‌ಕುಮಾರ್ ಮಲಗಿಹಾಳ್, ಮನೋಜ್‌ಕುಮಾರ್, ಮುತ್ತು. ಪಿ, ಶ್ರೀಕಂಠ ಶರ್ಮ. ಆರ್, ಸಿದ್ದೇಶ್‌ಕುಮಾರ್ ಹೆಚ್.ಪಿ, ಅಫ್ಶಾನ್ ಯಾಸ್ಮಿನ್, ಚಂದ್ರಶೇಖರ್. ಎಂ, ಭಾಸ್ಕರ್ ಕೆ.ಎಸ್, ಸುಭಾಷ್ ಹೂಗಾರ್, ಪ್ರಸನ್ನಕುಮಾರ್ ಲೂಯಿಸ್, ಶಂಕರೇಗೌಡ ಹೆಚ್.ಡಿ, ಜನಾರ್ಧನಾಚಾರಿ ಕೆ.ಎಸ್, ಲಿಂಗರಾಜು ಡಿ. ನೊಣವಿನಕೆರೆ, ಮೋಹನ್‌ರಾವ್ ಸಾವಂತ್. ಜಿ, ಅನಂತರಾಮು ಸಂಕ್ಲಾಪುರ್. ಎಲ್, ಕೌಶಿಕ್. ಆರ್, ಲಕ್ಷ್ಮಿ ಸಾಗರ ಸ್ವಾಮಿಗೌಡ, ಚಿದಾನಂದ ಪಟೇಲ್.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:40 pm, Sun, 31 December 23