
ಬೆಂಗಳೂರು, ಮೇ.1: ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾ 2026 ಸಮ್ಮೇಳನದಲ್ಲಿ ನಗರ ಆಹಾರಗಳಿಗೆ ಹೆಚ್ಚಿನ ಆದ್ಯತೆ ಸಿಕ್ಕಿದೆ. ಇಲ್ಲಿ ಆಹಾರಕ್ಕೆ ಬೇರೆ ರಾಜ್ಯದ ಜನ ಫಿದಾ ಆಗಿದ್ದಾರೆ. ಈ ಬಗ್ಗೆ ಗುಜರಾತಿನ ದಂಪತಿಗಳು ಈ ವಿಶೇಷ ಕೂಟದಲ್ಲಿ ಬಗ್ಗೆ ಅದ್ಬುತವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದೇಶದ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈಗೆ ಹೋಲಿಸಿದರೆ ಬೆಂಗಳೂರಿನ ಆಹಾರ ಸಂಸ್ಕೃತಿಯು ಅತ್ಯಂತ ವಿಭಿನ್ನ ಮತ್ತು ಆಳವಾದದ್ದು. ಇಲ್ಲಿನ ಜನರು ಕೇವಲ ಫ್ಯಾಷನ್ ಅಥವಾ ಟ್ರೆಂಡ್‌ಗಾಗಿ ಹೋಟೆಲ್‌ಗಳಿಗೆ ಹೋಗುವುದಿಲ್ಲ, ಬದಲಿಗೆ ಅಧಿಕೃತ ರುಚಿ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಬೆಲೆ ನೀಡುತ್ತಾರೆ. ಇನ್ನು ಬೆಂಗಳೂರಿನ ರೆಸ್ಟೋರೆಂಟ್ ವೀಕ್ ಇಂಡಿಯಾವೂ ಏಪ್ರಿಲ್ 24ರಿಂದ ಆರಂಭವಾಗಿದೆ ಮೇ 3 ಅಂದರೆ ಭಾನುವಾರದ ವರೆಗೆ ಇದೆ.
ಏಪ್ರಿಲ್ ತಿಂಗಳಿನಲ್ಲಿ ಹತ್ತು ದಿನಗಳ ಕಾಲ ಬೆಂಗಳೂರು, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ‘ರೆಸ್ಟೋರೆಂಟ್ ವೀಕ್’ ಆಯೋಜಿಸಲಾಗಿದೆ. ಈ ಅವಧಿಯಲ್ಲಿ ಆಯ್ದ ಪ್ರಸಿದ್ಧ ರೆಸ್ಟೋರೆಂಟ್‌ಗಳಲ್ಲಿ ಒಬ್ಬರಿಗೆ 1500 ರೂ. ರಂತೆ ನಿಗದಿಪಡಿಸಿದ ದರದಲ್ಲಿ (Prix-fixe menu) ಊಟ ಲಭ್ಯವಿರುತ್ತದೆ. ಇದರಲ್ಲಿ ಒಂದು ಹಸಿವು ಹೆಚ್ಚಿಸುವ ಆಹಾರ (Appetizer), ಒಂದು ಮುಖ್ಯ ಊಟ ಮತ್ತು ಒಂದು ಸಿಹಿ ತಿಂಡಿ ಒಳಗೊಂಡಿರುತ್ತದೆ. ಯುವ ಗ್ರಾಹಕರಿಗೆ ಹೊಸ ರೆಸ್ಟೋರೆಂಟ್‌ಗಳನ್ನು ಪರಿಚಯಿಸುವುದು ಮತ್ತು ನಗರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಇದರ ಗುರಿಯಾಗಿದೆ.
23rd ಸ್ಟ್ರೀಟ್ ಪಿಜ್ಜಾ (23rd Street Pizza)
ಲೂಪಾ (Lupa), ಮ್ಯೂರೋ (Muro), ಫರ್ವರ್ (Fervour)
ಆಲಿವ್ ಬೀಚ್ (Olive Beach), ಟಿಜೌರಿ (Tijouri), ಸ್ಪೈಸ್ ಟೆರೇಸ್ (Spice Terrace)
ಕೋಪಿಟಿಯಾಮ್ ಲಾಹ್ (Kopitiam Lah), ಕಪ್ಪ ಚಕ್ಕ ಕಂಧಾರಿ (Kappa Chakka Kandhari)
ದಿ ಹುಡ್ (The Hood), ಬಾರ್ ಸಮ (Bar Sama), ಪಿಕಾಪ್ ನೋ ಕ್ಯಾಪ್ (Pizza No Cap)
ಇದನ್ನೂ ಓದಿ: ನಮ್ಮ ಮಸಾಲ ದೋಸೆಗೆ ವಿಶ್ವ ಮಟ್ಟದಲ್ಲಿ ಭಾರೀ ಡಿಮ್ಯಾಂಡ್; ‘ಟಾಪ್ 10’ ಅತ್ಯುತ್ತಮ ಪ್ಯಾನ್‌ಕೇಕ್‌ಗಳ ಪಟ್ಟಿಯಲ್ಲಿ ಸ್ಥಾನ!
ರೆಸ್ಟೋರೆಂಟ್ ವೀಕ್ ಇಂಡಿಯಾದ ಸಹ-ಸಂಸ್ಥಾಪಕ ಆತಿಶ್ ನಾಥ್ ಅವರು ಹೇಳುವ ಪ್ರಕಾರ, ಆಹಾರ ರುಚಿ ಹಾಗೂ ಮೌಲ್ಯದಲ್ಲಿ ರಾಜದಿಂದ ರಾಜ್ಯಕ್ಕೆ ವಿಭಿನ್ನತೆ ಇರುತ್ತದೆ. ಈಗ ಬೆಂಗಳೂರಿನ ಗ್ರಾಹಕರನ್ನು ಮೆಚ್ಚಿಸುವುದು ಕಷ್ಟ, ಏಕೆಂದರೆ ಅವರು ರುಚಿಯ ಬಗ್ಗೆ ಆಳವಾದ ಜ್ಞಾನ ಹೊಂದಿರುತ್ತಾರೆ. ಅವರು ಹಣಕ್ಕೆ ತಕ್ಕ ಮೌಲ್ಯವನ್ನು ಬಯಸುತ್ತಾರೆ. ಇನ್ನು ಮುಂಬೈನ ಜನರು ಹೊಸ ರೆಸ್ಟೋರೆಂಟ್‌ಗಳ ಬಗ್ಗೆ ಇರುವ ಕುತೂಹಲ ಮತ್ತು ಅಲ್ಲಿನ ಶಕ್ತಿಯನ್ನು ಇಷ್ಟಪಡುತ್ತಾರೆ. ದೆಹಲಿ ಜನರು ಪರಂಪರೆಗೆ ಮತ್ತು ತಮ್ಮ ಅಧಿಕಾರವನ್ನು ತೋರಿಸಲು ಇಷ್ಟಪಡುತ್ತಾರೆ. ಬೆಂಗಳೂರಿನಲ್ಲಿ ಜನರು ಪಿಜ್ಜಾ ಸವಿಯುತ್ತಾ ಅದರ ರುಚಿಯ ಬಗ್ಗೆ ಚರ್ಚೆ ಮಾಡುತ್ತಾರೆ. ಇದು ಇಲ್ಲಿನ ಜನರ ಆಹಾರದ ಮೇಲಿರುವ ಆಸಕ್ತಿಯನ್ನು ತೋರಿಸುತ್ತದೆ. ಒಟ್ಟಾರೆಯಾಗಿ, ಬೆಂಗಳೂರು ಯಾವುದೇ ಅಬ್ಬರವಿಲ್ಲದೆ ತನ್ನದೇ ಆದ ವಿಶಿಷ್ಟ ಮತ್ತು ಉತ್ತರ ಆಹಾರ ಸಂಸ್ಕೃತಿಯನ್ನು ಬೆಳೆಸಿಕೊಂಡಿದೆ.
ಬೆಂಗಳೂರು: ಕಪ್ಪಾ ಚಕ್ಕ ಕಂಧಾರಿ (Kappa Chakka Kandhari), ಬಾರ್ ಸಾಮ (Bar Sama), ಲೂಪಾ (Lupa), 23rd ಸ್ಟ್ರೀಟ್ ಪಿಜ್ಜಾ, ಮತ್ತು ಮ್ಯೂರೋ.
ಮುಂಬೈ: ಬಾಂಬೆ ಕ್ಯಾಂಟೀನ್ (The Bombay Canteen), ಅಮೇರಿಕಾನೋ (Americano) ಮತ್ತು ಒ ಪೆಡ್ರೊ (O Pedro).
ದೆಹಲಿ: ಇಂಜಾ (Inja), ಅಡ್ರಿಫ್ಟ್ ಕಾಯ (Adrift Kaya) ಮತ್ತು ಆಲಿವ್ ಬಾರ್ & ಕಿಚನ್ (Olive Bar & Kitchen).
ಬುಕ್ ಮಾಡುವುದು ಹೇಗೆ?
ಕಡ್ಡಾಯ ಬುಕಿಂಗ್: ಈ ರೆಸ್ಟೋರೆಂಟ್‌ಗಳಲ್ಲಿ ನೇರವಾಗಿ ಹೋಗಿ ಕುಳಿತುಕೊಳ್ಳಲು ಅವಕಾಶವಿರುವುದಿಲ್ಲ. ‘ರೆಸ್ಟೋರೆಂಟ್ ವೀಕ್’ ಅಧಿಕೃತ ವೆಬ್‌ಸೈಟ್ ಮೂಲಕ ಮುಂಚಿತವಾಗಿ ಬುಕ್ ಮಾಡುವುದು ಕಡ್ಡಾಯ.
ಪೂರ್ವ ಪಾವತಿ (Pre-payment): ಬುಕಿಂಗ್ ಮಾಡುವಾಗಲೇ ಹಣವನ್ನು ಪಾವತಿಸಬೇಕಾಗುತ್ತದೆ. ಇದು ಗ್ರಾಹಕರು ಮತ್ತು ರೆಸ್ಟೋರೆಂಟ್ ಇಬ್ಬರಿಗೂ ನಿಶ್ಚಿತತೆಯನ್ನು ನೀಡುತ್ತದೆ.
ನಿಗದಿತ ಮೆನು: ನೀವು ಹೋಗುವ ಮೊದಲೇ ಮೆನು ಸಿದ್ಧವಿರುತ್ತದೆ (ಅಪ್ಪೆಟೈಸರ್, ಮೇನ್ ಕೋರ್ಸ್ ಮತ್ತು ಡೆಸರ್ಟ್). ಇದು ಗೊಂದಲವಿಲ್ಲದ, ಉದ್ದೇಶಪೂರ್ವಕ ಊಟದ ಅನುಭವವನ್ನು ನೀಡುತ್ತದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:08 pm, Fri, 1 May 26