ಬೆಂಗಳೂರು: ಅಬ್ಬಬ್ಬಾ…ಬೈಕ್​ ಸವಾರನಿಗೆ ಮಾರುದ್ದದ ದಂಡ ರಶೀದಿ, ಎಷ್ಟು ಕೇಸ್​ಗಳಿದ್ದವು ಗೊತ್ತಾ?

ದ್ವಿಚಕ್ರ ವಾಹನದ ಮೇಲೆ 40 ಕೇಸ್​ಗಳಿಂದ 12 ಸಾವಿರ ಫೈನ್ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಶನಿವಾರ ಹಿಡಿದಿದ್ದು ಆತ ಫೈನ್ ಕಟ್ಟುವವರೆಗೂ ಆತನನ್ನು ಬಿಟ್ಟಿಲ್ಲ. ಮಾರುದ್ದದ ದಂಡದ ರಶೀದಿ ನೀಡಿ 12 ಸಾವಿರ ಫೈನ್ ಕಟ್ಟಿಸಿಕೊಂಡ ನಂತರ ಆತನನ್ನು ಬಿಟ್ಟಿದ್ದು ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ಅಬ್ಬಬ್ಬಾ...ಬೈಕ್​ ಸವಾರನಿಗೆ ಮಾರುದ್ದದ ದಂಡ ರಶೀದಿ, ಎಷ್ಟು ಕೇಸ್​ಗಳಿದ್ದವು ಗೊತ್ತಾ?
ಬೈಕ್​ ಸವಾರನಿಗೆ ಮಾರುದ್ದದ ದಂಡ ರಶೀದಿ
Edited By: ಆಯೇಷಾ ಬಾನು

Updated on: Aug 20, 2023 | 11:52 AM

ಬೆಂಗಳೂರು, ಆ.20: ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ಆರಾಮಾಗಿ ಓಡಾಡುತ್ತಿದ್ದ ವ್ಯಕ್ತಿ ಸದ್ಯ ಟ್ರಾಫಿಕ್ ಪೊಲೀಸರ(Bengaluru Traffic Police) ಕೈಗೆ ಸಿಕ್ಕಿದ್ದು ಆತನ ದ್ವಿಚಕ್ರ ವಾಹನದ ಮೇಲಿದ್ದ 40 ಕೇಸ್​ಗಳನ್ನು ಕ್ಲಿಯರ್ ಮಾಡಿದ ಬಳಿಕವಷ್ಟೇ ಆತನನ್ನು ಬಿಡಲಾಗಿದೆ. ದ್ವಿಚಕ್ರ ವಾಹನದ ಮೇಲೆ 40 ಕೇಸ್​ಗಳಿಂದ 12 ಸಾವಿರ ಫೈನ್ ಉಳಿಸಿಕೊಂಡಿದ್ದ ವ್ಯಕ್ತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಶನಿವಾರ ಹಿಡಿದಿದ್ದು ಆತ ಫೈನ್ ಕಟ್ಟುವವರೆಗೂ ಆತನನ್ನು ಬಿಟ್ಟಿಲ್ಲ. ಮಾರುದ್ದದ ದಂಡದ ರಶೀದಿ ನೀಡಿ 12 ಸಾವಿರ ಫೈನ್ ಕಟ್ಟಿಸಿಕೊಂಡ ನಂತರ ಆತನನ್ನು ಬಿಟ್ಟಿದ್ದು ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತಲ್ಲಘಟ್ಟ ಪೊಲೀಸ್ ವ್ಯಾಪ್ತಿಯಲ್ಲಿ ಟ್ರಾಫಿಕ್ ಪೊಲೀಸರು ಬೈಕ್​ ಚಾಲಕನನ್ನು ಹಿಡಿದಿದ್ದಾರೆ. ಈ ವೇಳೆ ಆತ ಅನೇಕ ತಿಂಗಳಿಂದ ಫೈನ್ ಕಟ್ಟದೆ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿದೆ. ಇದು ತಿಳಿಯುತ್ತಿದ್ದಂತೆ. ಬೈಕ್ ಚಾಲಕ ಫೈನ್ ಕ್ಲಿಯರ್ ಮಾಡುವ ವರೆಗೂ ಬಿಟ್ಟಿಲ್ಲ. ಕೊನೆಗೆ ಫೈನ್ ಕಟ್ಟಿದ ಮೇಲೆ ಬಿಟ್ಟು ಕಳಿಸಿದ್ದಾರೆ. ಸದ್ಯ ಟ್ರಾಫಿಕ್ ಪೊಲೀಸ್ ಈ ವಿಚಾರವನ್ನು ಫೋಟೋ ಸಮೇತ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟು 40 ಕೇಸ್​ಗಳಿಂದ 12 ಸಾವಿರ ದಂಡ ವಸೂಲಿ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಹೆಚ್​ಎಎಲ್​ ಬಳಿಯ ಏರ್​ಫೋರ್ಸ್​ ತಾಂತ್ರಿಕ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಅಪರಿಚಿತ ವ್ಯಕ್ತಿ ಅರೆಸ್ಟ್

ಸದ್ಯ ಟ್ರಾಫಿಕ್ ಪೊಲೀಸರ ಈ ಟ್ವೀಟ್ ಎಲ್ಲೆಡೆ ಹರಿದಾಡುತ್ತಿದ್ದು ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಇನ್ನು ಇಷ್ಟು ದೊಡ್ಡ ದಂಡ ಪಾವತಿಸಿದಕ್ಕೆ ಆ ವ್ಯಕ್ತಿ ಹೆಮ್ಮೆಪಡುತ್ತಿದ್ದಾನೆಯೇ? ಎಂದು ಟ್ವಿಟರ್ ಬಾಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಇನ್ನು ಕೆಲವು ಬಳಕೆದಾರರು ಈ ರೀತಿ ಪದೇ ಪದೇ ಟ್ರಾಫಿಕ್ ಉಲ್ಲಂಘನೆ ಮಾಡುವವರ ಲೈಸೆನ್ಸ್ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು ಟ್ರಾಫಿಕ್ ಪೊಲೀಸರು ಇತ್ತೀಚೆಗೆ ನಗರದಲ್ಲಿ ಟ್ರಾಫಿಕ್ ಉಲ್ಲಂಘನೆಯನ್ನು ಪತ್ತೆಹಚ್ಚಲು ಮತ್ತು ಉಲ್ಲಂಘಿಸುವವರಿಗೆ ಫೈನ್ ರಶೀದಿ ನೀಡಲು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಅನ್ನು ಪರಿಚಯಿಸಿದ್ದಾರೆ. AI ವ್ಯವಸ್ಥೆಯು ವೇಗದ ಮಿತಿ ಉಲ್ಲಂಘನೆ, ಸಿಗ್ನಲ್ ಜಂಪ್ ಮಾಡುವುದು, ಹೆಲ್ಮೆಟ್ ಇಲ್ಲದೆ ಸವಾರಿ ಮಾಡುವುದು, ಟ್ರಿಪಲ್ ರೈಡಿಂಗ್ ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದನ್ನು ಪತ್ತೆ ಮಾಡುತ್ತದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us