ಬೆಂಗಳೂರು ಮೆಟ್ರೋದಲ್ಲಿ ಆಹಾರ ಸೇವಿಸಿದ ಪ್ರಯಾಣಿಕ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ BMRCL

|

Updated on: Oct 06, 2023 | 11:09 AM

ಬೆಂಗಳೂರು ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸಿದ ಪ್ರಯಾಣಿಕನ ವಿರುದ್ಧ ಬಿಎಂಆರ್​ಸಿಎಲ್ ಪ್ರಕರಣ ದಾಖಲಿಸಿ 500 ರೂಪಾಯಿ ದಂಡ ವಿಧಿಸಿದೆ. ಬಿಎಂಆರ್​ಸಿಎಲ್ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು. ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಇತ್ತೀಚೆಗೆ ಬಿಎಂಆರ್​​ಸಿಎಲ್ ಪ್ರಕರಣ ದಾಖಲಿಸಿತ್ತು.

ಬೆಂಗಳೂರು ಮೆಟ್ರೋದಲ್ಲಿ ಆಹಾರ ಸೇವಿಸಿದ ಪ್ರಯಾಣಿಕ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ BMRCL
ಬೆಂಗಳೂರು ಮೆಟ್ರೋದಲ್ಲಿ ಆಹಾರ ಸೇವಿಸಿದ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು, ದಂಡ ವಸೂಲಿ ಮಾಡಿದ ಬಿಎಂಆರ್​ಸಿಎಲ್
Follow us on

ಬೆಂಗಳೂರು, ಅ.6: ನಮ್ಮ ಮೆಟ್ರೋ (Namma Metro) ರೈಲಿನಲ್ಲಿ ಆಹಾರ ಸೇವಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕರಣ ದಾಖಲಿಸಿದೆ. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡವನ್ನೂ ವಿಧಿಸಿದೆ. ಬಿಎಂಆರ್​ಸಿಎಲ್ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ಈ ವ್ಯಕ್ತಿಯು ನಮ್ಮ ಮೆಟ್ರೋದಲ್ಲಿ ಜಯನಗರ ಮತ್ತು ಸಂಪಿಗೆ ರಸ್ತೆ ನಡುವೆ ನಿತ್ಯ ಪ್ರಯಾಣಿಸುತ್ತಾರೆ. ಸದ್ಯ ಪ್ರಯಾಣಿಕ ಆಹಾರ ಸೇವಿಸುತ್ತಿರುವ ವೀಡಿಯೋದಲ್ಲಿ, ಸ್ನೇಹಿತರು ಮೆಟ್ರೋ ಒಳಗೆ ತಿನ್ನದಂತೆ ಎಚ್ಚರಿಸುತ್ತಾನೆ. ಈ ಸಲಹೆಯನ್ನು ನಿರ್ಲಕ್ಷಿಸಿ ಆಹಾರ ಸೇವಿಸುವುದನ್ನು ನೋಡಬಹುದು.

ನಿಯಮಗಳ ಪ್ರಕಾರ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವಂತಿಲ್ಲ. ಆದರೆ ಈ ಪ್ರಯಾಣಿಕರ ನಿಯಮ ಉಲ್ಲಂಘಿಸಿ ಆಹಾರ ಸೇವಿಸಿದ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಗೆ ಬಿಎಂಆರ್​ಸಿಎಲ್ ದೂರು ದಾಖಲಿಸಿತ್ತು. ಅಲ್ಲದೆ, ದಂಡ ಕೂಡ ವಿಧಿಸಲಾಗಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಅ.6 ರಿಂದ ನಮ್ಮ ಮೆಟ್ರೋ ನೇರಳೆ ಮಾರ್ಗ ಪೂರ್ಣ ಪ್ರಮಾಣದ ಸಂಚಾರ ಸಾಧ್ಯತೆ 

ಇಂತಹ ತಪ್ಪು ಮರುಕಳಿಸುವುದಿಲ್ಲ ಎಂದು ಪ್ರಯಾಣಿಕ ಭರವಸೆ ನೀಡಿದ್ದಾಗಿ ಅಧಿಕಾರಿ ಹೇಳಿದರು. ಆಡಿಯೋ ಮತ್ತು ವಿಡಿಯೋ ಸಂದೇಶಗಳ ಮೂಲಕ, ಮೆಟ್ರೋ ಸೇವೆಗಳನ್ನು ಬಳಸುವಾಗ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಬೇಡಿ ಮತ್ತು ತೊಂದರೆಯನ್ನು ಆಹ್ವಾನಿಸಬೇಡಿ ಎಂದು ನಾವು ಪ್ರಯಾಣಿಕರಲ್ಲಿ ಮನವಿ ಮಾಡುತ್ತೇವೆ ಎಂದರು.

ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಬಿಎಂಆರ್​ಸಿಎಲ್ ಪ್ರಕರಣ ದಾಖಲಿಸಿತ್ತು.

‘ಪ್ರೊಫೆಷನಲ್ ಮಿಸ್ಟೇಕ್ ಮೇಕರ್’ ಎಂಬ ಯೂಟ್ಯೂಬರ್​ನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಬಿಎಂಆರ್​ಸಿಎಲ್ ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ