ಬೆಂಗಳೂರು: ಅರಮನೆ ಮೈದಾನದ 4, 5ನೇ ಗೇಟ್‌ ಮುಂಭಾಗದಲ್ಲಿ ಅಗ್ನಿ ಅವಘಡ

ಬೆಂಗಳೂರು ನಗರದ ಅರಮನೆ ಮೈದಾನದ 4 ಮತ್ತು 5ನೇ ಗೇಟ್‌ನ ಮುಂಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಬೆಂಗಳೂರು: ಅರಮನೆ ಮೈದಾನದ 4, 5ನೇ ಗೇಟ್‌ ಮುಂಭಾಗದಲ್ಲಿ ಅಗ್ನಿ ಅವಘಡ
ಬೆಂಕಿಗಾಹುತಿಯಾದ ಕಾರುಗಳು
Edited By: ವಿವೇಕ ಬಿರಾದಾರ

Updated on: Feb 12, 2023 | 5:56 PM

ಬೆಂಗಳೂರು: ನಗರದ ಅರಮನೆ ಮೈದಾನದ (Bengaluru Palace Ground) 4 ಮತ್ತು 5ನೇ ಗೇಟ್‌ನ ಮುಂಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೂರು ಕಾರುಗಳಿಗೆ ಬೆಂಕಿ ತಗುಲಿದ್ದು, 2 ಕಾರು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 1 ಕಾರು ಭಾಗಶಃ ಭಸ್ಮವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮನೆಯ ಭಾಗಶಃ ಗೋಡೆ ಹಾಗೂ ಗೋಡೌನ್ ಬೆಂಕಿಗೆ ಆಹುತಿ

ಮನೆಯ ಭಾಗಶಃ ಗೋಡೆ ಹಾಗೂ ಗೋಡೌನ್ ಬೆಂಕಿಗೆ ಆಹುತಿಯಾಗಿರುವ ಘಟನೆ ಚಾಮರಾಜಪೇಟೆ ವಿಠ್ಠಲನಗರದ ಜಿಂಕೆ ಪಾರ್ಕ್ ಬಳಿ ನಡೆದಿದೆ. ಮೊದಲು ಪ್ಲವರ್ ಡೆಕೊರೇಟ್ ಗೋಡೌನ್​ಗೆ ಬೆಂಕಿ ತಗುಲಿದೆ. ನಂತರ ಬೆಂಕಿ ವ್ಯಾಪಿಸಿ ಮೊದಲ ಮಹಡಿಯ ಪ್ಯಾಸೆಜ್​ನಲ್ಲಿದ್ದ ಗ್ಯಾಸ್​ ಸಿಲಿಂಡರ್​​ಗೆ ತಗುಲಿದೆ. ಪರಿಣಾಮ ಸಿಲಿಂಡರ್​ ಸ್ಪೋಟಗೊಂಡಿದ್ದು, ಮನೆಯ ಭಾಗಶಃ ಗೋಡೆ ಸುಟ್ಟು ಕರಕಲಾಗಿದೆ. ಅಧೃಷ್ಟವಶಾವತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಎರಡು ಅಗ್ನಿ ಶಾಮಕ ವಾಹನ, 20 ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us