ಬಿಬಿಎಂಪಿ ನಿಷೇಧದ ನಡೆವೆಯೂ ಪಿಓಪಿ ಗಣೇಶಗಳ ವಿಸರ್ಜನೆ; ಯಡಿಯೂರು ಕೆರೆ ಫುಲ್, ತ್ಯಾಜ್ಯ ವಿಲೇವಾರಿ ಸರ್ಕಸ್

| Updated By: ಆಯೇಷಾ ಬಾನು

Updated on: Sep 23, 2023 | 1:13 PM

. ಈ ಬಾರಿ ಗಣೇಶ ಹಬ್ಬವನ್ನ ಪರಿಸರ ಸ್ನೇಹಿಯಾಗಿ ಆಚರಿಬೇಕು ಮತ್ತು ಮಣ್ಣಿನಿಂದ ತಯಾರಿಸಿದ ಗಣಪನನ್ನೆ ಕೋರಿಸಬೇಕು ಅಂತ ಬಿಬಿಎಂಪಿ ಸಲಹೆ ನೀಡಿತ್ತು. ಅಲ್ಲದೇ ರಾಸಾಯನಿಕ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಂತಹ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ಹೇರಿದೆ. ಆದರೆ ತಮ್ಮ ತಮ್ಮ ಏರಿಯಾಗಳಲ್ಲಿ ಗಣೇಶ ಮಂಡಳಿಯವರು ಮಾತ್ರ ಕೆಮಿಕಲ್‌ಯುಕ್ತ ಗಣೇಶನನ್ನ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ.

ಬಿಬಿಎಂಪಿ ನಿಷೇಧದ ನಡೆವೆಯೂ ಪಿಓಪಿ ಗಣೇಶಗಳ ವಿಸರ್ಜನೆ; ಯಡಿಯೂರು ಕೆರೆ ಫುಲ್, ತ್ಯಾಜ್ಯ ವಿಲೇವಾರಿ ಸರ್ಕಸ್
ಯಡಿಯೂರು ಕೆರೆ ಫುಲ್, ತ್ಯಾಜ್ಯ ವಿಲೇವಾರಿ ಸರ್ಕಸ್
Follow us on

ಬೆಂಗಳೂರು, ಸೆ.23: ಗಣೇಶ ಹಬ್ಬ ಹಿನ್ನಲೆ ಪರಿಸರ ಸ್ನೇಹಿಯಾಗಿ ಹಬ್ಬ ಆಚರಣೆ ಮಾಡಲು ಬಿಬಿಎಂಪಿ ಸಾರ್ವಜನಿಕರಿಗೆ ಸಲಹೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ರಾಸಾಯನಿಕ ಬಣ್ಣಗಳು, ಥರ್ಮಕೊಲ್ ಹಾಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿ ತಯಾರಿಕೆಗೆ ನಿಷೇಧ ಹೇರಲಾಗಿದೆ. ಆದರೆ ನಗರದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟರ್ ಆಪ್ ಪ್ಯಾರಿಸ್ ಗಣೇಶ್ ಮೂರ್ತಿಗಳನ್ನ ಆಡಳಿತ ಮಂಡಳಿಯವರು ಕೂಡಿಸಿದ್ದು ಗಣೇಶ ವಿಸರ್ಜನೆಗೆ ಗುರುತಿಸಿರುವ ಕೆರೆಗಳಲ್ಲಿ ಪ್ಲಾಸ್ಟರ್ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಕಂಡು ಕಾಣದಂತೆ ಕುಳಿತಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು ಪ್ರತಿ ವರ್ಷದಂತೆ ಈ ವರ್ಷ ಗಣೇಶೋತ್ಸವ ಸಂಭ್ರಮ ಸಡಗರ ಮನೆ ಮಾಡಿದೆ. ಪ್ರತಿ ಏರಿಯಾದ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆಯನ್ನ ಮಾಡಲಾಗಿದೆ. ಈ ಬಾರಿ ಗಣೇಶ ಹಬ್ಬವನ್ನ ಪರಿಸರ ಸ್ನೇಹಿಯಾಗಿ ಆಚರಿಬೇಕು ಮತ್ತು ಮಣ್ಣಿನಿಂದ ತಯಾರಿಸಿದ ಗಣಪನನ್ನೆ ಕೋರಿಸಬೇಕು ಅಂತ ಬಿಬಿಎಂಪಿ ಸಲಹೆ ನೀಡಿತ್ತು. ಅಲ್ಲದೇ ರಾಸಾಯನಿಕ, ಪ್ಲಾಸ್ಟರ್ ಆಫ್ ಪ್ಯಾರಿಸ್ ನಂತಹ ಗಣೇಶ ಮೂರ್ತಿ ಮಾರಾಟಕ್ಕೆ ನಿಷೇಧ ಹೇರಿದೆ. ಆದರೆ ತಮ್ಮ ತಮ್ಮ ಏರಿಯಾಗಳಲ್ಲಿ ಗಣೇಶ ಮಂಡಳಿಯವರು ಮಾತ್ರ ಕೆಮಿಕಲ್‌ಯುಕ್ತ ಗಣೇಶನನ್ನ ಪ್ರತಿಷ್ಠಾಪನೆ ಮಾಡುತ್ತಿದ್ದು, ಮಣ್ಣಿನ ಗಣೇಶ ಕೂರಿಸಿದರೆ ಜನರಿಗೆ ಆಕರ್ಷಕ ಆಗಿ ಕಾಣುವುದಿಲ್ಲ, ಆಕರ್ಷಕವಾಗಿ ಕಾಣಬೇಕಾದರೆ ಬಣ್ಣ ಮಾಡಿದ ರಾಸಾಯನಿಕ ಗಣೇಶ ಮೂರ್ತಿಗಳನ್ನ ಕೂಡಿಸುತ್ತೇವೆ ಎನ್ನುತ್ತಾರೆ ಆಡಳಿತ ಮಂಡಳಿಯವರು.

ಇನ್ನೂ ನಗರದಲ್ಲಿ ಆಡಳಿತ ಮಂಡಳಿಯವರು ಹಾಗೂ ಮನೆಯಲ್ಲಿ ಕೂಡಿಸಿದ ಗಣೇಶ ಮೂರ್ತಿ ವಿಸರ್ಜನೆಗೆ ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡಿಯೂರು ಕೆರೆ, ಹೆಬ್ಬಾಳ ಕೆರೆ ಹಾಗೂ ಇತರೆ ಪ್ರಮುಖ ಕೆರೆ, ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Ganesha Chaturthi 2023: ಚಿತ್ರದುರ್ಗದ ಹಲವೆಡೆ ಪಿಓಪಿ ಗಣೇಶನ ಮೇಲೆ ದಾಳಿ, 12 ಮೂರ್ತಿಗಳು ಜಪ್ತಿ

ಈ ವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯ ವಿವರ ಹೀಗಿದೆ

ಪೂರ್ವ ವಲಯ: 3,878, ಪಶ್ಚಿಮ ವಲಯ: 3,953, ದಕ್ಷಿಣ ವಲಯ: 14,000, ಬೊಮ್ಮನಹಳ್ಳಿ ವಲಯ: 277, ದಾಸರಹಳ್ಳಿ ವಲಯ: 987, ಮಹದೇವಪುರ ವಲಯ: 2,058, ಆರ್.ಆರ್.ನಗರ ವಲಯ: 1,887, ಯಲಹಂಕ ವಲಯ: 1,357 ಒಟ್ಟು 28,397 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. 18-09-23 ನೇ ತಾರೀಖಿನಿಂದ 02-10-23 ರ ವರೆಗೆ ಕೆರೆಗಳ ಬಳಿ ವ್ಯವಸ್ಥೆ ಮಾಡಲಾದ ಕಲ್ಯಾಣಿಗಳಲ್ಲಿ ಗಣೇಶ ವಿಸರ್ಜನೆಗೆ ಅವಕಾಶ ನೀಡಲಾಗಿದೆ. ಆದರೆ ಕಳೆದ ನಾಲ್ಕು ದಿನದ ಅವಧಿಯಲ್ಲೆ ಯಡಿಯೂರು ಕೆರೆಯ ಕಲ್ಯಾಣಿ ವಿಸರ್ಜನಾ ಕೊಳದ ಬಹುಪಾಲು ಭಾಗವು ತುಂಬಿದ್ದು, ನಂತರದ ಗಣೇಶ ಮೂರ್ತಿ ವಿಸರ್ಜನೆಗೆ ಸ್ಥಳಾವಕಾಶ ಇಲ್ಲದಾಗಿದೆ ವಿಸರ್ಜನಾ ಕೊಳದಲ್ಲಿ ತುಂಬಿರುವ ಮಣ್ಣು ಮತ್ತು ಇತರೆ ಗಣೇಶ ಮೂರ್ತಿಗಳ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಹೊಸದಾಗಿ ನೀರು ತುಂಬಿ ಸಾರ್ವಜನಿಕರಿಗೆ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ಕೆ ಅವಕಾಶ  ಮಾಡಿಕೊಡಲಾಗುತ್ತಿದೆ. ಬಹುತೇಕ ಪಿಓಪಿ ಗಣಪ ನೀರಲ್ಲಿ ಕರಗದೇ ಇರೋದು ಪ್ರಮುಖ ಕಾರಣ ಆಗಿದೆ.

ಇನ್ನೂ ರಾಸಾಯನಿಕ ಹಾಗೂ ಪಿಒಪಿ ಗಣಪ ಕೂಡ್ರಿಸದಂತೆ ಸುಪ್ರೀಂ ಕೋರ್ಟ್‌ನಿಂದ ಗೈಡ್ ಲೈನ್ಸ್ ಇದೆ. ಅಲ್ಲದೇ ಬಿಬಿಎಂಪಿ ಕೂಡ ಕೆಮಿಕಲ್ ನಿಂದ ನಿರ್ಮಾಣ ಮಾಡಿದ ಗಣೇಶ ಕೂರಿಸಬಾರದು ಮತ್ತು ಮಾರಾಟಗಾರರು ಮಾರಾಟ ಮಾಡಿದರೆ ದಂಡ ಹಾಕುವುದಾಗಿ ಹೇಳಿತ್ತು. ಆದರೆ ಅದ್ಯಾವುದು ಆಗುತ್ತಿಲ್ಲ. ಪ್ರತಿದಿನ ನೂರಾರು ಕೆಮಿಕಲ್‌ಯುಕ್ತ ಗಣೇಶ ಮೂರ್ತಿ ವಿಸರ್ಜನೆ ಆಗುತ್ತಲೆ‌ ಇದೆ. ಇದರಿಂದ ಜಲಚರಗಳ ಮೇಲೆ ಹಾಗೂ ಮಾನವನ ಮೇಲೂ ಪರಿಣಾಮ‌ ಆಗಬಹುದು, ಈ ಬಗ್ಗೆ ಕ್ರಮಕ್ಕೆ‌ಮುಂದಾಗಬೇಕಾದ ಬಿಬಿಎಂಪಿ ಅಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ‌ಯವರು ಏನು ಮಾಡುತ್ತಿದ್ದಾರೆ ಅಂತ ಪರಿಸರ ಪ್ರೇಮಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಒಟ್ಟಿನಲ್ಲಿ ಕೆಮಿಕಲ್‌ಯುಕ್ತ ಗಣೇಶ ಮೂರ್ತಿಗಳು ಕೆರೆ ಸೇರುತ್ತಿದ್ದು ಇದರಿಂದ ಪರಿಸರ ಮೇಲೆ‌ ಅಡ್ಡ ಪರಿಣಾಮ ಬೀರಬಹುದು. ಇನ್ನಾದರು ಸಂಬಂಧಪಟ್ಟ ಬಿಬಿಎಂಪಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು ಇದಕ್ಕೆ ಬ್ರೇಕ್ ಹಾಕ್ತಾರಾ ಇಲ್ವಾ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ