ಡೆಂಘೀ ಕೇಸ್​ ಹೆಚ್ಚಳ ಬಳಿಕೆ ಎಚ್ಚೆತ್ತ ಸರ್ಕಾರ: ಪ್ರತಿ ಶುಕ್ರವಾರ ಡೆಂಘೀ ಬಗ್ಗೆ ಜಾಗೃತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 25, 2024 | 6:25 PM

ರಾಜ್ಯದಲ್ಲಿ ಡೆಂಘೀ ಪ್ರಕರಣ ಹೆಚ್ಚಳ ಕುರಿತು ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್, ‘ ಜನರು ನೀರಿನ ಬಗ್ಗೆ ಹೆಚ್ಚು ಗಮನಹರಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಟೆಸ್ಟಿಂಗ್ ಮಾಡ್ತಿದ್ದೇವೆ. ಜೊತೆಗೆ ಪ್ರತಿ ಶುಕ್ರವಾರ ಇಡೀ ರಾಜ್ಯದಲ್ಲಿ‌ ನಮ್ಮ‌ ಸಿಬ್ಬಂದಿ ಜನರಿಗೆ ಡೆಂಘೀ ಬಗ್ಗೆ ಜಾಗೃತಿ ಮೂಡಿಸುತ್ತಾರೆ ಎಂದು ಹೇಳಿದರು.

ಡೆಂಘೀ ಕೇಸ್​ ಹೆಚ್ಚಳ ಬಳಿಕೆ ಎಚ್ಚೆತ್ತ ಸರ್ಕಾರ: ಪ್ರತಿ ಶುಕ್ರವಾರ ಡೆಂಘೀ ಬಗ್ಗೆ ಜಾಗೃತಿ
ಡೆಂಘೀ ಕೇಸ್​ ಹೆಚ್ಚಳ ಬಳಿಕೆ ಎಚ್ಚೆತ್ತ ಸರ್ಕಾರ
Follow us on

ಬೆಂಗಳೂರು, ಜೂ.25: ರಾಜ್ಯದ ಹೆಚ್ಚುತ್ತಿರುವ ಡೆಂಘೀ ಸಂಬಂಧ ಇಂದು(ಮಂಗಳವಾರ) ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಈ ವೇಳೆ ಡೆಂಘೀ(Dengue) ಹೆಚ್ಚಾಗದಂತೆ ಕ್ರಮ ವಹಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್, ‘ ಜನರು ನೀರಿನ ಬಗ್ಗೆ ಹೆಚ್ಚು ಗಮನಹರಿಸಬೇಕು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಟೆಸ್ಟಿಂಗ್ ಮಾಡ್ತಿದ್ದೇವೆ. ಡೆಂಘೀ ನಿಯಂತ್ರಿಸಲು BBMP, ಆರೋಗ್ಯ ಇಲಾಖೆ ಸಿದ್ಧವಾಗಿದೆ. ಜೊತೆಗೆ ಪ್ರತಿ ಶುಕ್ರವಾರ ಇಡೀ ರಾಜ್ಯದಲ್ಲಿ‌ ನಮ್ಮ‌ ಸಿಬ್ಬಂದಿ ಜನರಿಗೆ ಡೆಂಘೀ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಫಾಗಿಂಗ್​ ಮಾಡುವುದರಿಂದ ದೊಡ್ಡ ಪರಿಣಾಮ ಆಗಲ್ಲ, ಸ್ಪ್ರೇ ಮಾಡುವುದರಿಂದ ನಿಯಂತ್ರಣ ಆಗುತ್ತದೆ ಎಂದರು.

ರಾಜ್ಯದಲ್ಲಿ 5374 ಡೆಂಘೀ ಪ್ರಕರಣಗಳು ಪತ್ತೆ, ಐವರು ಸಾವು

ರಾಜ್ಯದಲ್ಲಿ ಒಟ್ಟು 5,374 ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಇದುವರೆಗೂ ಐವರು ಸಾವನ್ನಪ್ಪಿದ್ದಾರೆ. ಕೇರಳ – 8ಸಾವಿರ,
ತಮಿಳುನಾಡು – 5,275 ಡೆಂಘೀ ಪ್ರಕರಣಗಳಿವೆ. ಡೆಂಘೀ ಜ್ವರದಿಂದ ಸಾವುಗಳು ಸಂಭವಿಸಬಾರದು ಎಂಬುದು ಆರೋಗ್ಯ ಇಲಾಖೆಯ ಗುರಿಯಾಗಿದ್ದು, ಕಳೆದ ಬಾರಿಗಿಂತ ಈಗ ಬಾರಿ ಶೇ.40 ರಷ್ಟು ಟೆಸ್ಟಿಂಗ್ ಹೆಚ್ಚು ಮಾಡಲಾಗಿದೆ. ಹೀಗಾಗಿ ಡೆಂಘೀ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ಹೊಲಿಸಿದತೆ ರಾಜ್ಯದಲ್ಲಿ ಡೆಂಘೀ ಕಂಟ್ರೂಲ್ ನಲ್ಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಡೆಂಘೀ ತಡೆಗಟ್ಟಲು ಆಸ್ಪತ್ರೆ, ಪಾಲಿಕೆಗಳಿಗೆ ಸೂಚನೆ ನೀಡಿದ್ದೇವೆ: ಶರಣ ಪ್ರಕಾಶ್​​​, ಗುಂಡೂರಾವ್​

ಬೆಂಗಳೂರಿನಲ್ಲಿ‌ ಡೆಂಘೀ ಆಂತಕ ಹೆಚ್ಚಾಗಿದ್ದು, ಕಳೆದ 20 ದಿನದಲ್ಲಿ ಸಾವಿರಕ್ಕೂ ಅಧಿಕ ಡೆಂಘೀ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಕಳೆದ ವರ್ಷಕ್ಕಿಂತ ಡೆಂಘೀ ಪಾಸಿಟಿವ್ ಶೇ. 40ರಷ್ಟು ಹೆಚ್ಚಳವಾಗಿದೆ. ಡೆಂಘೀ ಜೊತೆಗೆ ವೈರಲ್ ಫೀವರ್ ಸಹ ಹೆಚ್ಚಿದ್ದು, ಜನರು ಆತಂಕದಲ್ಲಿದ್ದಾರೆ. ಇನ್ನು ಮಳೆಯ ಕಣ್ಣಾಮುಚ್ಚಾಲೆ, ಶೀತಗಾಳಿಯಿಂದ ಈ ವೈರಲ್ ಫೀವರ್ ಹೆಚ್ಚಳವಾಗಿದೆ. ಜನವರಿ 1 ರಿಂದ 6 ತಿಂಗಳಲ್ಲಿ ಜೂನ್ 20ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2,457 ಡೆಂಘೀ ಪ್ರಕರಣ ದಾಖಲಾಗಿದ್ದರೆ, ಜನವರಿಯಿಂದ ಇಲ್ಲಿವರೆಗೆ 109 ಜನರಲ್ಲಿ ಚಿಕೂನ್‌ ಗುನ್ಯಾ ಹಾಗೂ ಐವರಲ್ಲಿ ಮಲೇರಿಯಾ ಪತ್ತೆಯಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಲಯವಾರು ಡೆಂಘೀ ಪ್ರಕರಣಗಳ ಅಂಕಿ ಸಂಖ್ಯೆ(ಜೂ 1ರಿಂದ ಜೂ 20)

                                        ವಲಯ                                ಡೆಂಘೀ ಪ್ರಕರಣ
                                  ಬೊಮ್ಮನಹಳ್ಳಿ                                          113
                                   ದಾಸರಹಳ್ಳಿ                                            6
                                ಪೂರ್ವವಲಯ                                           236
                                 ಮಹಾದೇವಪುರ                                          328
                                        ದಕ್ಷಿಣ                                           113
                                    ಪಶ್ಚಿಮ                                            77
                                  ಯಲಹಂಕ                                            90
                                       ಒಟ್ಟು                                          1,046

ಈ ಕುರಿತು ಎಚ್ಚೆತ್ತ ಸರ್ಕಾರ, ಡೆಂಘೀ ಪ್ರಕರಣಗಳ ತಡೆಗೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ