ಪೊಲೀಸ್​ ಇನ್ಸ್​ಪೆಕ್ಟರ್​ ಎಂದು ನಂಬಿಸಿ ವಂಚನೆ ಆರೋಪ; ಬೆಸ್ಕಾಂ ಅಧಿಕಾರಿ​​ ಬಂಧನ

ಇತ್ತೀಚೆಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬುದ್ದಿವಂತರೇ ಇದರಲ್ಲಿ ಎಡವುತ್ತಿರುವುದು ದುರಂತ. ಆದರೆ, ಇಲ್ಲೊಬ್ಬ ಬೆಸ್ಕಾಂ ಸಹಾಯಕ ಇಂಜಿನಿಯರ್, ತಾನೊಬ್ಬ ಪೊಲೀಸ್​ ಅಧಿಕಾರಿ ಎಂದು ರೈತರು ಸೇರಿದಂತೆ ಹಲವರಿಗೆ ಲಕ್ಷಾಂತರ ರೂಪಾಯಿಯನ್ನು ವಂಚನೆ ಮಾಡಿದ ಆರೋಪ ಬೆಂಗಳೂರಿನಲ್ಲಿ ಕೇಳಿಬಂದಿದೆ. ಇದೀಗ ಆರೋಪಿಯನ್ನು ಕೂಡ ಬಂಧಿಸಲಾಗಿದೆ.

ಪೊಲೀಸ್​ ಇನ್ಸ್​ಪೆಕ್ಟರ್​ ಎಂದು ನಂಬಿಸಿ ವಂಚನೆ ಆರೋಪ; ಬೆಸ್ಕಾಂ ಅಧಿಕಾರಿ​​ ಬಂಧನ
ಬಂಧಿತ ಆರೋಪಿ
ಬಿ ಮೂರ್ತಿ, ನೆಲಮಂಗಲ Edited By: ಕಿರಣ್ ಹನುಮಂತ್​ ಮಾದಾರ್

Updated on: May 17, 2024 | 4:11 PM

ಬೆಂಗಳೂರು, ಮೇ.17: ಪೊಲೀಸ್​ ಇನ್ಸ್​ಪೆಕ್ಟರ್​ ಎಂದು ನಂಬಿಸಿ ವಂಚನೆ ಮಾಡಿದ ಆರೋಪದ ಮೇಲೆ ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್​ ಗಂಗಾಧರ್ ಎಂಬುವವರನ್ನು ಬೆಂಗಳೂರಿನ(Bengaluru) ಪೀಣ್ಯ ಪೊಲೀಸರು ಬಂಧಿಸಿದ್ದಾರೆ.  ಕೆಐಡಿಬಿಯಿಂದ ರೈತರಿಗೆ ಹಣ ಕೊಡಿಸುವ ನೆಪದಲ್ಲಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಹಣ ಪೀಕುತ್ತಿದ್ದ. ಜೊತೆಗೆ ತನ್ನ KA 09 MF 0656 ಸಂಖ್ಯೆಯ ರೆನಾಲ್ಟ್ ಕ್ವಿಡ್ ಕಾರಿಗೆ ಪೊಲೀಸ್ ಜಾಗೃತದಳದ ಬೋರ್ಡ್ ಅಳವಡಿಕೆ ಮಾಡಿದ್ದ.

ಹಲವು ವರ್ಷಗಳಿಂದ ವಂಚನೆ ಆರೋಪ

ಪೊಲೀಸ್ ಜಾಗೃತದಳದ ಫಲಕ ಅಳವಡಿಸಿದ್ದ ಹಿನ್ನಲೆ ಹೆದ್ದಾರಿ ಟೋಲ್​ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ದೊರಕುತ್ತಿತ್ತು. ಇನ್ನು ಆತನನ್ನು ಪ್ರಶ್ನಿಸಿದರೆ ಪೊಲೀಸ್​ ಇನ್ಸ್​ಪೆಕ್ಟರ್​ ಐಡಿ ತೋರಿಸುತ್ತಿದ್ದ​. ಬೆಸ್ಕಾಂ ಇಲಾಖೆ ನೀಡಿದ್ದ ವಾಕಿಟಾಕಿಯನ್ನು ಇಲ್ಲಿ ದುರ್ಬಳಕೆ ಮಾಡಿಕೊಂಡ ಆರೋಪವಿದೆ. ಇತ ಹಲವು ವರ್ಷಗಳಿಂದ ಇದೇ ರೀತಿ ಹಣ ಪಡೆದು ವಂಚಿಸುತ್ತಿದ್ದ ಹಿನ್ನಲೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಸರ್ಕಾರಿ ಕೆಲಸ ಕೊಡಿಸುವುದಾಗಿ ಸಿಐಡಿ ಅಧಿಕಾರಿಗಳಿಂದಲೇ 40 ಲಕ್ಷ ರೂ. ವಂಚನೆ: ಕಾಂಗ್ರೆಸ್​ನ ಪಾಲು ಎಷ್ಟು ಎಂದ ಬಿಜೆಪಿ 

ಬ್ಯಾಂಕ್​ನಿಂದ  ಡ್ರಾ ಮಾಡಿಕೊಂಡು ಹೋಗುವಾಗ ಕಳ್ಳತನ

ವಿಜಯಪುರ: ತಾಳಿಕೋಟೆ ಪಟ್ಟಣದ ಯೂನಿಯನ್ ಬ್ಯಾಂಕ್​ ಬಳಿ ನಿವೃತ್ತ ನೌಕರನ ಗಮನ ಬೇರೆಡೆ ಸೆಳೆದು ಬರೊಬ್ಬರಿ 2.20 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ್ದಾರೆ. ನಿವೃತ್ತ ನೌಕರ ನಾಗಪ್ಪ ಅಮರಪ್ಪ ಕೆಂಭಾವಿ ಹಣ ಕಳೆದುಕೊಂಡವರು. ಬ್ಯಾಂಕ್​ನಲ್ಲಿ ಹಣ ಡ್ರಾ ಮಾಡಿಕೊಳ್ಳುವಾಗ ನಾಗಪ್ಪರನ್ನು ಹಿಂಬಾಲಿಸಿದ್ದ ಖದೀಮರು, ಬ್ಯಾಂಕ್ ಹೊರಗಡೆ ಬಂದು ನಿಂತಾಗ ಗಮನ ಬೇರೆಡೆ ಸೆಳೆದು ಹಣ ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದಾರೆ. ಈ ಕುರಿತು ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Fri, 17 May 24

ಬಿ ಮೂರ್ತಿ, ನೆಲಮಂಗಲ

ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಬೀರಯ್ಯನಪಾಳ್ಯದ ಮೂರ್ತಿ.ಬಿ.ನಾನು ಓದಿದ್ದು ಪಿಯುಸಿ,ಹೆಸರಘಟ್ಟ ಫಿಲ್ಮ್ ಆ್ಯಂಡ್ ಟಿವಿ ಕಾಲೇಜಿನಲ್ಲಿ ಕೆಲಸಗಾರನಾಗಿ ಕ್ಯಾಮರಾ ಕಲಿತು ದಿನಪತ್ರಿಕೆಗಳಿಗೆ ಪೋಟೋ ಕಳಿಸುವ ಕೆಲಸ ಬಳಿಕ 17ವರ್ಷದ ಹಿಂದೆ ನೇರವಾಗಿ ಟಿವಿನೈ ನಲ್ಲಿ ಕ್ಯಾಮರಾಮೆನ್ ಕೆಲಸಕ್ಕೆ ಸೇರಲಾಯಿತು. ಕಳೆದ 6ವರ್ಷದ ಹಿಂದೆ ಇದ್ದಕ್ಕಿದ್ದಂತೆ ಕ್ರೈಂ ಸಿಟಿ,ರಕ್ತಮಂಗಲ ಅಂತೆಲ್ಲ ಖ್ಯಾತಿ ಪಡೆದಿದ್ದ ನೆಲಮಂಗಲಕ್ಕೆ ಕ್ಯಾಮರಾ ಮ್ಯಾನ್ ಹಾಗೂ ವರದಿಗಾರನಾಗಿ ಕೆಲಸ ಮಾಡುವ ಅವಕಾಶ ನಮ್ಮ ಸೀನಿಯರ್ ಗಳಿಂದ ಕೂಡಿ ಬಂತು,ತನಗಿಂತ ಚನ್ನಾಗಿ ಕೆಲಸ ಮಾಡುವ ಕ್ಯಾಮರಾ ಮ್ಯಾನ್ ಗಳು ಇದ್ದರು ನನಗೆ ಅವಕಾಶ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ,ನಾನು ಈ ಭಾಗದಲ್ಲಿ ಬಂದಾಗಿನಿಂದ ರೌಡಿಶೀಟರಗಳ ಉಪಟಳ ಕಂಟ್ರೋಲ್ಗೆ ಬಂದಿದೆ,ಯಾವುದೇ ಒಂದು ಚಿಕ್ಕದಾಗಲಿ ದೊಡ್ಡ ಮಟ್ಟದ ಕ್ರೈಂ ಅದ್ರೂ ಮೊದಲು ನಮ್ಮಲ್ಲಿ ನ್ಯೂಸ್ ಕವರ್ ಆಗಿರುತ್ತೆ,

Loading...
Unable to load recommendations.
Follow Us