Karnataka Rains: ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮೂರು ದಿನ ಭಾರೀ ಮಳೆ

|

Updated on: Apr 25, 2023 | 5:43 PM

ಕರ್ನಾಟಕದಲ್ಲಿ ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಹಾಗೂ ಬೆಂಗಳೂರು ನಗರದಲ್ಲಿ ಮುಂದಿನ ಐದು ದಿನಗಳ ವರೆಗೆ ಮಳೆಯಾಗವು ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Karnataka Rains: ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮೂರು ದಿನ ಭಾರೀ ಮಳೆ
ಕರ್ನಾಟಕ ಮಳೆ, ಬೆಂಗಳೂರು ಮಳೆ (ಸಾಂದರ್ಭೀಕ ಚಿತ್ರ)
Follow us on

ಬೆಂಗಳೂರು: ಸಮುದ್ರಮಟ್ಟದಲ್ಲಿ ಟ್ರಫ್ ಉಂಟಾಗಿರುವ ಹಿನ್ನೆಲೆ ರಾಜ್ಯದಲ್ಲಿ ಇಂದು ರಾತ್ರಿಯಿಂದ ಮೂರು ದಿನಗಳ ಕಾಲ ಭಾರೀ ಮಳೆಯಾಗುವ (Karnataka Rains) ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ ವೇಳೆ ಬೆಂಗಳೂರು ನಗರದಲ್ಲಿ 5 ದಿನಗಳ ಮಳೆಯಾಗುವ (Bengaluru Rains) ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಇಂದು ನಗರದಲ್ಲಿ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳಗೆ ಮಳೆಯಾಗುವ ಸಾಧ್ಯಾತೆ ಇದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಮಳೆಯ ಅಲರ್ಟ್ ನೀಡಲಾಗಿದ್ದು, ಚಾಮರಾಜನಗರ, ಚಿಕ್ಕಮಗಳೂರು ಕೊಡಗು, ಜಿಲ್ಲಿಗೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಹಾಗಿದ್ದರೆ ಯಾವೆಲ್ಲಾ ಪ್ರದೇಶದಲ್ಲಿ ಮಳೆಯಾಗಲಿದೆ? ಇಲ್ಲಿದೆ ಮಾಹಿತಿ.

ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರು ನಗರದಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಇಂದು ದಕ್ಷಿಣ ಒಳನಾಡಿಗೆ ಹೆಚ್ಚಿನ ಮಳೆಯಾಗುವ ಸಾಧ್ಯಾತೆ ಇದೆ. ದಕ್ಷಿಣ ಒಳನಾಡಿನಾ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡುಗು, ಮಂಡ್ಯ, ಚಿಕ್ಕಬಳ್ಳಪುರ, ಚಿಕ್ಕಮಗಳೂರು, ಮೈಸೂರು, ರಾಮಾನಗರ, ಕೋಲಾರ, ಮಳೆಯಾಗುವ ಸಾಧ್ಯಾತೆ ಇದ್ದು, ಚಾಮರಾಜನಗರ, ಚಿಕ್ಕಮಗಳೂರು ಕೊಡಗು, ಜಿಲ್ಲಿಗೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ: Karnataka Weather: ಮುಂದಿನ 2 ದಿನ ಬೆಂಗಳೂರು ಸೇರಿ ರಾಜ್ಯದ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

ಇನ್ನು ಉತ್ತರ ಒಳನಾಡಿಗೆ ಇಂದು ಸಾಧಾರಣ ಮಳೆಯಾಗುವ ಸಾಧ್ಯಾತೆ ಇದ್ದು, ಬೆಳಗಾವಿ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ, ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಕಾರಾವಾಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಿಗೆ ಮಳೆಯಾಗುವ ಸಾಧ್ಯಾತೆ ಇದೆ. ಇನ್ನು ಬೆಂಗಳೂರಿಗೆ ಇಂದಿನಿಂದ 5 ದಿನ ಮಳೆ ಇರಲಿದೆ. ಇಂದು ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ನಂತರ ಮಳೆಯಾಗುವ ಸಾಧ್ಯಾತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು ನಗರದ ಪಶ್ಚಿಮ ಭಾಗದಲ್ಲಿ ಗುಡುಗು ಮಿಂಚು ಸಹಿತ  ಧಾರಾಕಾರ ಮಳೆ

ಬೇಗೂರು, ಕೋಟೆಕೆರೆ, ಕುರಹಟ್ಟಿ, ಹಿರಿಕಟ್ಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ನಂಜನಗೂಡು ಮತ್ತು ಗುಂಡ್ಲುಪೇಟೆ ನಡುವೆ ಬಿರುಗಾಳಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:43 pm, Tue, 25 April 23