ಮಹಾರಾಣಿ‌ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ “ಟೆಕ್ ವಿಸ್ತಾರ” ಆಯೋಜನೆ, ಗಮನ ಸೆಳೆದ ಎಐ ರೋಬೋ‌

| Updated By: ಆಯೇಷಾ ಬಾನು

Updated on: Jul 18, 2023 | 3:15 PM

ಬೆಂಗಳೂರು ಮಹಾರಾಣಿ ವಿಶ್ವ ವಿದ್ಯಾನಿಲಯದ ಬಿಎಸ್‌ಸಿ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸಿ ವಿಭಾಗದಿಂದ "ಟೆಕ್ ವಿಸ್ತಾರ" ಪ್ರಾಜೆಕ್ಟ್ ಪ್ರದರ್ಶನವನ್ನ ಆಯೋಜಿಸಲಾಗಿತ್ತು.

ಮಹಾರಾಣಿ‌ ಕ್ಲಸ್ಟರ್ ಯೂನಿವರ್ಸಿಟಿಯಲ್ಲಿ ಟೆಕ್ ವಿಸ್ತಾರ ಆಯೋಜನೆ, ಗಮನ ಸೆಳೆದ ಎಐ ರೋಬೋ‌
ಟೆಕ್ ವಿಸ್ತಾರ
Follow us on

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಹಾರಾಣಿ‌ ಕ್ಲಸ್ಟರ್ ವಿಶ್ವ ವಿದ್ಯಾನಿಲಯದಲ್ಲಿ(Maharani Cluster University) ಜುಲೈ 17ರ ಸೋಮವಾರದಂದು ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್‌ಇಂಟಲಿಜೆನ್ಸಿ ವಿಭಾಗದಿಂದ “ಟೆಕ್ ವಿಸ್ತಾರ” ಪ್ರಾಜೆಕ್ಟ್ ಪ್ರದರ್ಶನವನ್ನ ಆಯೋಜಿಸಲಾಗಿತ್ತು(Techvistara). ವಿದ್ಯಾರ್ಥಿಗಳು ವಿವಿಧ ರೀತಿಯ ವಸ್ತುಗಳನ್ನ ತಯಾರಿಸಿ ಪ್ರದರ್ಶನ ಮಾಡಿದ್ರು, ಅದರಲ್ಲೂ ರೊಬೋಟಿಕ್ ತಂತ್ರಜ್ಞಾನ ಬಳಸಿ ಎಐ ಹೆಸರಿನ ರೋಬೋ‌ ಪ್ರದರ್ಶನದ ಕೇಂದ್ರ ಬಿಂದುವಾಗಿತ್ತು(AI Robot).

ಹೌದು ಬೆಂಗಳೂರು ಮಹಾರಾಣಿ ವಿಶ್ವ ವಿದ್ಯಾನಿಲಯದ ಬಿಎಸ್‌ಸಿ ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸಿಯು 2020 ರಲ್ಲಿ‌ 68 ಮಕ್ಕಳಿಂದ ಆರಂಭಗೊಂಡಿದ್ದು ಪ್ರಸ್ತುತ 2023ನೇ ಸಾಲಿನಲ್ಲಿ 160 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲೈಸೇಷನ್‌ನಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಮೆಡಿಕಲ್, ಡಿಫೆನ್ಸ್ ಸೇರಿದಂತೆ ಎಲ್ಲ ಫಿಲ್ಡ್‌ಗಳಲ್ಲಿ ಇದಕ್ಕೆ ಪ್ರಮುಖ ಪಾತ್ರವಿದ್ದು ತುಂಬಾ ಜಾಬ್ ಅಪಾರ್ಚುನಿಟಿ ಇದೆ. ಪೈಥಾನ್ ಪ್ರೋಗ್ರಾಮಿಂಗ್ ಇದ್ದು ಅದಕ್ಕೆ ಸ್ಕ್ರಿಪ್ಟ್ ಬರೆದು ಮಶಿನ್‌ಗೆ ಟ್ರೈನ್ ಅಪ್ ಮಾಡಿದಾಗ ಅದನ್ನೆ ಡಿಸ್ಪ್ಲೇ ಮಾಡುತ್ತೆ. 16 ಜನ ಟೀಚರ್ ಸ್ಟಾಪ್ ಇದ್ದು, ವಿವಿಧ ಇಂಜಿನಿಯರಿಂಗ್ ಕಾಲೇಜ್‌ನಿಂದ ಬೇರೆ ಆರ್ಟಿಫಿಸಿಯಲ್ ಇಂಟಲಿಜೆನ್ಸಿ ಮತ್ತು ಪೈಥಾನ್ ಪ್ರೋಗ್ರಾಂ ನಲ್ಲಿ ಎಕ್ಸ್‌ಪರ್ಟ್ ಗಳನ್ನ ಕರೆಯಿಸಿ ಟ್ರೈನ್ ಅಪ್ ಮಾಡಿದ್ದೇವೆ. ಒಂದೂವರೆ ತಿಂಗಳ ಪ್ರಯತ್ನದಿಂದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ ಎಂದು ಡಾಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್‌ ಇಂಟಲಿಜೆನ್ಸಿ ವಿಭಾಗದ ಚೆರಮನ್ ಡಾ. ಅಶೋಕ್ ಆರ್ ಬಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ವಿಶ್ವ ಯುವ ಕೌಶಲ್ಯ ದಿನದಂದು ಕೃತಕ ಬುದ್ಧಿಮತ್ತೆ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ 

ಇನ್ನೂ ರೋಬೋಟಿ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳು ಎಐ ರೋಬೋವನ್ನ ತಯಾರಿಸಿದ್ದು 70 ಸಾವಿರಗಳ ವರೆಗೆ ಖರ್ಚು ಮಾಡಿ ರೋಬೋ ತಯಾರು ಮಾಡಿದ್ದಾರೆ. ಮಹಾರಾಣಿ ಕಾಲೇಜಿಗೆ ಹಳ್ಳಿ ಭಾಗದಿಂದ ವಿದ್ಯಾರ್ಥಿಗಳು ಬರುತ್ತಾರೆ ಅವರಿಗೆ ಕೂಡ ಈ ತರಹದ ವಿದ್ಯಾಭ್ಯಾಸ ಸಿಗಬೇಕು ಅಂತ ಈ ಕೋರ್ಸ್ ಮಾಡಿದ್ದೇವೆ. ಈ ಬಾರಿ ಎಕ್ಸಿಬಿಷನ್​ಗೆ ಮಕ್ಕಳೆ ಅತಿ ಉತ್ಸಾಹದಿಂದ ರೋಬೋ ಮಾಡ್ತೀವಿ ಅಂತ ರೋಬೋ ಮಾಡಿದ್ದಾರೆ. ಈ ರೋಬೋ ತಯಾರು ಮಾಡೋ ಐಡಿಯಾ ಯಾಕೆ ಬಂತು ಅಂತ ಕೇಳಿದರೆ, ಕೊರೊನಾ ಸಂದರ್ಭದಲ್ಲಿ‌ ನಮ್ಮ ಅಜ್ಜಿಗೆ ಕೊರೊನಾ ಆಗಿತ್ತು. ಆಗ ನನಗೆ ಅವರನ್ನ ನೋಡಿಕೊಳ್ಳಲಿಕ್ಕೆ ಆಗಲಿಲ್ಲ, ಒಂದು ಟ್ಯಾಬ್ಲೆಟ್ ತಪ್ಪಿದ್ದರಿಂದ ಲಿವರ್ ಡ್ಯಾಮೇಜ್ ಆಗಿ ತೀರಿಕೊಂಡರು. ಅದೇ ಈ ತರಹ ರೋಬೋಟೊ ಇದ್ದರೆ ಅವರನ್ನ ಉಳಿಸಿಕೊಳ್ಳಬಹುದಿತ್ತು. ಹಾಗಾಗಿ ನನಗೆ ಆಗಿರೋ ತರಹ ಬೇರೆಯವರಿಗೆ ಆಗಬಾರದು ಎನ್ನುವ ಉದ್ದೇಶದಿಂದ ಈ ರೋಬೋ ಮಾಡಿದ್ದೇನೆ ಎಂದು ವಿದ್ಯಾರ್ಥಿನಿಯೊಬ್ಬರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಡಾಟಾ ಸೈನ್ಸ್ ಹಾಗೂ ಆರ್ಟಿಫಿಶೀಯಲ್ ಇಂಟಲಿಜೆನ್ಸಿ ಎನ್ನುವುದು ಪ್ರಸ್ತುತ ಡಿಜಿಟಲೈಸೇಷನ್ ಯುಗದಲ್ಲಿ ಎಲ್ಲ ವಿಭಾಗಳಲ್ಲಿ ಉಪಯೋಗಕ್ಕೆ ಬರುವಂತಹದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇದೇ ರೀತಿ‌ ಹೊಸ ಹೊಸ ಅನ್ವೇಷಣೆ ಮಾಡಿ ಪರಿಚಯಿಸಲಿ ಅನ್ನೋದೆ ನಮ್ಮ ಆಶಯ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ