ಹೊಸಕೋಟೆ ಪಟ್ಟಣಕ್ಕೆ ಮೆಟ್ರೋ ರೈಲು ಸಂಚಾರ ವಿಸ್ತರಿಸಲು ಸಚಿವ ಎಂಟಿಬಿ ನಾಗರಾಜ್ ಮನವಿ

| Updated By: sandhya thejappa

Updated on: Aug 29, 2021 | 2:36 PM

ಹೊಸಕೋಟೆ ಪಟ್ಟಣ ಬೆಂಗಳೂರು ಹೊರವಲಯದಲ್ಲಿ ಅಂದರೆ ಬಿಬಿಎಂಪಿ ವ್ಯಾಪ್ತಿಯಿಂದ 10 ಕಿಲೋಮೀಟರ್ ದೂರದಲ್ಲಿದೆ ಅಷ್ಟೇ. ಭಾರತದ ಸಿಲಿಕಾನ್ ವ್ಯಾಲಿ ವೈಟ್ ಫೀಲ್ಡ್ ಐಟಿ ಪಾರ್ಕ್​ಗೆ ಹೊಸಕೋಟೆ ಪಟ್ಟಣ ತೀರ ಹತ್ತಿರದಲ್ಲಿದೆ.

ಹೊಸಕೋಟೆ ಪಟ್ಟಣಕ್ಕೆ ಮೆಟ್ರೋ ರೈಲು ಸಂಚಾರ ವಿಸ್ತರಿಸಲು ಸಚಿವ ಎಂಟಿಬಿ ನಾಗರಾಜ್ ಮನವಿ
ಬಸವರಾಜ ಬೊಮ್ಮಾಯಿ ಮುಖಾಂತರ ಮನವಿ ಸಲ್ಲಿಸಿದ ಸಚಿವ ಎಂಟಿಬಿ ನಾಗರಾಜ್
Follow us on

ಬೆಂಗಳೂರು: ಹೊಸಕೋಟೆ ಪಟ್ಟಣಕ್ಕೆ ಮೆಟ್ರೋ ರೈಲು ಸಂಚಾರ ವಿಸ್ತರಿಸುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇಂದು (ಆಗಸ್ಟ್ 29) ನಡೆದ ಮೈಸೂರು-ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮುಖ್ಯಮಂತ್ರಿಗಳ ಮೂಲಕ ಸಚಿವ ಎಂಟಿಬಿ ನಾಗರಾಜ್ ಮನವಿ ಸಲ್ಲಿಸಿದ್ದಾರೆ.

ಹೊಸಕೋಟೆ ಪಟ್ಟಣ ಬೆಂಗಳೂರು ಹೊರವಲಯದಲ್ಲಿ ಅಂದರೆ ಬಿಬಿಎಂಪಿ ವ್ಯಾಪ್ತಿಯಿಂದ 10 ಕಿಲೋಮೀಟರ್ ದೂರದಲ್ಲಿದೆ ಅಷ್ಟೇ. ಭಾರತದ ಸಿಲಿಕಾನ್ ವ್ಯಾಲಿ ವೈಟ್ ಫೀಲ್ಡ್ ಐಟಿ ಪಾರ್ಕ್​ಗೆ ಹೊಸಕೋಟೆ ಪಟ್ಟಣ ತೀರ ಹತ್ತಿರದಲ್ಲಿದೆ. ವೈಟ್ ಫೀಲ್ಡ್ ಸುತ್ತಮುತ್ತ ನೂರಾರು ಐಟಿ ಕಂಪನಿಗಳು ಬೀಡು ಬಿಟ್ಟಿವೆ. ವಾಣಿಜ್ಯ ಕಟ್ಟಡಗಳು, ಬೃಹತ್ ಕಟ್ಟಡಗಳಿದ್ದು, ಲಕ್ಷಾಂತರ ಅಪಾರ್ಟ್​ಮೆಂಟ್​ಗಳು ಇವೆ. ಪರಿಣಾಮ ಹೊಸಕೋಟೆ ಪಟ್ಟಣದ ಸುತ್ತಮುತ್ತ ತೀವ್ರ ಸಂಚಾರದ ಒತ್ತಡ ನಿರ್ಮಾಣವಾಗಿದೆ.

ಅಲ್ಲದೆ, ಹೊಸಕೋಟೆ ಪಟ್ಟಣವು ಮಾಲೂರು, ನಂದಗುಡಿ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಹೆಬ್ಬಾಗಿಲು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿ ರಸ್ತೆಯು ಹೊಸಕೋಟೆ ತಾಲೂಕಿನ ಮೂಲಕ ಹಾದು ಹೋಗುತ್ತದೆ. ಹೊಸಕೋಟೆ ಪಟ್ಟಣದಲ್ಲಿನ ಜೀವನ ಮಟ್ಟ ಬೆಂಗಳೂರು ನಗರಕ್ಕಿಂತ ಕಡಿಮೆ ಇರುವುದರಿಂದ ಬೆಂಗಳೂರಿನ ಉದ್ಯೋಗಿಗಳು ಬೆಂಗಳೂರು ಹೊರವಲಯ ಹಾಗೂ ಹೊಸಕೋಟೆ ಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅವರು ಬೆಂಗಳೂರಿಗೆ ತೆರಳಲು ಮೆಟ್ರೋ ರೈಲು ಸಂಚಾರ ಕಲ್ಪಿಸಿದರೆ ರಸ್ತೆ ಮಾರ್ಗದ ಮೇಲೆ ಇರುವ ಅತೀ ದೊಡ್ಡ ಒತ್ತಡವನ್ನು ತಪ್ಪಿಸಬಹುದು. ಹೀಗಾಗಿ ಮೆಟ್ರೊ ರೈಲು ಮಾರ್ಗವನ್ನು ಹೊಸಕೋಟೆ ಪಟ್ಟಣದವರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ

ರಾಮನಗರ, ರಾಜಾನುಕುಂಟೆ, ಮಾಗಡಿವರೆಗೆ ಮೆಟ್ರೋ ವಿಸ್ತರಿಸುವ ಚಿಂತನೆ ಇದೆ; ಸಿಎಂ ಬಸವರಾಜ ಬೊಮ್ಮಾಯಿ

Namma Metro: ಮೆಟ್ರೋ ವಿಸ್ತರಿತ ಮಾರ್ಗಕ್ಕೆ ಹಸಿರು ನಿಶಾನೆ; ಮಹಿಳಾ ಲೋಕೋಪೈಲಟ್​​ ಮೂಲಕ ನೂತನ ಮಾರ್ಗಕ್ಕೆ ಚಾಲನೆ

(MTB Nagaraj has appealed for the expansion of Metro rail to Hosakote)