ಬೆಂಗಳೂರಿನ MTR ಹೋಟೆಲ್​ ಟಿಫಿನ್ ದರ ಪಟ್ಟಿ ವೈರಲ್​: ಅಬ್ಬಬ್ಬಾ.. ದೋಸೆ, ಟೀ-ಕಾಫಿ ಬೆಲೆ ಇಷ್ಟೊಂದಾ!

ಎಂಟಿಆರ್​ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂತನ ದರದ ಪಟ್ಟಿ ಹರಿದಾಡುತ್ತಿದ್ದು ಸಾರ್ವಜನಿಕರು ಕಣ್ ಕಣ್ ಬಿಡ್ತಿದ್ದಾರೆ.

ಬೆಂಗಳೂರಿನ MTR ಹೋಟೆಲ್​ ಟಿಫಿನ್ ದರ ಪಟ್ಟಿ ವೈರಲ್​: ಅಬ್ಬಬ್ಬಾ.. ದೋಸೆ, ಟೀ-ಕಾಫಿ ಬೆಲೆ ಇಷ್ಟೊಂದಾ!
MTR
ಆಯೇಷಾ ಬಾನು

Updated on: Mar 20, 2023 | 9:32 AM

ಬೆಂಗಳೂರು: ಎಂ​ಟಿಆರ್​(MTR Hotel) ಎಂದೇ ಫೇಮಸ್ ಆದ ಮಾವಳ್ಳಿ ಟಿಫಿನ್ ರೂಮ್ ಎಂದರೆ ಪ್ರತಿಯೊಬ್ಬ ಸಸ್ಯಹಾರಿಗೂ ಫೇವರೆಟ್ ಹೋಟೆಲ್. ಅದರಲ್ಲೂ ಬೆಂಗಳೂರಿಗೆ ಭೇಟಿ ನೀಡುವವರು ಎಂಟಿಆರ್​ನಲ್ಲಿ ತಿಂಡಿ ಮಾಡಿಲ್ಲ ಅಂದ್ರೆ ಅವರ ಭೇಟಿಯೇ ಅಪೂರ್ಣ. ಸುಮಾರು 80 ವರ್ಷಗಳ ಇತಿಹಾಸ ಹೊಂದಿರುವ ಎಂಟಿಆರ್​ನಲ್ಲಿ ಶುದ್ಧ, ರುಚಿಕರ ಆಹಾರ ಸಿಗುತ್ತದೆ. ಸದ್ಯ ಎಂಟಿಆರ್​ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೂತನ ದರದ ಪಟ್ಟಿ ಹರಿದಾಡುತ್ತಿದ್ದು ಸಾರ್ವಜನಿಕರು ಕಣ್ ಕಣ್ ಬಿಡ್ತಿದ್ದಾರೆ.

ಎಂಟಿಆರ್​ಗೆ ಎಂಟ್ರಿ ಕೊಟ್ಟು ಬಿಸಿ ಬಿಸಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು-ಕೇಸರಿ ಬಾತ್, ಘಮಘಮಿಸುವ ಚಹಾವನ್ನು ಕಣ್ಮುಚ್ಚಿ ಆನಂದಿಸುತ್ತ ಸವಿಯುವ ಮಜಾ ಬೇರೆನೇ ಲೆವೆಲ್ಲು. ಹೀಗಾಗಿ ಎಷ್ಟೇ ದುಬಾರಿಯಾದರೂ ಆಹಾರ ಪ್ರಿಯರು ಎಂಟಿಆರ್​ನೇ ಹುಡುಕಿಕೊಂಡು ಬರುತ್ತಾರೆ. ಆದ್ರೆ ಏಪ್ರಿಲ್ ನಂತರ ಮತ್ತಷ್ಟು ದರ ಏರಿಕೆಗೆ ಎಂಟಿಆರ್​ ಮುಂದಾಗಿದೆ.

ಇದನ್ನೂ ಓದಿ: Diabetes: ಮಧುಮೇಹಿಗಳು ಸಿಹಿ ತಿಂಡಿಗಳನ್ನು ತಿನ್ನಬಹುದೇ? ಈ ವಿಷಯಗಳು ಗಮನದಲ್ಲಿರಲಿ

ಎಂಟಿಆರ್ ತಿಂಡಿ ದುಬಾರಿ

ಏಪ್ರಿಲ್ ಒಂದರಿಂದ ಎಂಟಿಆರ್​ನ ದರ ಮತ್ತಷ್ಟು ಹೆಚ್ಚಲಿದೆ. ಏಪ್ರಿಲ್​ನಲ್ಲಿ ಎಂಟಿಆರ್​ಗೆ ಹೋಗುವವರು ಹೋಟೆಲ್ ಪ್ರವೇಶಿಸುವ ಮುನ್ನ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರೊಬ್ಬರು ದರದ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ. ಎಂಟಿಆರ್​ ಶುಚಿ, ರುಚಿಗೆ ಫೇಮಸ್ ಬೆಲೆ ಎಷ್ಟಿದ್ದರೂ ಪರವಾಗಿಲ್ಲ ಅಂತ ಇಷ್ಟು ದಿನ ತಿಂಡಿ ಸವಿಯುತ್ತಿದ್ದ ಎಂಟಿಆರ್​ ಫ್ಯಾನ್ಸ್ ಈಗ ಮತ್ತಷ್ಟು ದುಬಾರಿ ಬೆಲೆಗೆ ತಿಂಡಿ ಸವಿಯುವಂತಾಗಿದೆ.

ಎಂಟಿಆರ್ ತಿಂಡಿ ದುಬಾರಿ

ಏಪ್ರಿಲ್ 1 ರಿಂದ ಎಂಟಿಆರ್​ನಲ್ಲಿ ಒಂದು ಮಸಾಲೆ ದೋಸೆ ಬೆಲೆ 125 ರೂ ಆಗಲಿದೆ. ರವೆ ಇಡ್ಲಿ 85ರೂ, ಉದ್ದಿನ ವಡೆ 60ರೂ ಹಾಗೂ ಒಂದು ಕಾಫಿ 53 ಆಗಲಿದೆ. ಈ ಬೆಲೆಯಲ್ಲಿ ಕೇವಲ ಜಿಎಸ್​ಟಿಯನ್ನು ಸೇರಿಸಲಾಗಿದ್ದು ಟಿಪ್ಸ್ ಸೇರಿರುವುದಿಲ್ಲ. ಟಿಪ್ಸ್ ಕೊಡಲು ಇಷ್ಟು ಪಡುವವರು ತಮ್ಮ ಜೇಬಿನಿಂದ ಮತ್ತಷ್ಟು ಹಣವನ್ನು ಖರ್ಚು ಮಾಡಬಹುದು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us