
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಸಮಯಕ್ಕೆ ಸರಿಯಾಗಿ ತಲುಪಬೇಕಾದ ಸ್ಥಳಗಳನ್ನು ನಾವು ತಲುಪುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ. ಹೀಗಾಗಿ ವೇಗವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಾವು ಮುಟ್ಟಬೇಕಾದ ಸ್ಥಳವನ್ನು ತಲುಪಲು ರ್ಯಾಪಿಡೋ (Rapido), ಉಬರ್ನಂತಹ (Ubar) ಸಾರಿಗೆ ಸಂಸ್ಥೆಗಳನ್ನು ಜನರು ಅವಲಂಭಿಸಿದ್ದಾರೆ. ನಗರದಲ್ಲಿ ವ್ಯಕ್ತಿಯೊಬ್ಬರು ರ್ಯಾಪಿಡೋ ಬುಕ್ ಮಾಡಿದ್ದು, ನಿಮ್ಮನ್ನು ಪಿಕ್ಅಪ್ ಮಾಡಲು 3.7 ನಿಮಿಷ ಕಾಯಿರಿ ಎಂದು ಹೇಳಿದೆ. ಇದನ್ನು ಕಂಡ ಪ್ರಯಾಣಿಕ ಗಾಭರಿಯಾಗಿದ್ದಾರೆ. ಹೌದು 225 ನಿಮಿಷಗಳಲ್ಲಿ ಆಟೋ ಬರಲಿದೆ ಎಂದು ಆ್ಯಪ್ ತೋರಿಸಿದೆ.
ಈ ಬಗ್ಗೆ deyalla ಎಂಬ ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದು “ರ್ಯಾಪಿಡೋ ವೇಟಿಂಗ್ ಟೈಮ್ ಅಧಿಕವಾಯ್ತು. 45 ನಿಮಿಷಗಳ ಪ್ರಯಾಣಕ್ಕಾಗಿ 3.7 ಗಂಟೆಗಳಿಗಿಂತ ಹೆಚ್ಚು ಕಾಲ ಕಾಯಬೇಕು.” ಎಂದು ರ್ಯಾಪಿಡೋ ಕಂಪನಿಗೆ ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರ್ಯಾಪಿಡೋ “ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನೀವು ಬುಕ್ ಮಾಡಿದ ಸಮಯದಲ್ಲಿ ಯಾವುದೇ ಆಟೋ ಲಭ್ಯವಿರಲಿಲ್ಲ. ಇದಕ್ಕೆ ನಾವು ವಿಷಾಧಿಸುತ್ತೇವೆ. ಈ ವಿಷಯದಲ್ಲಿ ನಿಮ್ಮ ತಾಳ್ಮೆಗೆ ಧ್ಯವಾದಗಳು” ಎಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.