ಬೆಂಗಳೂರು, ಜು.10: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ(B. Nagendra) ಹಾಗೂ ಶಾಸಕ ದದ್ದಲ್ಗೂ ಎಸ್ಐಟಿ(SIT) ಮತ್ತೆ ನೋಟಿಸ್ ನೀಡಿದೆ. ಇಂದು ವಿಚಾರಣೆಗೆ ಗೈರಾದ ಹಿನ್ನೆಲೆ ನೋಟಿಸ್ ಜಾರಿಗೊಳಿಸಲಾಗಿದ್ದು, ನಾಳೆ(ಜು.11) ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈ ಮೂಲಕ ಇಬ್ಬರಿಗೂ ಮೂರನೇ ಬಾರಿ ಎಸ್ಐಟಿ ನೋಟಿಸ್ ಜಾರಿ ಮಾಡಿದಂತಾಗಿದೆ.
ಇಂದು (ಜು.10) ಬೆಳ್ಳಂ ಬೆಳಗ್ಗೆ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಪಿಎ ಹರೀಶ್‌ನನ್ನು ಬಂಧಿಸಿದ್ದಾರೆ. ಇನ್ನು ವಾಲ್ಮೀಕಿ ನಿಗಮ ಹಗರಣ ಕೇಸ್ಗೆ ಸಂಬಂಧಿಸಿದಂತೆ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದ್ದು, ಎಸ್ಐಟಿಯಿಂದ 11, ಇಡಿಯಿಂದ ಓರ್ವನನ್ನು ಬಂಧಿಸಲಾಗಿದೆ.
ಇದನ್ನೂ ಓದಿ:ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ನಾಗೇಂದ್ರ ಪಿಎ ಹರೀಶ್ ಬಂಧನ, ಯಾರು ಈತ? ಇಲ್ಲಿದೆ ವಿವರ
1. ಸತ್ಯನಾರಾಯಣ, FFCCSL ಅಧ್ಯಕ್ಷ
2.ಸತ್ಯನಾರಾಯಣ ವರ್ಮಾ, 3. ಚಂದ್ರಮೋಹನ್, 4. ಶ್ರೀನಿವಾಸ್ 5. ಜಗದೀಶ್ – ಮಧ್ಯವರ್ತಿಗಳು
6.ಜೆ.ಜೆ.ಪದ್ಮನಾಭ್ – ವಾಲ್ಮೀಕಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ)
7. ಪರಶುರಾಮ ದುರುಗಣ್ಣವರ, ನಿಗಮದ ಹಿಂದಿನ ಲೆಕ್ಕಾಧಿಕಾರಿ
8. ನೆಕ್ಕಂಟಿ ನಾಗರಾಜ್ – ಮಾಜಿ ಸಚಿವ ಬಿ.ನಾಗೇಂದ್ರ ಆಪ್ತ
9. ನಾಗೇಶ್ವರ ರಾವ್ – ಮಾಜಿ ಸಚಿವ ನಾಗೇಂದ್ರ ಸಂಬಂಧಿ
10. ಸಾಯಿ ತೇಜ, ಸತ್ಯನಾರಾಯಣ ವರ್ಮಾ ಸಹಚರ
11. ತೇಜ ತಮ್ಮಯ್ಯ, ಶಾಸಕ ದದ್ದಲ್ ಪಿಎ
12. ಹರೀಶ್, ಮಾಜಿ ಮಂತ್ರಿ ನಾಗೇಂದ್ರ ಪಿಎ
ಹೈದರಾಬಾದ್ನಲ್ಲಿ ಎಸ್ಐಟಿ ತಂಡ ಐವರನ್ನ ಬಂಧಿಸಿದ್ದರು. ಇಂದು ಇಡಿ ಅಧಿಕಾರಿಗಳು ಹರೀಶ್ನನ್ನ ಬಂಧಿಸಿದ್ದಾರೆ.
ಬೆಂಗಳೂರು, ದಾವಣಗೆರೆ ಯಲ್ಲಿ ಉಳಿದ ಐವರನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಜೊತೆಗೆ ಎಸ್ಐಟಿಯಿಂದ ಇದುವರೆಗೂ ಒಟ್ಟು 35 ಕೋಟಿಗೂ ಹೆಚ್ಚು ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್‌ಗಳಲ್ಲಿದ್ದ ಹಣವನ್ನ ಜಪ್ತಿ ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ