ಬೆಂಗಳೂರು, ಅ.6: ಲೈಕ್ಸ್, ಕಮೆಂಟ್ಸ್ಗಾಗಿ ಯೂಟ್ಯೂಬರ್ಗಳು, ರೀಲ್ಸ್ ಸ್ಟಾರ್ಗಳು ಪ್ರಾಂಕ್ ವಿಡಿಯೋಗಳನ್ನು ಮಾಡುವುದು ನೋಡಬಹುದು. ಒಂದು ರೀತಿಯಲ್ಲಿ ಇದು ಸಾರ್ವಜನಿಕರನ್ನು ಭೀತಿಗೊಳಿಸುವ ವಿಡಿಯೋ ಕೂಡ ಹೌದು. ಇದೀಗ, ಬೆಂಗಳೂರು ಮೆಟ್ರೋ (Bengaluru Metro) ರೈಲು ಹಾಗೂ ಎಸ್ಕಲೇಟರ್ನಲ್ಲಿ ಯುವಕನೊಬ್ಬ ಮೂರ್ಛೆ ಬಂದವರಂತೆ ನಟಿಸಿ ಪ್ರಯಾಣಿಕರನ್ನು ಭೀತಿಗೊಳಿಸಿದ ವಿಡಿಯೋ ವೈರಲ್ ಆಗುತ್ತಿದೆ.
ವಿಜಯನಗರದಿಂದ ಮೆಜೆಸ್ಟಿಕ್ ಕಡೆಗೆ ಬರುವ ನೇರಳೆ ಬಣ್ಣದ ಮೆಟ್ರೋ ರೈಲಿನಲ್ಲಿ ಯೂಟ್ಯೂಬರ್ ಹುಚ್ಚಾಟಕ್ಕೆ ಪ್ರಯಾಣಿಕರು ಗಾಬರಿಗೊಂಡಿದ್ದು, ನಿಲ್ದಾಣದ ಎಸ್ಕಲೇಟರ್ನಲ್ಲೂ ಮೂರ್ಛೆ ಬಂದಂತೆ ನಟಿಸಿ ಭೀತಿಗೊಳಿಸಿದ್ದಾನೆ.
ಒಂದು ವಿಡಿಯೋದಲ್ಲಿ ನೋಡುವಂತೆ, ಚಲಿಸುತ್ತಿರುವ ಮೆಟ್ರೋದಲ್ಲಿ ಮೂರ್ಛೆ ಬಂದವರಂತೆ ಪ್ರಾಂಕ್ ಮಾಡಲಾಗಿದೆ. ಮತ್ತೊಂದು ವೀಡಿಯೋದಲ್ಲಿ, ಎಸ್ಕಲೇಟರ್ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರಾಂಕ್ ಮಾಡಿದ್ದು, ಈ ವೇಳೆ ವೃದ್ಧೆ ಗಾಬರಿಗೊಳ್ಳುವುದನ್ನು ಕಾಣಬಹುದು.
ಇದನ್ನೂ ಓದಿ: ಬೆಂಗಳೂರು ಮೆಟ್ರೋದಲ್ಲಿ ಆಹಾರ ಸೇವಿಸಿದ ಪ್ರಯಾಣಿಕ, ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿದ BMRCL
ಪ್ರಾಂಕ್ ಪ್ರಜ್ಜು ಎಂಬ ಯುವಕನಿಂದ ಈ ಹುಚ್ಚಾಟ ನಡೆಸಿದ್ದು, ತನ್ನದೇ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಹಂಚಿಕೊಂಡಿದ್ದಾನೆ. ಸದ್ಯ ವಿಡಿಯೋ ಆಧರಿಸಿ ಬಿಎಂಆರ್ಸಿಎಲ್ ಅಧಿಕಾರಿಗಳು ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಒಂದು ಪ್ರಕರಣ ನಡೆದಿತ್ತು. ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಬಿಎಂಆರ್ಸಿಎಲ್ ಪ್ರಕರಣ ದಾಖಲಿಸಿತ್ತು.
‘ಪ್ರೊಫೆಷನಲ್ ಮಿಸ್ಟೇಕ್ ಮೇಕರ್’ ಎಂಬ ಯೂಟ್ಯೂಬರ್ನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಬಿಎಂಆರ್ಸಿಎಲ್ ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:04 pm, Fri, 6 October 23