ಬೆಂಗಳೂರು: ನಡುರಾತ್ರಿ ಊಬರ್ ಆಟೋ ಅಡ್ಡಗಟ್ಟಿ ಹಲ್ಲೆ ನಡೆಸಿದ ಕ್ಯಾಬ್ ಚಾಲಕರು
ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ಕೊಟ್ಟರೂ ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಪುಂಡಾಟ ನಿಲ್ಲುತ್ತಿಲ್ಲ. ತಡರಾತ್ರಿ ಆಟೋ ಅಡ್ಡಗಟ್ಟಿದ ಗ್ಯಾಂಗ್, ಚಾಲಕ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊರಮಾವು ಬಳಿ ನಡೆದಿದೆ. ಆಟೋ ಚಾಲಕ ನಂಜುಂಡ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರು, ಅ.6: ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ ಕೊಟ್ಟರೂ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪುಡಿರೌಡಿಗಳ ಪುಂಡಾಟ ನಿಲ್ಲುತ್ತಿಲ್ಲ. ನಡುರಾತ್ರಿ ಆಟೋ ಅಡ್ಡಗಟ್ಟಿದ ಗ್ಯಾಂಗ್, ಚಾಲಕ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೊರಮಾವು ಬಳಿ ನಡೆದಿದೆ. ಆಟೋ ಚಾಲಕ ನಂಜುಂಡ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸ್ಯಾಂಕಿ ರಸ್ತೆಯಿಂದ ಚಾಲಕ ನಂಜುಂಡ ಅವರು ನಾಲ್ವರು ಪ್ರಯಾಣಿಕರನ್ನು ಊಬರ್ ಆಟೋದಲ್ಲಿ ಹತ್ತಿಸಿಕೊಂಡಿದ್ದು, ಹೊರಮಾವು ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಸ್ವಿಫ್ಟ್ ಕಾರಿನಲ್ಲಿ ಬಂದ ಗ್ಯಾಂಗ್, ಆಟೋ ಡ್ರೈವರ್ಗೆ ಹಿಗ್ಗಾಮುಗ್ಗಾ ಥಳಿಸಿದೆ. ಆರೋಪಿಗಳ ಕಾಲಿಗೆ ಬಿದ್ದು ಯುವತಿ ಬೇಡಿಕೊಂಡರೂ ಹಲ್ಲೆ ನಡೆಸಲಾಗಿದೆ.
ಪೊಲೀಸರಿಗೆ ಕರೆ ಮಾಡಲು ಯತ್ನಿಸಿದಾಗ ಮೊಬೈಲ್ ಕಸಿದುಕೊಳ್ಳಲಾಗಿದೆ. ಭಾನುವಾರ ಮಧ್ಯರಾತ್ರಿ 1.45ರ ಸುಮಾರಿಗೆ ನಡೆದಿರುವ ಘಟನೆ ಇದಾಗಿದ್ದು, ಆಟೋ ಚಾಲಕ ನಂಜುಂಡ ಅವರು ನೀಡಿದ ದೂರಿನ ಮೇರೆಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕ್ಯಾಬ್ ಚಾಲಕರನ್ನು ಬಂಧಿಸಿದ ಪೊಲೀಸರು
ಹಲ್ಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಠಾಣಾ ಪೊಲೀಸರು, ಇಬ್ಬರು ಕ್ಯಾಬ್ ಚಾಲಕರನ್ನು ಬಂಧಿಸಿದ್ದಾರೆ. ಅನಿಲ್ ಮತ್ತು ರಘು ಬಂಧಿತ ಆರೋಪಿಗಳಾಗಿದ್ದಾರೆ. ವಿಚಾರಣೆ ವೇಳೆ ಆಟೋ ಚಾಲಕನಿಂದ ಪ್ರಯಾಣಿಕರಿಗೆ ಸಮಸ್ಯೆಯಾದಂತೆ ಕಂಡೆವು. ಹೀಗಾಗಿ ಆಟೋ ಚಾಲಕನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾರೆ.
ಗ್ಯಾಂಗ್ನಿಂದ ಹಲ್ಲೆಗೊಳಗಾದ ಪ್ರಯಾಣಿಕರು ಇದುವರೆಗೆ ಠಾಣೆಗೆ ದೂರು ನೀಡಿಲ್ಲ. ತನಿಖೆ ವೇಳೆ ಪ್ರಯಾಣಿಕರು ಕುಡಿದಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆಟೋ ಚಾಲಕ ನೀಡಿದ ದೂರಿನ ಹಿನ್ನಲೆ ಎಫ್ಐಆರ್ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:43 pm, Fri, 6 October 23