ಸಿಪಿ ಯೊಗೇಶ್ವರ್ ಅವಕಾಶವಾದಿ ರಾಜಕಾರಣಿ ಎಂದ ರಮೇಶ್ ಬಾಬು, ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ

ಬೆಂಗಳೂರಿನಲ್ಲಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಸುದ್ದಿಗೊಷ್ಠಿ ನಡೆಸಿ ಸಿಪಿ ಯೋಗೇಶ್ವರ್ ಹಾಗೂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಸಿಪಿ ಯೊಗೇಶ್ವರ್ ಅವಕಾಶವಾದಿ ರಾಜಕಾರಣಿ ಅಂತಾ ಹೇಳಿದರು. ಪ್ರಿಯಾಂಕ್ ಖರ್ಗೆ ಅವರಿಗೆ ಮರಿ ಖರ್ಗೆ ಎಂಬ ಸಿಟಿ ರವಿ ಟೀಕೆಗೆ ತಿರುಗೇಟು ನೀಡಿದ ಅವರು, ಅವರನ್ನ ನಾನು ಚಡ್ಡಿ ರವಿ ಎಂದು ಕರೆದರೂ ತಪ್ಪಾಗಲ್ಲ ಎಂದರು.

ಸಿಪಿ ಯೊಗೇಶ್ವರ್ ಅವಕಾಶವಾದಿ ರಾಜಕಾರಣಿ ಎಂದ ರಮೇಶ್ ಬಾಬು, ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ
ಸಿಪಿ ಯೋಗೇಶ್ವರ್, ರಮೇಶ್ ಬಾಬು ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us
ಪ್ರಸನ್ನ ಗಾಂವ್ಕರ್​
| Updated By: Rakesh Nayak Manchi

Updated on: Oct 06, 2023 | 2:28 PM

ಬೆಂಗಳೂರು, ಅ.6: ಸಿ.ಪಿ. ಯೋಗೇಶ್ವರ್ (C.P. Yogeshwar) ಹಾಗೂ ಹೆಚ್.​ಡಿ. ಕುಮಾರಸ್ವಾಮಿ (H.D. Kumaraswamy) ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಮರಿ ಖರ್ಗೆ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಟೀಕಿಸಿದ ಸಿ.ಟಿ. ರವಿ (C.T. Ravi) ಅವರನ್ನು ಚಡ್ಡಿ ರವಿ ಎಂದು ಕರೆದರೂ ತಪ್ಪಾಗಲ್ಲ ಎಂದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ಜೆಡಿಎಸ್ ಬಿಜೆಪಿ ಬಿ ಟೀಮ್ ಎಂದು ಹೇಳುತ್ತಿದ್ದೆವು. ಈಗಾ ಬಿಜೆಪಿ ಬಿ ಟೀಂ ಎಂದು ತೊರಿಸಿಕೊಟ್ಟಿದ್ದಾರೆ ಎಂದರು.

ಬಿಎಸ್ ಯಡಿಯೂರಪ್ಪ, ನಳೀನ್ ಕುಮಾರ್ ಕಟೀಲ್, ಬಸವರಾಜ ಬೊಮ್ಮಾಯಿ ಅವರಿಗೆ ವಿಶ್ರಾಂತಿ ಕೊಡಲು ಕುಮಾರಸ್ವಾಮಿ ಅವರಿಗೆ ರೆಡ್ ಕಾರ್ಪೆಟ್ ಹಾಕಲಾಗಿದೆ. ಸಿಪಿ ಯೊಗೇಶ್ವರ್, ಕುಮಾರಸ್ವಾಮಿ ಅವರು ಒಳ್ಳೆ ಜೋಡಿಗಳಾಗಿ ಹೊರ ಹೊಮ್ಮಿದ್ದಾರೆ. ಒಂದಾಗಿ ಸೈದ್ದಾಂತಿಕವಾಗಿ ಪಕ್ಷಕಟ್ಟಿದ್ದಾರೆ ರಾಜಕಾರಣ ಮಾಡಿದರೆ ನಾವು ಬೇಡ ಅನ್ನುವುದಿಲ್ಲ. ಆದರೆ ಪದೇ ಪದೆ ಡಿಕೆಶಿವಕುಮಾರ್, ಡಿಕೆ ಸುರೇಶ್ ವಿಚಾರ ಮಾತಾನಾಡುವುದು ಸರಿ ಅಲ್ಲ ಎಂದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಬೆನ್ನಲ್ಲೇ ರಾಜಕೀಯ ವೈರತ್ವ ಮರೆತು ಒಂದಾದ ಕುಮಾರಸ್ವಾಮಿ, ಸಿಪಿ ಯೋಗೇಶ್ವರ್

ಸರ್ಕಾರದ ಬಗ್ಗೆ ಸುಳ್ಳು ಆರೋಪ ಮತ್ತು ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಿಕೆ ಕೊಡುತ್ತಿದ್ದಾರೆ. ಕುಮಾರಸ್ವಾಮಿ ಅವರು ಸಿಪಿ ಯೊಗೇಶ್ವರ್ ವಿರುದ್ಧ ಯಾವ ರೀತಿ ಆರೋಪಿಸಿದ್ದಾರೆ ಎಂಬುವುದು ಗೊತ್ತಿದೆ. ಯೊಗೇಶ್ವರ್ ಅವರು ಕುಮಾರಸ್ವಾಮಿ ಅವರ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದಾರೆ. ಪರಸ್ಪರರ ಒಬ್ಬರಿಗೊಬ್ಬರು ವ್ಯಯಕ್ತಿಕವಾಗಿಯು ನಿಂದನೆ ಮಾಡಿಕೊಂಡಿದ್ದಾರೆ ಎಂದರು.

ಪರಸ್ಪರ ನಿಂದನೆ ಮಾಡಿಕೊಂಡವರು ಈಗಾ ಯಾವ ನೈತಿಕತೆಯಿಂದ ಡಿಕೆಶಿವಕುಮಾರ್, ಡಿಕೆ ಸುರೇಶ್ ಅವರ ಬಗ್ಗೆ ಮಾತಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ರಮೇಶ್ ಬಾಬು, ಕಾಂಗ್ರೆಸ್ ಪಕ್ಷದ ಮೇಲೆ ಆಗಲಿ, ಡಿಕೆಶಿವಕುಮಾರ್, ಸುರೇಶ್ ಮೇಲಾಗಲಿ ಆರೋಪ ಮಾಡುವಾಗ ಸೈದ್ದಾಂತಿಕವಾಗಿ ಟೀಕೆ ಮಾಡಿ ಎಂದರು.

ಸಿಪಿ ಯೊಗೇಶ್ವರ್ ಅವರಂತ ಅವಕಾಶವಾದಿ ರಾಜಕಾರಣಿ ಯಾರು ಇಲ್ಲ. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ರೌಡಿ ಅಂತಾ ಯೊಗೇಶ್ವರ್ ಅವರೇ ಹೇಳಿಕೆ ನೀಡಿದ್ದರು. ಈ ರೀತಿ ಸಂಧರ್ಭತಕ್ಕಂತೆ ಅವಕಾಶವಾದಿ ಸಿಪಿ ಯೊಗೇಶ್ವರ್ ಎಂದು ವಾಗ್ದಾಳಿ ನಡೆಸಿದರು.

ಸಿಟಿ ರವಿ ಟೀಕೆಗೆ ರಮೇಶ್ ಬಾಬು ತಿರುಗೇಟು

ಪ್ರಿಯಾಂಕ್ ಖರ್ಗೆ ಅವರಿಗೆ ಮರಿ ಖರ್ಗೆ ಅಂತ ಸಿಟಿ ರವಿ ಅವರು ಟೀಕೆ ಮಾಡಿದ್ದಾರೆ. ಅವರು ಟೀಕೆ ಮಾಡುವಾಗ ಬಳಿಸಿರುವಂತ ಪದ ಸರಿಯಿಲ್ಲ. ಅವರನ್ನ ನಾನು ಚಡ್ಡಿ ರವಿ ಎಂದು ಕರೆದರೂ ತಪ್ಪಾಗಲ್ಲ. ಅವರು ಮಾತಾಡುವಾಗ ಟೀಕೆ ಮಾಡುವಾಗ ಎಚ್ಚರಿಕೆಯಿಂದ ಟೀಕೆ ಮಾಡಲಿ. ಅವರ ಹಾಗೇ ನಮಗೂ ನೂರು ಪಟ್ಟು ಮಾತಾಡುವುದಕ್ಕೆ ಬರುತ್ತದೆ ಎಂದು ರಮೇಶ್ ಬಾಬು ಎಚ್ಚರಿಕೆ ನೀಡಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್