ಎಸ್​ಟಿ ಸೋಮಶೇಖರ್​​ ಬಿಜೆಪಿ ತೊರೆಯುವುದು ಪಕ್ಕನಾ? ಸಂಚಲನ ಮೂಡಿಸಿದ ಸಿಟಿ ರವಿ ಮಾತು

ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಮಾಜಿ ಸಿಎಂ ಕುಮಾರಸ್ವಾಮಿ ಖುಷಿಯಾದಷ್ಟು ಬೇರೆ ಯಾರೂ ಖುಷಿಯಾಗಿಲ್ವಾ? ಇಂಥಾದ್ದೊಂದು ಪ್ರಶ್ನೆ ಈಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ. ಇದೀಗ, ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್ ಸಹ ಮೈತ್ರಿಗೆ ವಿರೋಧ ಹೊರಹಾಕಿದ್ದಾರೆ. ಉಸಿರುಗಟ್ಟುವ ವಾತಾವರಣವಿದೆ ಎಂದು ಹೇಳಿದ್ದು ಸಂಚಲನ ಮೂಡಿಸಿದ್ದಾರೆ. ಇನ್ನು ಇದಕ್ಕೆ ಸಿಟಿ ರವಿ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಸೋಮಶೇಖರ್​ ಬಿಜೆಪಿ ತೊರೆಯುವುದು ಪಕ್ಕಾ ಆದಂತಾಗಿದೆ. ಹಾಗಾದ್ರೆ, ಸಿಟಿ ರವಿ ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

ಎಸ್​ಟಿ ಸೋಮಶೇಖರ್​​ ಬಿಜೆಪಿ ತೊರೆಯುವುದು ಪಕ್ಕನಾ? ಸಂಚಲನ ಮೂಡಿಸಿದ ಸಿಟಿ ರವಿ ಮಾತು
ಸಿಟಿ ರವಿ, ಎಸ್​ಟಿ ಸೋಮಶೇಖರ್
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ರಮೇಶ್ ಬಿ. ಜವಳಗೇರಾ

Updated on:Oct 06, 2023 | 10:14 AM

ಬೆಂಗಳೂರು/ಚಿಕ್ಕಮಗಳೂರು (ಅಕ್ಟೋಬರ್ 06): ಮಾನಸಿಕವಾಗಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ, ಹಾಗೂ ಪಕ್ಷ ತೊರೆಯಲು ಮುಹೂರ್ತಕ್ಕಾಗಿ ಕಾಯುತ್ತಿರುವ ಕಾಯುತ್ತಿರುವ ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್(ST Somashekar )​, ಇಗೀಗ ಬಿಜೆಪಿ-ಜೆಡಿಎಸ್ ಮೈತ್ರಿ (JDS BJP alliance) ಬಗ್ಗೆ ಅಸಮಾಧಾನ ಸ್ಫೋಟಿಸಿದ್ದಾರೆ. ಮೈತ್ರಿ ಬಗ್ಗೆ ನನಗೂ ಅಸಮಾಧಾನವಿದೆ. ಉಸಿರುಕಟ್ಟುವ ವಾತವರಣವಿದೆ ಎಂದು ಬಹಿರಂಗವಾಗೇ ಎಸ್‌.ಟಿ.ಸೋಮಶೇಖರ್ ಹೇಳಿದ್ದಾರೆ. ಅಷ್ಟೇ ಅಲ್ಲ ಅಧಿಕೃತವಾಗಿ ಮೈತ್ರಿಯಾದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೇ ಬಿಜೆಪಿ ತೊರೆಯುವುದು ಬಹುತೇಕ ಖಚಿತವಾಗಿದೆ. ಇನ್ನು ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ನಾಯಕ ಸಿಟಿ ರವಿ ಪ್ರತಿಕ್ರಿಯಿಸಿ, ಸನ್ನಿವೇಶಕ್ಕೆ ತಕ್ಕಂತೆ ನಿಷ್ಠೆ ಬದಲಾಗುವಂತದ್ದು ಕೆಲವರಿಗೆ ಇರುತ್ತೆ ಎಂದು ಹೇಳಿದ್ದಾರೆ.

ಬಿಜೆಪಿ ,ಜೆಡಿಎಸ್ ಮೈತ್ರಿ ಬಗ್ಗೆ ಶಾಸಕ ಎಸ್ .ಟಿ ಸೋಮಶೇಖರ್ ಅಸಮಾಧಾನದ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಸಿಟಿ ರವಿ, ಸೋಮಶೇಖರ್ ಅವರ ಅಸಮಾಧಾನಕ್ಕೆ ಹಲವು ಕಾರಣಗಳಿವೆ. ಇದರ ಬಗ್ಗೆ ಚರ್ಚೆ ಈಗ ಮಾಡುವುದಿಲ್ಲ. ಯಾವ ಯಾವ ಸಂದರ್ಭಗಳು ಏನೇನುಎನ್ನುವುದನ್ನ ಮನುಷ್ಯನ ವ್ಯಕ್ತಿತ್ವಗಳನ್ನ ಪ್ರಕಟಿಸುತ್ತವೆ. ನಿಷ್ಠೆ ಅನ್ನುವುದು ಸನ್ನಿವೇಶದ ಅವಶ್ಯಕತೆ ಅಲ್ಲ ಜೀವನದ ಜೀವಾಳವಾಗಿರಬೇಕು. ಸನ್ನಿವೇಶಕ್ಕೆ ತಕ್ಕಂತೆ ನಿಷ್ಠೆ ಬದಲಾಗುವಂತದ್ದು ಕೆಲವರಿಗೆ ಇರುತ್ತೆ ಎಂದು ಪರೋಕ್ಷವಾಗಿ ಸೋಮಶೇಖರ್​ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ವೈಯಕ್ತಿಕವಾಗಿ ಬಿಜೆಪಿ, ಜೆಡಿಎಸ್​​ ಮೈತ್ರಿಗೆ ನನ್ನ ಸಹಮತ ಇಲ್ಲ: ಶಾಸಕ ಎಸ್​​ಟಿ ಸೋಮಶೇಖರ್

ಸೋಮಶೇಖರ್ ಅವರ ಬಗ್ಗೆ ಈಗೇನು ಹೇಳಲು ಬಯಸುವುದಿಲ್ಲ ಸಂದರ್ಭ ಬಂದಾಗ ಹೇಳುತ್ತೇನೆ. ಜೆಡಿಎಸ್ ಬಿಜೆಪಿ ಹೊಂದಾಣಿಕೆ ಸಂಬಂಧಪಟ್ಟಂತೆ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ದಾರೆ/ ನಾವು ಪಕ್ಷದ ಆದೇಶ ಮೀರಿ ಇದುವರೆಗೂ ನಡೆದುಕೊಂಡಿಲ್ಲ. ಕೆಲವು ಸಂಗತಿಗಳು ಆಯಾ ಪ್ರದೇಶಕ್ಕೆ ಆಯಾ ಸನ್ನಿವೇಶಕ್ಕೆ ಇರುತ್ತದೆ . ಒಂದು ಪಕ್ಷದ ಒಳಗೂ ಅಸಮಾಧಾನ ಇರುತ್ತವೆ. ಇದು ಪಕ್ಷದ ಹೊರಗಿನ ಮೈತ್ರಿ. ಪಕ್ಷದ ಒಳಗೂ ಕೂಡ ಒಬ್ಬರಿಗೊಬ್ಬರು ವೈಯಕ್ತಿಕವಾದ ಭಿನ್ನಾಭಿಪ್ರಾಯ ಇರುತ್ತದೆ. ಎರಡು ಪಕ್ಷಗಳ ನಡುವೆ ಹೊಂದಾಣಿಕೆಯಾದಾಗ ಸ್ವಾಭಾವಿಕವಾಗಿ ಭಿನ್ನಭಿಪ್ರಾಯಗಳು ಇದ್ದೇ ಇರುತ್ತವೆ . ಅದನ್ನೆಲ್ಲ ಸರಿ ಮಾಡುವ ಜವಾಬ್ದಾರಿ ಆಯಾ ಪಕ್ಷದ ಮುಖಂಡರಿಗೆ ಇರುತ್ತದೆ ಎಂದರು.

ಬಿಜೆಪಿ ಪಕ್ಷದ ಒಳಗೆ ಇರುವಂತಹ ಭಿನ್ನಾಭಿಪ್ರಾಯವನ್ನು ನಮ್ಮ ಪಕ್ಷದ ಮುಖಂಡರು ಸರಿ ಮಾಡುತ್ತಾರೆ. ಜೆಡಿಎಸ್ ಒಳಗಿನ ಭಿನ್ನಾಭಿಪ್ರಾಯವನ್ನು ಅವರ ಪಕ್ಷದ ಮುಖಂಡರು ಸರಿ ಮಾಡಬೇಕು . ಒಟ್ಟಿಗೆ ಹೋದ್ರೆ ಮಾತ್ರ ಇದರ ರಾಜಕೀಯ ಲಾಭ ಎರಡು ಪಕ್ಷಕ್ಕೂ ಆಗುತ್ತದೆ. ಏನಾದರೂ ಮಾಡಿ ಭಿನ್ನಾಭಿಪ್ರಾಯವನ್ನು ಹೆಚ್ಚು ಮಾಡಬೇಕು ಎಂಬ ಪ್ರಯತ್ನವನ್ನ ಕಾಂಗ್ರೆಸ್ ಮಾಡುತ್ತೆ. ಹಲವು ರೀತಿಯ ಆಮಿಷ ಆಸೆಗಳ ಮೂಲಕ ಪ್ರಯತ್ನ,ಒತ್ತಡ, ತಂತ್ರಗಳ ಮೂಲಕ ಮಾಡುತ್ತಲೇ ಇರುತ್ತದೆ. ಅವರ ರಾಜಕಾರಣ ಅವರು ಮಾಡುತ್ತಾರೆ. ಸರಿ ಮಾಡುವ ಜವಾಬ್ದಾರಿ ನಮ್ದು ಸರಿ ಮಾಡುತ್ತೇವೆ‌ ಎಂದರು.

ಸಿಟಿ ರವಿ ಅವರ ಆಡಿದ ಮಾತುಗಳನ್ನು ಗಮನಿಸಿದರೆ, ಎಸ್​ಟಿ ಸೋಮೇಶಖರ್ ಬಿಜೆಪಿ ತೊರೆಯಲು ನಿರ್ಧರಿಸಿದಂತಿದೆ.  ಮೊದಲೇ ಬಿಜೆಪಿಯಿಂದ ಅಂತ ಕಾಯ್ದುಕೊಂಡು ಡಿಕೆ ಶಿವಕುಮಾರ್ ಜೊತೆ ಸಂಪರ್ಕದಲ್ಲಿದ್ದ ಸೋಮಶೇಖರ್ ಅವರಿಗೆ ಇದೀಗ ಮೈತ್ರಿ ಒಂದು ನೆಪ ಸಿಕ್ಕಿದ್ದು, ಇದೇ ನೆಪದಲ್ಲಿ ಪಕ್ಷ ತೊರೆಯಲಿದ್ದಾರೆ ಎಂದು ತಿಳಿದುಬಂದಿದೆ  ಈ ಗ್ಗೆ ಬಿಜೆಪಿ ನಾಯಕರಿಗೂ ಗೊತ್ತಾಗಿದೆ ಎನ್ನಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:10 am, Fri, 6 October 23

ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಎರಡು ಕಡೆ ಫ್ರ್ಯಾಕ್ಚರ್ ಆಗಿರುವ ಕಾರಣ ಪ್ರಚಾರಕ್ಕೆ ಹೋಗಲಿಲ್ಲ: ರೇವಣ್ಣ
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ಇಬ್ರಾಹಿಂ ಮತ್ತು ದೇವೇಗೌಡರ ನಡುವೆ ನಡೆದ ಚರ್ಚೆಯೇನು ಅಂತ ಗೊತ್ತಿಲ್ಲ: ಹರೀಶ್
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ದೇವೇಗೌಡ ಮತ್ತು ಕುಮಾರಸ್ವಾಮಿ ಯಾವತ್ತಿಗೂ ನನ್ನ ನಾಯಕರು: ರೇವಣ್ಣ
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಹಿಂದೆ ಯೋಗೇಶ್ವರ್ ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಮಾತಾಡಿದ್ದರು: ಸುರೇಶ್
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಯಾದಗಿರಿ ತಲುಪಿ ರೈತರ ಸಂಕಷ್ಟ ಆಲಿಸುತ್ತಿರುವ ಬಸನಗೌಡ ಯತ್ನಾಳ್ ತಂಡ
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬ್ಯಾಡ್ ಟಚ್, ವಿಡಿಯೋ ವೈರಲ್
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಶಿಶುವನ್ನು ವಾಪಸ್ಸು ಪಡೆದ ತಂದೆತಾಯಿಗಳ ಸಂತೋಷಕ್ಕೆ ಪಾರವೇ ಇಲ್ಲ!
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮುಸ್ಲಿಮರಿಗೆ ಮತದಾನದ ಹಕ್ಕು: ಸ್ವಾಮೀಜಿ ಹೇಳಿಕೆಗೆ ಮಹದೇವಪ್ಪ ಗರಂ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು