ಶಿವಮೊಗ್ಗ ಗಲಾಟೆ ಪ್ರಕರಣ; ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಪ್ರೀತಂ ಗೌಡ

ರಾಗಿಗುಡ್ಡದಲ್ಲಿ ಆಗಿರುವುದು ನಾಳೆ ಹಾಸನದಲ್ಲಿ, ಬಿಟಿಎಂ ಲೇಔಟ್‌ನಲ್ಲಿ ಅಥವಾ ರಾಮಲಿಂಗಾರೆಡ್ಡಿ ಅವರ ಮನೆ ಮೇಲೆ ಆದರೆ ಯಾರೂ ಜವಾಬ್ದಾರರು. ಬೇಸಿಕ್ ಕಾಮನ್‌ಸೆನ್ಸ್ ಇಲ್ಲದೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಗಲಾಟೆ ಪ್ರಕರಣ; ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಪ್ರೀತಂ ಗೌಡ
ಪ್ರೀತಂ ಗೌಡ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 05, 2023 | 6:21 PM

ಹಾಸನ, ಅ.05: ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ವಿಚಾರ ‘ಶಿವಮೊಗ್ಗ (Shivamogga)ದಲ್ಲಿ ಪದೇ ಪದೇ ಜಿಹಾದಿ ಮನಸ್ಥಿತಿ, ದೇಶ ವಿರೋಧಿ ಇರುವಂತಹ ವ್ಯಕ್ತಿಗಳು ಇಡೀ ಸಮಾಜದ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಪ್ರೀತಂ ಗೌಡ(Preetham Gowda) ಹೇಳಿದರು. ಹಾಸನದಲ್ಲಿ ಮಾತನಾಡಿದ ಅವರು ‘ಯಾರು ಮಂತ್ರಿಗಳಿಗೆ ಫೀಡ್‌ಬ್ಯಾಕ್ ಕೊಡ್ತಾರೋ, ಅವರ ಮನಸ್ಥಿತಿ ಏನಿದೆಯೋ ಗೊತ್ತಿಲ್ಲ. ಪರಿಸ್ಥಿತಿಯನ್ನು ತಿಳಿಗೊಳಿಸುವ ಬದಲು ಅವರಿಗೆ ಕ್ಲೀನ್ ಚಿಟ್ ಕೊಡುವ ಕೆಲಸ ಮಾಡುತ್ತಾರೆ. ಯಾಕೆ ಈ ಆತುರ, ಇವತ್ತು ರಾಗಿಗುಡ್ಡದಲ್ಲಿ ಆಗಿರುವುದು ನಾಳೆ ಹಾಸನದಲ್ಲಿ, ಬಿಟಿಎಂ ಲೇಔಟ್‌ನಲ್ಲಿ ಅಥವಾ ರಾಮಲಿಂಗಾರೆಡ್ಡಿ ಅವರ ಮನೆ ಮೇಲೆ ಆದರೆ ಯಾರೂ ಜವಾಬ್ದಾರರು. ಬೇಸಿಕ್ ಕಾಮನ್‌ಸೆನ್ಸ್ ಇಲ್ಲದೆ ತುಷ್ಟಿಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮಬಂಗಾಳದ ಸ್ಥಿತಿಯನ್ನು ಕರ್ನಾಟಕಕ್ಕೆ ತರಲು ಹೊರಟಿದ್ಧೀರಾ?

ಹೌದು, ‘ಪಶ್ಚಿಮಬಂಗಾಳದಲ್ಲಿ ಏನು ನಡಿತಿದೆ, ಜಮ್ಮು ಕಾಶ್ಮೀರದಲ್ಲಿ 370 ರದ್ದು ಮಾಡುವ ಮುಂಚೆ ಯಾವ ಸ್ಥಿತಿ ಇತ್ತು. ಆ ಪರಿಸ್ಥಿತಿ ಕರ್ನಾಟಕಕ್ಕೆ ತರಲು ಹೊರಟಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ನಿಮಗೂ ಮಕ್ಕಳು, ಮೊಮ್ಮಕ್ಕಳು, ಮುಂದಿನ ಪೀಳಿಗೆ ಇದೆ. ಅವರಿಗೆ ಸಮಾಜ ಒಳ್ಳೆಯ ರೀತಿ ಇರಬೇಕೆಂದರೆ ಈ ರೀತಿಯ ಮನಸ್ಥಿತಿ ಇರುವ ವ್ಯಕ್ತಿಗಳು ಯಾವುದೇ ಧರ್ಮದಲ್ಲಿದ್ದರೂ ಸಹಿಸುವ ಕೆಲಸ ಮಾಡಬಾರದು. ಯಾರು ಹೇಳಿಕೆ ಕೊಡುತ್ತಿದ್ದಾರೆ ಅವರಿಗೆ, ಅವರ ಕುಟುಂಬಸ್ಥರು ಬುದ್ದಿ ಹೇಳಬೇಕು.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಗಲಭೆಗೆ ಕಾರಣರಾದ ಗೂಂಡಾಗಳನ್ನು ಸರ್ಕಾರ ಸುಮ್ಮನೆ ಬಿಡಬಾರದು: ಕೆಎಸ್ ಈಶ್ವರಪ್ಪ

ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಪ್ರೀತಂಗೌಡ

‘ಬೇರೆಯವರಿಗೆ ಜ್ವರ ಬಂದಿದೆ ಎಂದು ಹಣೆ ಮುಟ್ಟಿ ನೋಡಿದರೆ ಟೆಂಪ್ರೇಚರ್ ಗೊತ್ತಾಗುತ್ತೆ. ಇವರೆಲ್ಲ ಎಸಿ ಕಾರಿನಲ್ಲಿ ಕುಳಿತಿರುತ್ತಾರೆ. ಪಕ್ಕದವನಿಗೆ ಜ್ವರ ಬಂದರೆ ನನ್ನ ಟೆಂಪ್ರೇಚರ್ ಸರಿ ಇದೆಯಾ ಎಂದು ಮುಟ್ಟಿ ನೋಡಿಕೊಳ್ಳುತ್ತಾರೆ. ಪಕ್ಕದಲ್ಲಿ ಇರುವವರಿಗೆ ಬಂದಿರುವ ವೈರಲ್ ಫೀವರ್ ನಿಮಗೆ ಬರಲು ಎರಡು ದಿನ, ಇಪ್ಪತ್ತು ದಿನ ಅಥವಾ ಇಪ್ಪತ್ತು ವರ್ಷ ಬೇಕಾಗುತ್ತೆ. ರಾಮಲಿಂಗಾರೆಡ್ಡಿ ಅವರೇ ಸ್ವಲ್ಪ ಸಮಾಧಾನವಾಗಿರಿ, ನಿಮಗೂ ಸಂಸಾರ ಇದೆ, ನಿಮಗೂ ಮಕ್ಕಳಿದ್ದಾರೆ, ಅವರಿಗೂ ಮಕ್ಕಳಿದ್ದಾರೆ. ಇನ್ನು ಹತ್ತು ವರ್ಷ ಆದ್ಮೇಲೆ ನಿಮ್ಮ ಈ ಮನಸ್ಥಿತಿ ಮುಂದುವರಿದರೆ ದೇಶ ಯಾವ ಸ್ಥಿತಿಗೆ ಹೋಗುತ್ತೆ. ಆಫ್ಘಾನಿಸ್ತಾನದಲ್ಲಿ, ಪಾಕಿಸ್ತಾನದಲ್ಲಿ ಏನಾಗುತ್ತಿದೆ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ವಾ ಎಂದು ಪ್ರೀತಂಗೌಡ ಕಿಡಿಕಾರಿದ್ದಾರೆ.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ

ಇದೇ ವೇಳೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಲವು ನಾಯಕರು ಸೇರ್ಪಡೆ ವಿಚಾರ ‘ಕಾಂಗ್ರೆಸ್ ನಾಯಕರ ಹೇಳಿಕೆಗೆ ಮಾಜಿ ಶಾಸಕ ಪ್ರೀತಂಗೌಡ ತಿರುಗೇಟು ನೀಡಿದ್ದು, ಕಾಂಗ್ರೆಸ್‌ನಿಂದ ಬಿಜೆಪಿಗೆ ಕರೆದುಕೊಂಡು ಬರಲು ಇನ್ನೂ ಯಾವ ನಾಯಕರ ಜೊತೆಗೂ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಗೆಲ್ಲುವ ದೃಷ್ಟಿಯಿಂದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಎಂದರು.

ಇದನ್ನೂ ಓದಿ:ಶಿವಮೊಗ್ಗ ಗಲಾಟೆ ಸಂಬಂಧ ಮಂಗಳೂರಿನಲ್ಲಿ ಕೋಮುದ್ವೇಷದ ಫೇಸ್​ಬುಕ್ ಪೋಸ್ಟ್; ವಿಷ ಬಿತ್ತುವವರಿಗೆ ಎಚ್ಚರಿಕೆ ನೀಡಿದ ಎಸ್​ಪಿ ಶಶಿಕುಮಾರ್

ನಾನು ರಾಜಕಾರಣಕ್ಕೆ ಬಂದಿರುವುದು ತತ್ವ, ಸಿದ್ದಾಂತದ ಆಧಾರದ ಮೇಲೆ

‘ಪ್ರೀತಂಗೌಡ ರಾಜಕಾರಣಕ್ಕೆ ಬಂದಿರುವುದು ತತ್ವ ಸಿದ್ದಾಂತದ ಆಧಾರದ ಮೇಲೆ ಕೆಲಸ ಮಾಡಲು. ಅಂದು ಆರು ಸಾವಿರ ಓಟು ಇದ್ದ ಪಕ್ಷಕ್ಕೆ ಬಂದಿದ್ದು, ಈಗ 78 ಸಾವಿರಕ್ಕೆ ಹೋಗಿದೆ. ಇದನ್ನು ಬಿಟ್ಟು ನಾಲ್ಕು ಸಾವಿರ ಓಟು ಪಡೆದ ಪಕ್ಷಕ್ಕೆ ಹೋಗ್ತಾರಾ?. ನಾವೇ ಮನೆ ಕಟ್ಟಿ, ಬಣ್ಣ ಹೊಡೆದು ಗೃಹಪ್ರವೇಶ ಮಾಡಿ, ಬೇರೆ ಹೊಸ ಮನೆ ಕಟ್ಟುವ ಅವಶ್ಯಕತೆ ಏನಿದೆ. ನೆಂಟರು ಬಂದರು ಎಂದು ಹೇಳಿ ಬೇರೆ ಫಾರ್ಮ್‌ಹೌಸ್, ಗೆಸ್ಟ್‌ಹೌಸ್‌ಲಿ ಹೋಗಿ ಮಲಗಲ್ಲ. ನಮ್ಮ ಮನೆ ಯಜಮಾನಿಕೆ ಮಾಡಲು ಕಾರ್ಯಕರ್ತರಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು