ಶಿವಮೊಗ್ಗದಲ್ಲಿ ಗಲಭೆಗೆ ಕಾರಣರಾದ ಗೂಂಡಾಗಳನ್ನು ಸರ್ಕಾರ ಸುಮ್ಮನೆ ಬಿಡಬಾರದು: ಕೆಎಸ್ ಈಶ್ವರಪ್ಪ

ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಹಿಂದೂಗಳೇನಾದರೂ ತಿರುಗಿ ಬಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಈಶ್ವರಪ್ಪ ಹೇಳಿದರು. ಹಿಂದೂ ಕುಟುಂಬಗಳಿಗೆ ಧೈರ್ಯವಾಗಿರುವಂತೆ ವಿಶ್ವಾಸ ತುಂಬಿದ್ದೇವೆ ಎಂದು ಹೇಳಿದ ಅವರು ಅಮಾಯಕರಿಗೆ ತೊಂದರೆ ಕೊಡಬೇಡಿ ಅಂತ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ಶಿವಮೊಗ್ಗದಲ್ಲಿ ಗಲಭೆಗೆ ಕಾರಣರಾದ ಗೂಂಡಾಗಳನ್ನು ಸರ್ಕಾರ ಸುಮ್ಮನೆ ಬಿಡಬಾರದು: ಕೆಎಸ್ ಈಶ್ವರಪ್ಪ
|

Updated on:Oct 05, 2023 | 6:03 PM

ಶಿವಮೊಗ್ಗ: ನಗರದಲ್ಲಿ ರವಿವಾರದಂದು ಈದ್ ಮಿಲಾದ್ ಮೆರವಣಿಗೆ (Eid Milad procession) ಸಂದರ್ಭದಲ್ಲಿ ನಡೆದ ಗಲಭೆ, ಗಲಾಟೆಗೆ ಸಂಬಂಧಿಸಿದಂತೆ ವಾಸ್ತವಾಂಶ ಅರಿಯಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದ ಪಕ್ಷದ ನಾಯಕರು ರಾಗಿಗುಡ್ಡ ಪ್ರದೇಶದಲ್ಲಿ ವಾಸವಾಗಿರುವ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಟಿವಿ9 ಕನ್ನಡ ವಾಹಿನಿಯ ಶಿವಮೊಗ್ಗ ವರದಿಗಾರನೊಂದಿಗೆ ಮಾತಾಡಿದ ಹಿರಿಯ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ರವಿವಾರ ನಡೆದಿದ್ದು ಒಂದು ಪೂರ್ವ ನಿಯೋಜಿತ ಕೃತ್ಯವಾಗಿತ್ತು, ಮುಸಲ್ಮಾನ ಗೂಂಡಾಗಳು ಹಿಂದೂಗಳ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ಮತ್ತು ಲಾಠಿಗಳನ್ನು ತೂರಿದ್ದಾರೆ. ಕೆಲ ಹಿಂದೂ ಮಹಿಳೆಯರಿಗೆ ಗಾಯಗಳಾಗಿವೆ. ರಾಜ್ಯ ಸರ್ಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಹಿಂದೂಗಳೇನಾದರೂ ತಿರುಗಿ ಬಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಹೇಳಿದರು. ಹಿಂದೂ ಕುಟುಂಬಗಳಿಗೆ ಧೈರ್ಯವಾಗಿರುವಂತೆ ವಿಶ್ವಾಸ ತುಂಬಿದ್ದೇವೆ ಎಂದು ಹೇಳಿದ ಈಶ್ವರಪ್ಪಅಮಾಯಕರರಿಗೆ ತೊಂದರೆ ಕೊಡಬೇಡಿ ಅಂತ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಲಾಗಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Thu, 5 October 23

Follow us