ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷನ ಮನೆ ಮೇಲೆ ಈಡಿ ಅಧಿಕಾರಿಗಳ ದಾಳಿ, ತೀರ್ಥಹಳ್ಳಿಯಲ್ಲಿರುವ ಮನೆ ಮೇಲೂ ರೇಡ್
ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥಗೌಡ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಜುನಾಥಗೌಡರ ತೀರ್ಥಹಳ್ಳಿ ಮನೆಯ ಮೇಲೂ ಈಡಿ ಅಧಿಕಾರಿಗಳ ದಾಳಿ ನಡೆದಿದೆ. ಜಿಲ್ಲೆ ಯಾವುದೇ ಆಗಿರಲಿ, ಅಲ್ಲಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಿತಿವಂತರಾಗಿರುತ್ತಾರೆ.
ಶಿವಮೊಗ್ಗ: ಹೆಚ್ಚು ಕಡಿಮೆ ಒಂದು ವಾರದಿಂದ ಶಿವಮೊಗ್ಗ ನಗರ (Shivamogga city) ಸುದ್ದಿಯಲ್ಲಿದೆ. ರವಿವಾರದಂದು ಈದ್ ಮಿಲಾದ್ ಮೆರವಣಿಗೆಯ (Eid Milad procession) ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣಗಳು, ಪೊಲೀಸರ ಲಾಠಿಚಾರ್ಜ್, ಹಲವಾರು ಬಂಧನಗಳು, ಮಂತ್ರಿಗಳ ಮತ್ತು ವಿರೋಧ ಪಕ್ಷಗಳ ನಾಯಕರ ಸಮರ್ಥನೆ ಹಾಗೂ ಟೀಕೆಗಳು-ಎಲ್ಲವನ್ನು ನಾವು ವಿಸ್ತೃತವಾಗಿ ವರದಿ ಮಾಡಿದ್ದೇವೆ. ನಗರದ ರಾಗಿಗುಡ್ಡದ ಪ್ರದೇಶದಲ್ಲಿ 5 ನೇ ದಿನವೂ ಪ್ರತಿಬಂಧಕಾಜ್ಞೆ ಮುಂದುವರಿದಿದೆ. ಏತನ್ಮಧ್ಯೆ, ಇಂದು ಬೆಳಗ್ಗೆ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥಗೌಡ (RM Manjunath Gowda) ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಜುನಾಥಗೌಡರ ತೀರ್ಥಹಳ್ಳಿ ಮನೆಯ ಮೇಲೂ ಈಡಿ ಅಧಿಕಾರಿಗಳ ದಾಳಿ ನಡೆದಿದೆ. ಜಿಲ್ಲೆ ಯಾವುದೇ ಆಗಿರಲಿ, ಅಲ್ಲಿನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಿತಿವಂತರಾಗಿರುತ್ತಾರೆ. ಶ್ರೀಮಂತರನ್ನು ಬ್ಯಾಂಕ್ ಅಧ್ಯಕ್ಷನಾಗಿ ನೇಮಕ ಮಾಡಿರುತ್ತಾರೋ ಅಥವಾ ಅಧ್ಯಕ್ಷನಾದ ಬಳಿಕ ಅವರು ಕುಬೇರರಾಗುತ್ತಾರೋ ಗೊತ್ತಿಲ್ಲ ಮಾರಾಯ್ರೇ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ