ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ: ಶಿವಮೊಗ್ಗದಲ್ಲಿ ವಿಹೆಚ್​ಪಿಯಿಂದ ಮಹಾ ಪಂಚಾಯತ್

ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡದಲ್ಲಿ ಹಿಂಸಾಚಾರ ನಡೆದಿತ್ತು. ಶಿವಮೊಗ್ಗದಲ್ಲಿ ಆದ ಘಟನೆ ಪೂರ್ವ ನಿಯೋಜಿತ ಕೃತ್ಯ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಆರೋಪಿಸಿದ ಶರಣ್ ಪಂಪ್​ವೆಲ್, ವಿಶ್ವ ಹಿಂದೂ ಪರಿಷತ್​ನಿಂದ ಶಿವಮೊಗ್ಗದಲ್ಲಿ ಮಹಾ ಪಂಚಾಯತ್ ನಡೆಸಲು ನಿರ್ಧಾರಿಸಲಾಗಿದೆ ಎಂದಿದ್ದಾರೆ.

ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ: ಶಿವಮೊಗ್ಗದಲ್ಲಿ ವಿಹೆಚ್​ಪಿಯಿಂದ ಮಹಾ ಪಂಚಾಯತ್
ಶರಣ್ ಪಂಪ್​ವೆಲ್Image Credit source: FILE
Follow us
ಅಶೋಕ್​ ಪೂಜಾರಿ, ಮಂಗಳೂರು
| Updated By: Rakesh Nayak Manchi

Updated on: Oct 06, 2023 | 2:58 PM

ಮಂಗಳೂರು, ಅ.6: ರಾಗಿಗುಡ್ಡದಲ್ಲಿ ನಡೆದ ಹಿಂಸಾಚಾರ (Ragigudda Violence) ಪ್ರಕರಣ ಸಂಬಂಧ ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷತ್​ನಿಂದ (VHP) ಮಹಾ ಪಂಚಾಯತ್ ನಡೆಸಲು ನಿರ್ಧಾರಿಸಲಾಗಿದೆ ಎಂದು ಪರಿಷತ್​ನ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಟಿವಿ 9ಗೆ ಹೇಳಿಕೆ ನೀಡಿದ ಶರಣ್ ಪಂಪುವೆಲ್, ಶಿವಮೊಗ್ಗದಲ್ಲಿ ಆದ ಘಟನೆ ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದೊಂದು ಭಯೋತ್ಪಾದಕ ಕೃತ್ಯ. ಸಾಮೂಹಿಕವಾಗಿ ಹಿಂದೂ ಮನೆಗಳ ಮೇಲೆ ದಾಳಿ ಮಾಡೋದು ಸಣ್ಣ ಘಟನೆಯಲ್ಲ. ಇದೊಂದು ಗುಂಪು ಕೃತ್ಯ ಎಂದರು.

ಶಿವಮೊಗ್ಗದಲ್ಲಿ ನಡೆದ ಈ ಕೃತ್ಯಗಳು ಕಾಶ್ಮೀರದಲ್ಲಿ ಈ ಹಿಂದೆ ನಡೆಯುತಿತ್ತು. ಅಲ್ಲಿ ಹಿಂದೂಗಳ ಮೇಲೆ, ಪೊಲೀಸ್, ಸೈನಿಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿತ್ತು. ಶಿವಮೊಗ್ಗದಲ್ಲಿಯೂ ಇದೇ ರೀತಿಯಾಗುತ್ತಿದೆ. ಶಿವಮೊಗ್ಗದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿ ಎರಡು ಮೂರು ವರ್ಷದಿಂದ ಈ ರೀತಿಯ ಕೃತ್ಯ ಆಗುತ್ತಿದೆ ಎಂದರು.

ಇದನ್ನೂ ಓದಿ: ಶಿವಮೊಗ್ಗ ಈದ್​ ಗಲಾಟೆ ಬಗ್ಗೆ ಸರ್ಕಾರಕ್ಕೆ​ ಖಡಕ್​ ವಾರ್ನಿಂಗ್​ ಕೊಟ್ಟ ಬಸನಗೌಡ ಪಾಟೀಲ್​ ಯತ್ನಾಳ್​; ಇಲ್ಲಿದೆ ವಿಡಿಯೋ

ಹರ್ಷನ ಹತ್ಯೆಯಿಂದ ಹಿಡಿದು ಸಾಕಷ್ಟು ಪ್ರಕರಣಗಳಾಗುತ್ತಿವೆ. ಶಿವಮೊಗ್ಗದ ಜನತೆ ಬಹಳಷ್ಟು ಗಾಬರಿಗೊಂಡಿದ್ದಾರೆ. ಇದಕ್ಕೆ ಪೂರ್ಣವಿರಾಮ ಹಾಕಲು ಹಿಂದೂ ಸಮಾಜವೇ ಮುಂದೆ ಬರಬೇಕು. ಉತ್ತರ ಭಾರತದಲ್ಲಿ ಮಹಾ ಪಂಚಾಯತ್ ಎಂದು ಕರೆಯುತ್ತಾರೆ. ಆ ಮಹಾ ಪಂಚಾಯತ್ ಅನ್ನು ಶಿವಮೊಗ್ಗದಲ್ಲಿ ಕರೆಯುತ್ತೇವೆ ಎಂದರು.

ಮಹಾಪಂಚಾಯತ್​ನಲ್ಲಿ ಧಾರ್ಮಿಕ, ಸಾಮಾಜಿಕ ಮುಖಂಡರು, ಸಾಧು ಸಂತರು, ಹಿಂದೂ ಸಂಘಟನೆಗಳ ಪ್ರಮುಖರು ಒಟ್ಟು ಸೇರುತ್ತಾರೆ. ಸಭೆ ನಡೆಸಿ ಮಹಾ ಪಂಚಾಯತ್ ಮೂಲಕ ಒಂದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಹಿರಿಯರ ಜೊತೆ ಮಾತನಾಡಿ ಯಾವಾಗ ಮತ್ತು ಹೇಗೆ ಎಂಬುದನ್ನು ತಿಳಿಸುತ್ತೇವೆ ಎಂದರು.

ಶಿವಮೊಗ್ಗವನ್ನು ಮತಾಂಧರ ಕೈಯಿಂದ, ಮುಸಲ್ಮಾನ ದಂಗೆಕೋರರಿಂದ ಉಳಿಸಬೇಕಾಗಿದೆ. ಅಲ್ಲಿನ ಸಮಾಜಕ್ಕೆ ಧೈರ್ಯ ತುಂಬಬೇಕಾಗಿದೆ. ಸರ್ಕಾರ ಪೊಲೀಸ್ ಇಲಾಖೆ ಈ ಕಾರ್ಯಕ್ರಮಕ್ಕೆ ಅನುಮತಿ ಕೊಡುತ್ತಾ ಇಲ್ವಾ ಎಂದು ಗೊತ್ತಿಲ್ಲ. ಆದರೆ ಇವತ್ತು ಅಲ್ಲಿ ಈ ಮಹಾ ಪಂಚಾಯತ್ ಮಾಡಬೇಕಾದ ಅನಿವಾರ್ಯತೆಯಿದೆ ಎಂದರು.

ಇದನ್ನೂ ಓದಿ: ಸಾಹಿತ್ಯ, ಸಂಸ್ಕೃತಿಯ ತೊಟ್ಟಿಲಾಗಿದ್ದ ಶಿವಮೊಗ್ಗದಲ್ಲೀಗ ಕೋಮುಗಲಭೆಯದ್ದೇ ಅಬ್ಬರ

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಯಾದರೆ ಅದಕ್ಕೆ ಶಿವಮೊಗ್ಗದ ನಂಟಿರುತ್ತದೆ. ಮಂಗಳೂರು ಕುಕ್ಕರ್ ಬಾಂಬ್ ಆರೋಪಿ ಶಿವಮೊಗ್ಗದವ. ಕಾರ್ಯಕರ್ತರ ಕೊಲೆಯಾದರೆ ಅಲ್ಲಿಯು ಶಿವಮೊಗ್ಗದ ಒಬ್ಬನ ನಂಟಿರುತ್ತದೆ. ಮಲೆನಾಡನ್ನು ಟಾರ್ಗೆಟ್ ಮಾಡಿಕೊಂಡು ಷಡ್ಯಂತ್ರ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡದಾದ ದುಷ್ಟ ಶಕ್ತಿಗಳ ಕೈವಾಡ ಇದೆ ಎಂದು ಆರೋಪಿಸಿದರು.

ಈಗಲೇ ಇದನ್ನು ನಿಲ್ಲಿಸದಿದ್ದರೆ ಮುಂದೆ ದೊಡ್ಡ ಸಮಸ್ಯೆಯನ್ನು ಹಿಂದು ಸಮಾಜ ಅನುಭವಿಸಲಿದೆ. ಹಿಂದೂ ಮನೆಗಳ, ಶ್ರದ್ಧಾಬಿಂದುಗಳ ರಕ್ಷಣೆಗಾಗಿ ಈ ರೀತಿಯ ಕಾರ್ಯಕ್ರಮ ನಡೆಸಬೇಕಾಗುತ್ತದೆ. ಇದೊಂದು ದೊಡ್ಡ ಘಟನೆಯಾಗಿದ್ದು, ಶಿವಮೊಗ್ಗವನ್ನು ಉಳಿಸುವುದು ಸರ್ಕಾರದ ಕೆಲಸ. ಈ ಘಟನೆಯನ್ನು NIA ತನಿಖೆಗೂ ಒಳಪಡಿಸಬೇಕು ಎಂದರು.

ಹಿಂದೆ ನಮ್ಮ ಹಿಂದೂ ಸಮಾಜವನ್ನು ಪೂರ್ವಜರು ಶೌರ್ಯ ಪರಾಕ್ರಮದಿಂದ ರಕ್ಷಣೆ ಮಾಡಿದ್ದರು. ಮುಂದಿನ ದಿನಗಳಲ್ಲಿ ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಾದ ಸಂದರ್ಭ ಬರಬಹುದು. ಇವತ್ತು ಕರಾವಳಿ ಶಾಂತವಾಗಿದೆ. ಇಲ್ಲಿನ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ. ಈ ರೀತಿಯ ಘಟನೆ ಆದಾಗ ನಾವು ಸರಿಯಾದ ವಿರೋಧ ವ್ಯಕ್ತಪಡಿಸಿದ್ದೇವೆ. ಹೀಗಾಗಿ ತಮ್ಮ ತಾಣವನ್ನು ಮಲೆನಾಡಿಗೆ ಶಿವಮೊಗ್ಗಕ್ಕೆ ಶಿಫ್ಟ್ ಮಾಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ