ಶಿವಮೊಗ್ಗ ಗಲಭೆ: ರಾಗಿಗುಡ್ಡ ಏರಿಯಾದಲ್ಲಿ ವಾಸವಾಗಿರುವ ಈ ಕುಟುಂಬ ಅನುಭವಿಸಿದ ಆತಂಕ, ಯಾತನೆ ಪದಗಳಲ್ಲಿ ಹೇಳಲಾಗದು
ಗೃಹ ಸಚಿವ ಜಿ ಪರಮೇಶ್ವರ್ ಗಲಭೆಯಲ್ಲಿ ಭಾಗಿಯಾಗಿದ್ದ ಸುಮಾರು 40 ಜನರನ್ನು ಬಂಧಿಸಲಾಗಿದೆ ಅಂತ ಹೇಳುತ್ತಾರೆ. ಈ ಕುಟುಂಬ ಅನುಭವಿಸಿದ ದುಗುಡ, ಭಯ ಮತ್ತು ಆತಂಕವನ್ನು ಆ ದುಷ್ಟರಿಗೆ ಪೊಲೀಸರು ಹೇಗೆ ಮನವರಿಕೆ ಮಾಡಿಸುತ್ತಾರೆ? ಕ್ರಮ ತೆಗೆದುಕೊಳ್ಳಲಾಗಿದೆ ಅಂತ ಸಚಿವರು ಹೇಳಿದಾಕ್ಷಣ ಎಲ್ಲವೂ ನಾರ್ಮಲ್ ಆಗಲಾರದು.
ಶಿವಮೊಗ್ಗ: ನಗರದ ರಾಗಿಗುಡ್ಡದ 10ನೇ ಕ್ರಾಸ್ ನಲ್ಲಿ ರವಿವಾರ ಸಾಯಂಕಾಲ ನಡೆದ ಕಿಡಿಗೇಡಿಗಳ (miscreants) ದುಷ್ಕೃತ್ಯದಿಂದ ಭೀತಿಗೊಳಗಾಗಿರುವ ಅಲ್ಲಿನ ನಿವಾಸಿಗಳಿಗೆ ಚೇತರಿಸಿಕೊಳ್ಳಲು ಸಮಯ ಹಿಡಿಯಲಿದೆ. ಕಿಡಿಗೇಡಿಗಳಿಂದ ಹಲ್ಲೆಗೊಳಗಾದ ಮನೆಯೊಂದರಲ್ಲಿ ವಾಸವಾಗಿರುವ ಮಲ್ಲಿಕಾರ್ಜುನ (Mallikarjun) ಎನ್ನುವವರ ಕುಟುಂಬ ಸದಸ್ಯರು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ತಮ್ಮ ನೋವು ಆತಂಕವನ್ನು ತೋಡಿಕೊಂಡಿದ್ದಾರೆ. ಈ ಮನೆಯಲ್ಲಿ ಒಂದು ಒಂದೂವರೆ ತಿಂಗಳಿನ ಹಸುಳೆ (infant) ಮತ್ತು ಬಾಣಂತಿಯೂ (nursing mother) ಇದ್ದಾರೆ. ಕಲ್ಲು ತೂರಾಟ ನಡೆದು ಕಿಟಕಿಯ ಗ್ಲಾಸ್ ಒಡೆದಾಗ ಮಗುವನ್ನು ಕಿಟಕಿಯ ಪಕ್ಕದಲ್ಲೇ ಮಲಗಿಸಲಾಗಿತ್ತಂತೆ. ಮನೆಯ ಮೇಲೆ ಕಲ್ಲುಗಳು ಬೀಳಲಾರಂಭಿಸಿದ ಕೂಡಲೇ ಅವರು ಲೈಟ್ ಗಳನ್ನೆಲ್ಲ ಆಫ್ ಮಾಡಿ ಒಂದು ಕತ್ತಲೆ ಕೋಣೆಯಲ್ಲಿ ಭಯದಿಂದ ನಡುಗುತ್ತಾ ಕುಳಿತುಬಿಟ್ಟಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್ ಗಲಭೆಯಲ್ಲಿ ಭಾಗಿಯಾಗಿದ್ದ ಸುಮಾರು 40 ಜನರನ್ನು ಬಂಧಿಸಲಾಗಿದೆ ಅಂತ ಹೇಳುತ್ತಾರೆ. ಈ ಕುಟುಂಬ ಅನುಭವಿಸಿದ ದುಗುಡ, ಭಯ ಮತ್ತು ಆತಂಕವನ್ನು ಆ ದುಷ್ಟರಿಗೆ ಪೊಲೀಸರು ಹೇಗೆ ಮನವರಿಕೆ ಮಾಡಿಸುತ್ತಾರೆ? ಕ್ರಮ ತೆಗೆದುಕೊಳ್ಳಲಾಗಿದೆ ಅಂತ ಸಚಿವರು ಹೇಳಿದಾಕ್ಷಣ ಎಲ್ಲವೂ ನಾರ್ಮಲ್ ಆಗಲಾರದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ