ಶಿವಮೊಗ್ಗ ಗಲಭೆ; ಮುಖಕ್ಕೆ ಕಪ್ಪುಬಟ್ಟೆ ಕಟ್ಟಿದ್ದ ಗಲಭೆಕೋರರು ಹಿಂದೂ ಮಹಿಳೆಯರನ್ನು ಸುಮ್ಮನೆ ಬಿಡಲ್ಲ ಅಂತ ಅರಚುತ್ತಿದ್ದರು: ರಾಗಿಗುಡ್ಡದ ಗೃಹಿಣಿ
ಯಾರ ಇನ್ ಫ್ಲುಯೆನ್ಸ್ ಕೂಡ ನಮ್ಮ ಸರ್ಕಾರದ ಮುಂದೆ ನಡೆಯಲ್ಲ, ಗಲಭೆಕೋರರು ಯಾರೇ ಆಗಿರಲಿ, ಸರ್ಕಾರ ಬಿಡೋದಿಲ್ಲ, ನೀವ್ಯಾರೂ ಹೆದರುವ ಆವಶ್ಯಕತೆಯಿಲ್ಲ, ಧೈರ್ಯವಾಗಿರಿ ಸರ್ಕಾರ ಎಲ್ಲ ಕ್ರಮ ತೆಗದುಕೊಳ್ಳುತ್ತದೆ ಎಂದು ಮಧು ಬಂಗಾರಪ್ಪ ಮಹಿಳೆಗೆ ಆಶ್ವಾಸನೆ ನೀಡಿದರು.
ಶಿವಮೊಗ್ಗ: ರವಿವಾರದಂದು ಈದ್-ಮಿಲಾದ್ ಮೆರವಣಿಗೆ (Eid Milad procession) ವೇಳೆ ನಡೆದ ಗಲಭೆಗಳು ನಗರದ ಅದರಲ್ಲೂ ವಿಶೇಷವಾಗಿ ನಗರದ ರಾಗಿಗುಡ್ಡ ಪ್ರದೇಶದ ಜನ ಹೆದರಿ ಕಂಗಾಲಾಗುವಂತೆ ಮಾಡಿವೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಗಲಭೆಗ್ರಸ್ಥ ಪ್ರದೇಶಕ್ಕೆ ಭೇಟಿ ನೀಡಿ ತೊಂದರೆಗೊಳಗಾದ ಜನರನ್ನು ಮಾತಾಡಿಸಿ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಿದರು. ಇಲ್ಲಿನ ನಿವಾಸಿ ಯಾಗಿರುವ ಗೃಹಿಣಿಯೊಬ್ಬರು(housewife) ಸಚಿವರಿಗೆ ಘಟನೆಯನ್ನು ವಿವರಿಸುವಾಗ ಗಲಭೆಕೋರರು ಆಡಿದ ಮಾತುಗಳನ್ನು ಹೇಳುತ್ತಿದ್ದಾರೆ. ನಾವು ಹಿಂದೂ ಜನರನ್ನು ಸುಮ್ಮನೆ ಬಿಡೋದಿಲ್ಲ, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತೇವೆ, ಪೊಲೀಸರು ಬಂಧಿಸಿದರೆ ನಮ್ಮ ಇನ್ ಫ್ಲುಯೆನ್ಸ್ ಮೇಲಿನವರೆಗೆ ಇದೆ, ಕೂಡಲೇ ಹೊರಗೆ ಬಂದುಬಿಡುತ್ತೇವೆ ಅಂತ ಹೇಳುತ್ತಿದ್ದರು ಎಂದು ಗೃಹಿಣಿ ಸಚಿವರಿಗೆ ತಿಳಿಸಿದರು. ಯಾರ ಇನ್ಫ್ಲುಯೆನ್ಸ್ ಕೂಡ ನಮ್ಮ ಸರ್ಕಾರದ ಮುಂದೆ ನಡೆಯಲ್ಲ, ಗಲಭೆಕೋರರು ಯಾರೇ ಆಗಿರಲಿ, ಸರ್ಕಾರ ಬಿಡೋದಿಲ್ಲ, ನೀವ್ಯಾರೂ ಹೆದರುವ ಆವಶ್ಯಕತೆಯಿಲ್ಲ, ಧೈರ್ಯವಾಗಿರಿ ಸರ್ಕಾರ ಎಲ್ಲ ಕ್ರಮ ತೆಗದುಕೊಳ್ಳುತ್ತದೆ ಎಂದು ಮಧು ಬಂಗಾರಪ್ಪ ಮಹಿಳೆಗೆ ಆಶ್ವಾಸನೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಇಂದು ಸೂರ್ಯಗ್ರಹಣ ಶನಿ ಪತ ಬದಲಾವಣೆ ಹೇಗೆ?

Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ

ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್ ಜಾಮ್
