ಸಿದ್ದರಾಮಯ್ಯ ಮತ್ತು ಶಿವಕುಮಾರ್​ರನ್ನು ಮೊದಲು ಕಳ್ಳರು ಅಂತಿದ್ದೆ ಈಗ ದಡ್ಡರು ಅಂತಲೂ ಹೇಳಬೇಕಿದೆ: ಕೆಎಸ್ ಈಶ್ವರಪ್ಪ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಹರಿಸಿ ಅಂತ ಮೊದಲ ಆದೇಶ ನೀಡಿದಾಗಲೇ, ರೈತ ನಾಯಕರನ್ನು, ವಿರೋಧ ಪಕ್ಷಗಳ ಶಾಸಕರನ್ನು, ರಾಜ್ಯದ ಸಂಸದರನ್ನು, ಕಾನೂನು ಪರಿಣಿತರನ್ನು ಕರೆದು ಸಬೆ ನಡೆಸಿದ್ದರೆ ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಕಾವೇರಿ ಒಡಲು ಬರಿದಾದ ಬಳಿಕ ಅವರೆಲ್ಲರನ್ನು ಕರೆದು ಸಭೆ ನಡೆಸಿದರೆ ಪ್ರಯೋಜನವೇನು ಬಂತು ಎಂದು ಈಶ್ವರಪ್ಪ ಹೇಳಿದರು.

ಸಿದ್ದರಾಮಯ್ಯ ಮತ್ತು ಶಿವಕುಮಾರ್​ರನ್ನು ಮೊದಲು ಕಳ್ಳರು ಅಂತಿದ್ದೆ ಈಗ ದಡ್ಡರು ಅಂತಲೂ ಹೇಳಬೇಕಿದೆ: ಕೆಎಸ್ ಈಶ್ವರಪ್ಪ
|

Updated on: Sep 30, 2023 | 1:08 PM

ಶಿವಮೊಗ್ಗ: ಇಂಡಿಯ ಮೈತ್ರಿಕೂಟಕ್ಕೆ ಬದ್ಧತೆಯನ್ನು ತೋರಿಸಲು, ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ (MK Stalin) ಮತ್ತು ಸೋನಿಯಾಗಾಂಧಿಯವರನ್ನು (Sonia Gandhi) ತೃಪ್ತಿಪಡಿಸಲು ಕಳ್ಳತನದಿಂದ ಕಾವೇರಿ ನೀರು ಹರಿಸಿದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರನ್ನು ಮೊದಲು ಕಳ್ಳರು ಅಂತ ಮಾತ್ರ ಕರೆಯುತ್ತಿದ್ದೆ ಈಗ ಅವರನ್ನು ದಡ್ಡರು ಅಂತಲೂ ಕರೆಯಬೇಕಿದೆ ಎಂದು ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಇಂದು ನಗರದಲ್ಲಿ ಪತ್ರಿಕಾಗೋಷ್ಟಿಯೊಂದನ್ನು ನಡೆಸಿ ಹೇಳಿದರು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀರು ಹರಿಸಿ ಅಂತ ಮೊದಲ ಆದೇಶ ನೀಡಿದಾಗಲೇ, ರೈತ ನಾಯಕರನ್ನು, ವಿರೋಧ ಪಕ್ಷಗಳ ಶಾಸಕರನ್ನು, ರಾಜ್ಯದ ಸಂಸದರನ್ನು, ಕಾನೂನು ಪರಿಣಿತರನ್ನು ಕರೆದು ಸಬೆ ನಡೆಸಿದ್ದರೆ ರಾಜ್ಯಕ್ಕೆ ಈ ಸ್ಥಿತಿ ಬರುತ್ತಿರಲಿಲ್ಲ. ಕಾವೇರಿ ಒಡಲು ಬರಿದಾದ ಬಳಿಕ ಅವರೆಲ್ಲರನ್ನು ಕರೆದು ಸಭೆ ನಡೆಸಿದರೆ ಪ್ರಯೋಜನವೇನು ಬಂತು ಎಂದು ಈಶ್ವರಪ್ಪ ಹೇಳಿದರು. ಈ ಕಾರಕ್ಕಾಗೇ ತಾವು ಸಿದ್ದರಾಮಯ್ಯ ಮತ್ತು ಶಿವಕುಮಾರ್ ರನ್ನು ಕಳ್ಳರು ಮತ್ತು ದಡ್ಡರು ಅನ್ನೋದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us