DK Shivakumar; ಜೆಡಿಎಸ್ ಮತ್ತು ಬಿಜೆಪಿ ನಾಯಕರು ಈಗಲೇ ಪ್ರತಿಭಟನೆ ಶುರುಮಾಡಲಿ: ಡಿಕೆ ಶಿವಕುಮಾರ್, ಉಪ ಮುಖ್ಯಮಂತ್ರಿ
ಸಂಪುಟವನ್ನು ಯಾರ್ಯಾರೆಲ್ಲ ಸೇರಲಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಶಿವಕುಮಾರ್ ಹಾರಿಕೆ ಉತ್ತರ ನೀಡಿದರು.
ಬೆಂಗಳೂರು: ಸಂಪುಟ ವಿಸ್ತರಣೆ ಕಸರತ್ತು ಇನ್ನೂ ಕೊನೆಗೊಂಡಿಲ್ಲ ಆದರೆ ಅಲ್ಪಾವಧಿಗಾಗಿ ದೆಹಲಿಯಿಂದ ಬೆಂಗಳೂರಿಗೆ ಕಳೆದ ರಾತ್ರಿ ವಾಪಸ್ಸಾದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗೆಲುವಾಗಿದ್ದರು ಮತ್ತು ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳೊಂದಿಗೆ ನಗುನಗುತ್ತಾ ಹಾಸ್ಯಭರಿತ ಭಾಷೆಯಲ್ಲಿ ಮಾತಾಡಿದರು. ಸಂಪುಟವನ್ನು ಯಾರ್ಯಾರೆಲ್ಲ ಸೇರಲಿದ್ದಾರೆ ಅಂತ ಕೇಳಿದ ಪ್ರಶ್ನೆಗೆ ಅವರು ಹಾರಿಕೆ ಉತ್ತರ ನೀಡಿದರು. ಜೂನ್ ತಿಂಗಳಲ್ಲಿ ಕಾಂಗ್ರೆಸ್ ಪಕ್ಷ (Congress party) ನೀಡಿರುವ ಗ್ಯಾರಂಟಿಗಳನ್ನು (guarantees) ಈಡೇರಿಸದಿದ್ದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪ್ರತಿಭಟನೆ ಆರಂಭಿಸುತ್ತಾರಂತೆ ಎಂದು ಪತ್ರಕರ್ತರು ಹೇಳಿದಾಗ ಜೂನ್ ಯಾಕೆ ನಾಳೆಯಿಂದಲೇ ಶುರುಮಾಡಲಿ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!

