KSE in Hubballi: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷವನ್ನು ದೂರಿದ ಕೆಎಸ್ ಈಶ್ವರಪ್ಪ

KSE in Hubballi: ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಸಮಸ್ಯೆಗಳಿಗೂ ಕಾಂಗ್ರೆಸ್ ಪಕ್ಷವನ್ನು ದೂರಿದ ಕೆಎಸ್ ಈಶ್ವರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 26, 2023 | 1:57 PM

ಆದರೆ ಪಕ್ಷ ಬೆಳೆದಂತೆ ಕಾಂಗ್ರೆಸ್ ಗಾಳಿ ನಮ್ಮ ಪಕ್ಷದ ಮೇಲೆ ಬೀಸತೊಡಗಿತು ಎಂದು ಈಶ್ವರಪ್ಪ ಹೇಳಿದರು.

ಹುಬ್ಬಳ್ಳಿ: ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾದ ಬಳಿಕ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದೇ ಆತ್ಮಾವಲೋಕನವಾಗಿ (Retrospection) ಪರಿಣಮಿಸಿದಂತಿದೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ (KS Eshwarappa), ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳಿಗೂ (infighting), ನಾಯಕರ ನಡುವಿನ ಒಳಜಗಳಗಳಿಗೂ ಕಾಂಗ್ರೆಸ್ ಪಕ್ಷವನ್ನು ದೂರಿದರು. ಆರಂಭಿಕ ಹಂತದಲ್ಲಿ ರಾಜ್ಯದಲ್ಲಿ ಬಿಜೆಪಿ ಕೇವಲ 4 ಸದಸ್ಯರ ಪಕ್ಷವಾಗಿದ್ದಾಗ ಭಾರೀ ಶಿಸ್ತಿತ್ತು, ಆದರೆ ಪಕ್ಷ ಬೆಳೆದಂತೆ ಕಾಂಗ್ರೆಸ್ ಗಾಳಿ ನಮ್ಮ ಪಕ್ಷದ ಮೇಲೆ ಬೀಸತೊಡಗಿತು ಎಂದು ಈಶ್ವರಪ್ಪ ಹೇಳಿದರು. ಕಾಂಗ್ರೆಸ್ ಪಕ್ಷದವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಈಗ ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು. ಕೇಳಿಸಿಕೊಂಡ್ರಾ, ತಮ್ಮ ಪಕ್ಷದ ಸಮಸ್ಯೆಗಳಿಗೂ ಬಿಜೆಪಿ ನಾಯಕರು ಕಾಂಗ್ರೆಸ್ ಅನ್ನು ದೂರುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

.

Published on: Jun 26, 2023 01:52 PM