Gadag; ಐದು ವರ್ಷದ ಅವಧಿಗೆ ನಾನೇ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಹೇಳಿದ ದಿನವೇ ಈ ಸರ್ಕಾರ ಬಿದ್ದು ಹೋಗುತ್ತದೆ: ಕೆಎಸ್ ಈಶ್ವರಪ್ಪ
ಶಿವಕುಮಾರ್ ಅವರು ಸಿದ್ದರಾಮಯ್ಯ ಬೇಡ್ವೇ ಬೇಡ ಅಂತ ಹೇಳಿ ಬೇಕಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಿ ಅಂತ ಯಾಕೆ ಹೇಳಿದರು ಅಂತ ಈಶ್ವರಪ್ಪ ಪ್ರಶ್ನಿಸಿದರು.
ಗದಗ: ಬಹಳ ದಿನಗಳ ಬಳಿಕ ಮಾಜಿ ಶಾಸಕ ಕೆಎಸ್ ಈಶ್ವರಪ್ಪ (KS Eshwarappa) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಚುನಾವಣೆಗೆ ಮೊದಲು ಸಿದ್ದರಾಮಯ್ಯರನ್ನು (Siddaramaiah) ಗುರಿಯಾಗಿಸಿ ಮಾತಾಡುತ್ತಿದ್ದ ಅವರು ಈಗಲೂ ಅದೇ ಕಾಯಕವನ್ನು ಮುಂದುವರಿಸಿದ್ದಾರೆ. ಕಾಂಗ್ರೆಸ್ ಪಕ್ಷ 135 ಸೀಟುಗಳನ್ನು ಗೆದ್ದರೂ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಹಲವಾರು ದಿನ ಬೇಕಾಯಿತು, ಡಿಕೆ ಶಿವಕುಮಾರ್ (DK Shivakumar) ಬಣದವರು ಸಿದ್ದರಾಮಯ್ಯ ಯಾಕೆ ಮುಖ್ಯಮಂತ್ರಿ ಆಗಬಾರದು ಅಂತ 15 ಅಂಶಗಳ ಪಟ್ಟಿ ತಯಾರಿಸಿ ಬಿಡುಗಡೆ ಮಾಡಿದರು. ಶಿವಕುಮಾರ್ ಅವರು ಸಿದ್ದರಾಮಯ್ಯ ಬೇಡ್ವೇ ಬೇಡ ಅಂತ ಹೇಳಿ ಬೇಕಿದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿ ಅಂತ ಯಾಕೆ ಹೇಳಿದರು ಅಂತ ಈಶ್ವರಪ್ಪ ಪ್ರಶ್ನಿಸಿದರು. ತಾನು 5-ವರ್ಷ ಅವಧಿಗೆ ಮುಖ್ಯಮಂತ್ರಿ ತಾವೇ ಅಂತ ಸಿದ್ದರಾಮಯ್ಯ ಹೇಳುತ್ತಿಲ್ಲ, ಅವರು ಹಾಗೆ ಹೇಳಿದರೆ ಅದೇ ದಿನ ಈ ಸರ್ಕಾರ ಬಿದ್ದು ಹೋಗುತ್ತೆ ಎಂದು ಈಶ್ವರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos