‘ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಸ್ಕೀಂ ಕೊಡಲ್ಲ’ ಎಂದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಕೆಎಸ್ ಈಶ್ವರಪ್ಪ ಕಿಡಿ
ಮತದಾರರ ಕಾಲಿಗೆ ಬಿದ್ದು ಮತ ಪಡೆದು ಸಿಎಂ, ಡಿಸಿಎಂ ಆಗಿದ್ದಾರೆ. ಈಗ ಅದೇ ಜನರಿಗೆ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು:‘ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲ ಗ್ಯಾರಂಟಿ ಸ್ಕೀಂ ಕೊಡಲ್ಲ’ ಎಂದು ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಹೇಳಿಕೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ(Siddaramaiah), ಡಿಕೆ ಶಿವಕುಮಾರ್ ಗ್ಯಾರಂಟಿ ಜಾರಿಯ ಭರವಸೆ ಕೊಟ್ಟಿದ್ದರು. ಮೊದಲ ಸಂಪುಟದಲ್ಲೇ ಗ್ಯಾರಂಟಿ ಜಾರಿ ಬಗ್ಗೆ ಭರವಸೆ ನೀಡಿದ್ದರು(Congress Guarantee). ಜಾರಿಗೆ ತರೋದು ಬಿಡೋದು ಆಮೇಲೆ, ಆದ್ರೆ ಹಾದಿ ಬೀದೀಲಿ ಹೋಗೋರಿಗೆಲ್ಲ ಕೊಡೋಕಾಗಲ್ಲ ಅಂತಿದಾರೆ ಈಗ. ಮತದಾರರ ಕಾಲಿಗೆ ಬಿದ್ದು ಮತ ಪಡೆದು ಸಿಎಂ, ಡಿಸಿಎಂ ಆಗಿದ್ದಾರೆ. ಈಗ ಅದೇ ಜನರಿಗೆ ಹಾದಿ ಬೀದೀಲಿ ಹೋಗೋರು ಅಂತಿರೋದು ಸರಿಯಲ್ಲ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಯಾವ ಜನರ ಬಗ್ಗೆ ಉಡಾಫೆಯಾಗಿ ಮಾತನಾಡಿದರೂ, ಮತ್ತೆ ಅದೇ ಜನರ ಎದುರು ಲೋಕಸಭೆ ಚುನಾವಣೆಗೆ ಮತ ಕೇಳೋಕ್ಕೆ ಹೋಗಬೇಕು. ಆಗ ಹಾದಿ ಬೀದೀಲಿರೊರ ಬಳಿ ಮತ ಕೇಳಬೇಡಿ ಅಂತ ಜನ ಇವರಿಬ್ಬರಿಗೆ ಛೀಮಾರಿ ಹಾಕಿ ಮನೆಗೆ ಕಳಿಸ್ತಾರೆ. ಚುನಾವಣೆ ಮೊದಲು ಎಲ್ಲರಿಗೂ ಉಚಿತ ಅಂತ ಭರವಸೆ ಕೊಟ್ರು. ಆದ್ರೆ ಈಗ ಕಾಂಗ್ರೆಸ್ ನಾಯಕರು ಮಾತನಾಡುತ್ತಿರುವ ರೀತಿ ಸರಿಯಲ್ಲ. ಕಾಂಗ್ರೆಸ್ ರಾಜ್ಯದ ಮತದಾರರಿಗೆ ಅವಮಾನ ಮಾಡಿದೆ. ಸಿಎಂ, ಡಿಸಿಎಂ ಇಬ್ಬರೂ ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಜ್ಯದ ಜನ ಹಾದಿ ಬೀದಿಯಲ್ಲಿ ಹೋಗೋರಲ್ಲ. ಜನ ನಿಮ್ಮ ಕಾಲಿಗೆ ಬಿದ್ದು ಮತ ಕೊಡ್ತೀವಿ ಅಂತ ಹೇಳಲಿಲ್ಲ. ನೀವೇ ಜನರ ಕಾಲಿಗೆ ಬಿದ್ದು ಮತ ಕೊಡಿ ಮತ ಕೊಡಿ ಅಂದಿದ್ರಿ. ಈಗ ಹಾದಿ ಬೀದೀಲಿ ಹೋಗೋರಿಗೆ ಗ್ಯಾರಂಟಿ ಕೊಡಲ್ಲ ಅಂತಿದೀರಿ. ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದರು.
ಇದನ್ನೂ ಓದಿ: ಬಳ್ಳಾರಿ: ರಸ್ತೆ ವಿಸ್ತರಣೆಗೆ ಬಲಿಯಾಗಲಿವೆ 425 ಬೃಹತ್ ಮರಗಳು; ಸ್ಥಳಾಂತರ ಮಾಡುವಂತೆ ಪರಿಸರ ಪ್ರೇಮಿಗಳ ಪಟ್ಟು
ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಗ್ಯಾರಂಟಿಗಳ ಆಶ್ವಾಸನೆ ಮೇಲೆಯೇ ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷ, ಶನಿವಾರ(ಮೇ 20) ನಡೆದ ಸರ್ಕಾರದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ತನ್ನೆಲ್ಲಾ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಇದು ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಇನ್ನು ಕ್ಯಾಬಿನೆಟ್ ಸಭೆ ಮುಗಿದ ನಂತರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ‘ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ’ ಎಂದಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ