Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikmagalur: ರಸ್ತೆ ಬದಿ ಸನ್​ಗ್ಲಾಸ್ ಮಾರುತ್ತಿದ್ದ ಮಹಿಳೆ ಮೇಲೆ ಪಾನಮತ್ತ ಯುವಕರಿಂದ ದೌರ್ಜನ್ಯ, ಗ್ಲಾಸ್​ಗಳು ಚೂರು ಚೂರು!

Chikmagalur: ರಸ್ತೆ ಬದಿ ಸನ್​ಗ್ಲಾಸ್ ಮಾರುತ್ತಿದ್ದ ಮಹಿಳೆ ಮೇಲೆ ಪಾನಮತ್ತ ಯುವಕರಿಂದ ದೌರ್ಜನ್ಯ, ಗ್ಲಾಸ್​ಗಳು ಚೂರು ಚೂರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 23, 2023 | 5:07 PM

ಸ್ಥಳೀಯರಲ್ಲಿ ಮೊಬೈಲ್ ಫುಟೇಜ್ ಇರುವುದರಿಂದ ದುರುಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಾರದು.

ಚಿಕ್ಕಮಗಳೂರು: ತಾರುಣ್ಯದ ಮದ, ಕುಡಿತದ ಅಮಲು (drunken state) ಕೆಲ ಪುಂಡರಿಂದ ಈ ಕೆಲಸ ಮಾಡಿಸಿದೆ. ರಸ್ತೆ ಬದಿ ಕುಳಿತು ಗಾಗಲ್ ಗಳನ್ನು, ಸನ್ ಗ್ಲಾಸ್ ಗಳನ್ನು (sunglasses) ಮಾರಿ ಬದುಕಿ ನಡೆಸುವ ಒಬ್ಬ ಮುಗ್ಧ ಮಹಿಳೆಯ (innocent woman) ಮೇಲೆ ಪುಂಡ ಯುವಕರು ದಾಂಧಲೆ ಮಾಡಿ ಕನ್ನಡಕ ಗಳನ್ನು ಒಡೆದು ಹಾಕಿದ್ದಾರೆ. ಅವಿವೇಕಿ ಯುವಕರು ದೌರ್ಜನ್ಯ ಮೆರೆದು ಬೈಕ್ ಹತ್ತಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಘಟನೆ ನಗರದ ಕೋಟೆಕೆರೆ ಏರಿಯಾದಲ್ಲಿ ನಡೆದಿದ್ದು, ಇದು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಸ್ಥಳೀಯರಲ್ಲಿ ಯುವಕರು ನಡೆಸಿದ ದಾಂಧಲೆಯ  ಮೊಬೈಲ್ ಫುಟೇಜ್ ಇರುವುದರಿಂದ ದುರುಳರನ್ನು ಪತ್ತೆ ಮಾಡುವುದು ಪೊಲೀಸರಿಗೆ ಕಷ್ಟವಾಗಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ