New Year 2022 Celebration: ನಿನ್ನೆಯ ಪಾರ್ಟಿ ಅಮಲು ಇನ್ನೂ ಕಡಿಮೆಯಾಗಲಿಲ್ಲವೇ? ಈ ವಿಧಾನ ಅನುಸರಿಸಿ ಮತ್ತೆ ಕೆಲಸಕ್ಕೆ ಮರಳಿ

ವಾಸ್ತವವಾಗಿ ಆಲ್ಕೊಹಾಲ್ ಸೇವನೆಯು ದೇಹದ ಜೈವಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಲೆನೋವು, ವಾಂತಿ, ನಿರ್ಜಲೀಕರಣ, ವಾಕರಿಕೆ, ದೇಹ ನೋವು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹೊಸ ವರ್ಷದ ಪಾರ್ಟಿಯ ನಂತರ ನೀವು ಹ್ಯಾಂಗೊವರ್‌ನಿಂದ ಬಳಲುತ್ತಿದ್ದರೆ, ಈ ವಿಧಾನಗಳನ್ನು ಅನುಸರಿಸಿ.

New Year 2022 Celebration: ನಿನ್ನೆಯ ಪಾರ್ಟಿ ಅಮಲು ಇನ್ನೂ ಕಡಿಮೆಯಾಗಲಿಲ್ಲವೇ? ಈ ವಿಧಾನ ಅನುಸರಿಸಿ ಮತ್ತೆ ಕೆಲಸಕ್ಕೆ ಮರಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Jan 02, 2022 | 7:05 AM

ಹೊಸ ವರ್ಷ (2022) ಬಂದೆ ಬಿಟ್ಟಿದೆ. ಪ್ರತಿ ವರ್ಷದಂತೆ ನೀವು ಈ ವರ್ಷವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಿರುತ್ತೀರ ಮತ್ತು ಹೊಸ ಚೈತನ್ಯದಿಂದ ಹೊಸ ವರ್ಷವನ್ನು ಸಂಭ್ರಮಿಸಿರುತ್ತೀರ. ಅದರಲ್ಲೂ ವಿಕೇಂಡ್​​ನಲ್ಲಿ ಹೊಸ ವರ್ಷವಿರುವುದು ಅದರ ಖುಷಿಯನ್ನು ಇಮ್ಮಡಿಗೊಳಿಸಿದೆ. ಮತ್ತೊಂದೆಡೆ ಡಿಸೆಂಬರ್ 31 ರ ರಾತ್ರಿ ನೈಟ್​ ಕರ್ಫ್ಯೂನಿಂದಾಗಿ ಆಚರಣೆಗೆ ಕೊಂಚ ಬ್ರೇಕ್​ ಬಿದ್ದಿದೆ. ಆದರೆ ಕುಟುಂಬ ಮತ್ತು ಸ್ನೇಹಿತರ ನಡುವೆ ನಿಯಮ ಉಲ್ಲಂಘಿಸದೆ ಹೊಸ ವರ್ಷ ಆಚರಿಸಲು ಅವಕಾಶ ಇತ್ತು. ಹೀಗಾಗಿ ಸ್ನೇಹಿತರ ಜತೆ ಅನೇಕರು ಪಾರ್ಟಿ ಮಾಡಿರುತ್ತಾರೆ. ಪಾರ್ಟಿ ಅಂತ ಬಂದಾಗ ಅನೇಕರು ಮದ್ಯಪಾನ ಮಾಡುತ್ತಾರೆ. ಅದು ಇತ್ತೀಚೆಗೆ ಸಾಮಾನ್ಯ. ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆ ಪಾರ್ಟಿ ಮಾಡುವಾಗ ಜನರು ಹೆಚ್ಚಾಗಿ ಕುಡಿಯುತ್ತಾರೆ. ಆದರೆ ಮರುದಿನ ಈ ಕುಡಿತದ ಹ್ಯಾಂಗೊವರ್‌ನಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ಆಲ್ಕೊಹಾಲ್ ಸೇವನೆಯು ದೇಹದ ಜೈವಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತಲೆನೋವು, ವಾಂತಿ, ನಿರ್ಜಲೀಕರಣ, ವಾಕರಿಕೆ, ದೇಹ ನೋವು ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಹೊಸ ವರ್ಷದ ಪಾರ್ಟಿಯ ನಂತರ ನೀವು ಹ್ಯಾಂಗೊವರ್‌ನಿಂದ ಬಳಲುತ್ತಿದ್ದರೆ, ಈ ವಿಧಾನಗಳನ್ನು ಅನುಸರಿಸಿ.

ಹ್ಯಾಂಗೊವರ್‌ನಿಂದ ಹೊರಬರಲು ಮಾರ್ಗಗಳನ್ನು ಅನುಸರಿಸಿ

ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ ಬೆಳಿಗ್ಗೆ ಎದ್ದ ತಕ್ಷಣ ಸಾಕಷ್ಟು ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಅಥವಾ ನೀರಿನಲ್ಲಿ ನಿಂಬೆ ರಸವನ್ನು ಹಿಂಡಿ ಕುಡಿದರೆ, ನಿಮ್ಮ ದೇಹದಲ್ಲಿನ ನಿರ್ಜಲೀಕರಣದ ಸಮಸ್ಯೆಯನ್ನು ನಿವಾರಿಸಬಹುದು. ಇದರೊಂದಿಗೆ ನಿಮ್ಮ ದೇಹದ ವಿಷಕಾರಿ ಅಂಶಗಳು ಹೊರಬರುತ್ತವೆ. ನೀವು ನೀರು ಕುಡಿದ ನಂತರ ವಾಂತಿ ಮಾಡಿದರೆ, ಭಯಪಡುವ ಅಗತ್ಯ ಇಲ್ಲ. ವಾಂತಿ ಆದರೆ ಆರಾಮವಾದಂತೆ ಆಗುತ್ತದೆ. ಮದ್ಯಪಾನ ಮಾಡಿದ ನಂತರದ ದಿನದಲ್ಲಿ ಹೆಚ್ಚು ದ್ರವ ಆಹಾರವನ್ನು ಸೇವಿಸಿ.

ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಹ್ಯಾಂಗೊವರ್ ಕೂಡ ನಿವಾರಣೆಯಾಗುತ್ತದೆ. ನೀವು ಸ್ನಾನ ಮಾಡುವ ಸ್ಥಿತಿಯಲ್ಲಿಲ್ಲದಿದ್ದರೆ, ನೀವು ಸ್ಟೀಮ್​ ತೆಗೆದುಕೊಳ್ಳಬಹುದು. ಸ್ಟೀಮ್ ತೆಗೆದುಕೊಳ್ಳುವುದರಿಂದ ಮೂಡ್​ ಸರಿಯಾಗುತ್ತದೆ. ಇದಲ್ಲದೆ, ಬೆಚ್ಚಗಿನ ನೀರಿನಲ್ಲಿ ಟವೆಲ್ ಅನ್ನು ನೆನೆಸಿ ದೇಹವನ್ನು ಒರೆಕೊಳ್ಳಬಹುದು. ಇನ್ನು ಬೆಳಗ್ಗೆ ತಿಂಡಿ ಸೇವಿಸುವಾಗ ಹುಳಿ ಮೊಸರನ್ನು ಸೇವಿಸಿ. ಇದು ನಿಮ್ಮ ಹ್ಯಾಂಗೊವರ್ ಅನ್ನು ತೆಗೆದುಹಾಕುತ್ತದೆ.

ಪೊಟ್ಯಾಸಿಯಮ್ ಕೊರತೆ ಕುಡಿದ ನಂತರ ದೇಹದಲ್ಲಿ ಪೊಟ್ಯಾಸಿಯಮ್ ಕೊರತೆಯಿಂದಾಗಿ ಆಯಾಸ ಮತ್ತು ದೌರ್ಬಲ್ಯ ಹೆಚ್ಚಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳಿಂದ ಸಮೃದ್ಧವಾಗಿರುವ ಬಾಳೆಹಣ್ಣಿನ ಸ್ಮೂಥಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ. ಇದು ಸಾಕಷ್ಟು ಪರಿಹಾರವನ್ನು ನೀಡುತ್ತದೆ. ಹ್ಯಾಂಗೊವರ್ ತಪ್ಪಿಸಲು ನೀವು ಕುಡಿಯುವ ಮೊದಲು ಬಾಳೆಹಣ್ಣು ಸೇವಿಸಬಹುದು. ಇದು ನಿಮ್ಮ ದೇಹದಲ್ಲಿ ಪೊಟ್ಯಾಸಿಯಮ್ ಕೊರತೆಯನ್ನು ಕಡಿಮೆ ಮಾಡುತ್ತದೆ.

ವ್ಯಾಯಾಮ ಮಾಡಿ ಇನ್ನು ನಿಮಗೆ ಆರಾಮ ಅನಿಸದಿದ್ದರೆ, ಬೆಳಿಗ್ಗೆ ಎಚ್ಚರಗೊಂಡಾಗ ವ್ಯಾಯಾಮ ಮಾಡಿ ಅಥವಾ ವಾಕಿಂಗ್​ ಮಾಡಿ. ಇದರಿಂದಾಗಿ ದೇಹದ ವಿಷಕಾರಿ ಅಂಶಗಳು ಬೆವರಿನ ರೂಪದಲ್ಲಿ ಹೊರಬರುತ್ತವೆ ಮತ್ತು ನಿಮ್ಮ ಚಯಾಪಚಯವು ಶೀಘ್ರದಲ್ಲೇ ಸಾಮಾನ್ಯವಾಗುತ್ತದೆ.

ಎಳನೀರು ಕುಡಿಯಿರಿ ಆಲ್ಕೋಹಾಲ್ ಸೇವನೆಯು ದೇಹದಲ್ಲಿ ಶುಷ್ಕತೆಯನ್ನು ಹೆಚ್ಚಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಳನೀರು ತುಂಬಾ ಪ್ರಯೋಜನಕಾರಿಯಾಗಿದೆ. ಎಳನೀರು ಸಾಕಷ್ಟು ಎಲೆಕ್ಟ್ರೋಲೈಟ್‌ಗಳನ್ನು ಹೊಂದಿರುತ್ತದೆ. ಹ್ಯಾಂಗೊವರ್ ಅನ್ನು ತೆಗೆದುಹಾಕುವುದರ ಜೊತೆಗೆ, ಎಳನೀರು ಆಯಾಸ, ಸ್ನಾಯು ನೋವನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯನ್ನು ಸಮತೋಲನಗೊಳಿಸುತ್ತದೆ.

ಇದನ್ನೂ ಓದಿ: Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ

ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್