Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ
ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ, ಸೀತಾಫಲವು ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿ ಮಾಡುತ್ತದೆ. ಇದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದ್ದರೂ, ಇದರ ಅತಿಯಾದ ಸೇವನೆಯು ಮುಂದೆ ಹಲವಾರು ಸಮಸ್ಯೆಗಳನ್ನು ತರುತ್ತದೆ.
ದೊಡ್ಡವರಿಂದ ಹಿಡಿದು ಮಕ್ಕಳವರೆಗೆ ಎಲ್ಲರೂ ಕೂಡ ತುಂಬಾ ಇಷ್ಟಪಡುವ ಹಣ್ಣುಗಳಲ್ಲಿ ಸೀತಾಫಲ ಕೂಡ ಒಂದು. ಅಷ್ಟೇ ಅಲ್ಲ ಇದು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರು ಸೀತಾಫಲವನ್ನು (Sugar apple) ಸೇವಿಸಲು ಸಲಹೆ ನೀಡುತ್ತಾರೆ. ಇದು ಫೈಬರ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ವಿಟಮಿನ್ ಎ ಮುಂತಾದ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆರೋಗ್ಯವಾಗಿರಲು ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಬೇಕಾಗುತ್ತವೆ. ಆದ್ದರಿಂದ ವೈದ್ಯರು ಸೀತಾಫಲವನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ.
ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿದ್ದರೂ, ಸೀತಾಫಲವು ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿ ಮಾಡುತ್ತದೆ. ಇದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲ್ಪಟ್ಟಿದ್ದರೂ, ಇದರ ಅತಿಯಾದ ಸೇವನೆಯು ಮುಂದೆ ಹಲವಾರು ಸಮಸ್ಯೆಗಳನ್ನು ತರುತ್ತದೆ. ಮತ್ತೊಂದೆಡೆ, ತಜ್ಞರ ಪ್ರಕಾರ, ದಿನಕ್ಕೆ ಒಂದು ಸೀತಾಫಲವನ್ನು ಮಾತ್ರ ಸೇವಿಸಬೇಕು. ಸೀತಾಫಲದಿಂದ ಉಂಟಾಗುವ ಆರೋಗ್ಯಕ್ಕೆ ಸಂಬಂಧಿಸಿದ ಹಾನಿಯ ಬಗ್ಗೆ ತಿಳಿಯುವುದು ಸೂಕ್ತ.
ತುರಿಕೆ ಅಥವಾ ಅಲರ್ಜಿ ಸೀತಾಫಲವನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಇದನ್ನು ತಿನ್ನಲು ಸಲಹೆ ನೀಡಲಾಗುತ್ತದೆ. ಆದರೆ ಅನೇಕ ಜನರು ಇದರ ಸೇವನೆಯಿಂದ ಅಲರ್ಜಿ ಅಥವಾ ತುರಿಕೆಗೆ ಒಳಗಾಗಬಹುದು. ನೀವು ಸೀತಾಫಲವನ್ನು ಸೇವಿಸಿದಾಗ ಮತ್ತು ಅದರ ನಂತರ ನಿಮಗೆ ಅಲರ್ಜಿ ಅಥವಾ ತುರಿಕೆಯ ಸಮಸ್ಯೆ ಉಂಟಾದರೆ ತಕ್ಷಣವೇ ಅದನ್ನು ಸೇವಿಸುವುದನ್ನು ನಿಲ್ಲಿಸಿ. ಅಷ್ಟೇ ಅಲ್ಲ ಈಗಾಗಲೇ ಅಲರ್ಜಿ ಸಮಸ್ಯೆ ಇರುವವರು ಸೀತಾಫಲ ಸೇವಿಸುವುದನ್ನು ಆದಷ್ಟು ಕಡಿಮೆ ಮಾಡಿ.
ಹೊಟ್ಟೆಯ ಸಮಸ್ಯೆಗಳು ಸೀತಾಫಲ ಸೇವನೆಯಿಂದ ಅನೇಕರಿಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಪ್ರಾರಂಭವಾಗಬಹುದು. ಜೀರ್ಣಕಾರಿ ಸಮಸ್ಯೆ ಇರುವವರು ಸೀತಾಫಲವನ್ನು ತಿನ್ನಲೇಬಾರದು. ಸೀತಾಫಲ ಫೈಬರ್‌ನಿಂದ ಕೂಡಿದೆ. ಸೀತಾಫಲವನ್ನು ಅತಿಯಾಗಿ ಸೇವಿಸಿದರೆ, ನೀವು ಹೊಟ್ಟೆ ನೋವು, ಫೈಬರ್‌ನಿಂದ ಕರುಳು ಬಿಗಿಗೊಳಿಸುವುದನ್ನು ಎದುರಿಸಬೇಕಾಗುತ್ತದೆ.
ವಾಂತಿ ಸೀತಾಫಲದಲ್ಲಿ ಸಾಕಷ್ಟು ಕಬ್ಬಿಣದ ಅಂಶವಿದ್ದು, ಸೀತಾಫಲವನ್ನು ಅಧಿಕವಾಗಿ ಸೇವಿಸಿದರೆ ಇದರಿಂದ ವಾಂತಿಯಾಗಬಹುದು. ಅಷ್ಟೇ ಅಲ್ಲ, ಇದರಿಂದ ವಾಕರಿಕೆ ಸಮಸ್ಯೆಯನ್ನೂ ಎದುರಿಸಬೇಕಾಗಬಹುದು. ಸೀತಾಫಲವನ್ನು ದಿನಕ್ಕೆ ಒಮ್ಮೆ ಮಾತ್ರ ತಿನ್ನಬೇಕು ಮತ್ತು ಅದು ಕೂಡ ಒಂದೇ ಒಂದು.
ತೂಕ ಹೆಚ್ಚಳ ಸೀತಾಫಲ ಕ್ಯಾಲೋರಿಗಳಿಂದಲೂ ಸಮೃದ್ಧವಾಗಿದೆ. ನಿಸ್ಸಂಶಯವಾಗಿ, ತೂಕವನ್ನು ಹೆಚ್ಚಿಸುವಲ್ಲಿ ಕ್ಯಾಲೊರಿಗಳು ಪ್ರಮುಖ ಪಾತ್ರವಹಿಸುತ್ತವೆ. ಸೀತಾಫಲದ ಅತಿಯಾದ ಸೇವನೆಯಿಂದ ದೇಹದಲ್ಲಿ ಕ್ಯಾಲೋರಿಗಳ ಪ್ರಮಾಣ ಹೆಚ್ಚುತ್ತದೆ ಮತ್ತು ಇದರಿಂದ ತೂಕ ಹೆಚ್ಚಾಗುವ ಸಮಸ್ಯೆ ಶುರುವಾಗುತ್ತದೆ.
ಇದನ್ನೂ ಓದಿ: ನಿಮ್ಮಲ್ಲಿನ ಈ ಅಭ್ಯಾಸಗಳು ಮುಂದೊಂದು ದಿನ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಚ್ಚರ
Brinjal Benefits: ಬದನೆಕಾಯಿ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಒಮ್ಮೆ ಗಮನಿಸಿ