Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಪ್ರತಿದಿನ ಕನಿಷ್ಠ ಈ ಐದು ಯೋಗಾಸನಗಳನ್ನು ಮಾಡಿ

Yoga: ಸರ್ವ ಕಾಯಿಲೆಗೆ ಯೋಗ ಮದ್ದಿದ್ದಂತೆ. ಹೀಗಾಗಿ ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಯೋಗ ಮಾಡಬೇಕು. ಇದು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

TV9 Web
| Updated By: sandhya thejappa

Updated on: Dec 27, 2021 | 8:30 AM

ಭುಜಂಗಾಸನ: ಇದರಲ್ಲಿ ದೇಹದ ಭಂಗಿಯು ಹೆಡೆ ಎತ್ತಿದ ಹಾವಿನಂತೆ ಇರುತ್ತದೆ. ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ಮೊದಲು ನಿಮ್ಮ ಹೊಟ್ಟೆ ನೆಲಕ್ಕೆ ತಾಗುವಂತೆ ಮಲಗಿ. ನಂತರ ಎರಡೂ ಕಾಲುಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಮತ್ತು ಕಾಲುಗಳನ್ನು ನೇರವಾಗಿ ಇರಿಸಿ. ಈಗ ಕೈಗಳನ್ನು ನೆಲ್ಲಕ್ಕೆ ಊರಿ ತಲೆ ಎತ್ತಿ. ದೇಹದ ಭಂಗಿಯು ಹಾವಿನ ಹೆಡೆಯಂತೆ ಕಾಣುತ್ತದೆ. ಈ ಮಧ್ಯೆ ಸೊಂಟದ ಮೇಲೆ ಹೆಚ್ಚು ಒತ್ತಡ ಕೊಡಬೇಡಿ. ಈ ಭಂಗಿಯಲ್ಲಿ ಸ್ವಲ್ಪ ಸಮಯ ಇರಿ. ನಂತರ ಉಸಿರನ್ನು ಬಿಡುತ್ತಾ ಸಹಜ ಸ್ಥಿತಿಗೆ ಹಿಂತಿರುಗಿ. ಇದನ್ನು ಅನುಕ್ರಮವನ್ನು ಒಮ್ಮೆಗೆ 5 ರಿಂದ 7 ಬಾರಿ ಪುನರಾವರ್ತಿಸಿ. ಈ ಆಸನವು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಜತೆಗೆ ಇದು ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

1 / 5
ಪಶ್ಚಿಮೋತ್ತಾಸನ: ಪಶ್ಚಿಮೋತ್ತಾಸನವನ್ನು ಮಾಡಲು, ಮೊದಲನೆಯದಾಗಿ ಎರಡೂ ಕಾಲುಗಳನ್ನು ನೇರವಾಗಿ ಚಾಚಿ ನಂತರ ಬಲಗಾಲನ್ನು ಮಡಚಿ ಬಲಗೈಯಿಂದ ಬಲಗಾಲಿನ ಬೆರಳನ್ನು ಹಿಡಿದುಕೊಳ್ಳಿ. ನಂತರ ಎಡಗೈಯಿಂದ ಎಡಗಾಲಿನ ಬೆರಳನ್ನು ಹಿಡಿಯಿರಿ. ಗರ್ಭಕೋಶ ಅಥವಾ ಬೆನ್ನುನೋವಿನ ಸಮಸ್ಯೆಯಿದ್ದರೆ ಈ ಆಸನವನ್ನು ಮಾಡಬೇಡಿ. ಪಶ್ಚಿಮೋತ್ತಾಸನವನ್ನು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ದೇಹದಲ್ಲಿ ನಮ್ಯತೆಯನ್ನು ತರುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.

2 / 5
ಸೇತುಬಂಧಾಸನ ಕಾಲುಗಳನ್ನು ಬಗ್ಗಿಸಿ ಮತ್ತು ಅವುಗಳನ್ನು ನಿಮ್ಮ ಸೊಂಟಕ್ಕೆ ಹತ್ತಿರಕ್ಕೆ ತನ್ನಿ. ನಿಧಾನವಾಗಿ ಉಸಿರಾಡುವಾಗ, ನಿಮ್ಮ ಕೆಳಗಿನ ಬೆನ್ನಿನ ಭಾರವನ್ನು ಮೇಲಕ್ಕೆತ್ತಿ. ಕೈಗಳಿಂದ ಪಾದಗಳನ್ನು ಹಿಡಿಯಿರಿ. ಪಾದಗಳನ್ನು ನೆಲದ ಮೇಲೆ ಬಲವಾಗಿ ಇರಿಸಿ. ತಲೆ ಮತ್ತು ಭುಜದ ಭಾಗವನ್ನು ಸಹ ನೆಲದಲ್ಲಿ ಇರಿಸಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಈ ಭಂಗಿಯಲ್ಲಿ ಇರಿ. ಅದರ ನಂತರ, ಸಾಮಾನ್ಯ ಭಂಗಿಗೆ ಹಿಂತಿರುಗಿ. ಸೇತುಬಂಧಾಸನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಎದೆ, ಕುತ್ತಿಗೆ ಮತ್ತು ಬೆನ್ನುಮೂಳೆಯನ್ನು ವಿಸ್ತರಿಸುತ್ತದೆ. ಕಿಬ್ಬೊಟ್ಟೆಯ ಅಂಗಗಳು, ಶ್ವಾಸಕೋಶಗಳು ಮತ್ತು ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮೆದುಳನ್ನು ಶಾಂತಗೊಳಿಸುತ್ತದೆ.

3 / 5
ಚತುರಂಗ ದಂಡಾಸನ: ನೀವು ನೇರವಾಗಿ ಮಲಗಿಕೊಳ್ಳಿ. ನಿಮ್ಮ ಕೈಗಳು ನೇರವಾಗಿರಲಿ. ನಿಮ್ಮ ಕೈಗಳ ಮೂಲಕ ಮೇಲೆದ್ದುಕೊಳ್ಳಿ. ಕಾಲುಗಳ ತುದಿ ಬೆರಳು ನೆಲಕ್ಕೆ ತಾಗಿರಲಿ. ಇದೇ ಭಂಗಿಯಲ್ಲಿ ಸುಮಾರು 10 ರಿಂದ 15 ಸೆಕೆಂಡುಗಳ ಕಾಲ ಇರಿ. ಈ ಆಸನ ಮಾಡುವುದರಿಂದ ಕಿಬ್ಬೊಟ್ಟೆಯ ಸ್ನಾಯುಗಳು ಸದೃಢವಾಗುತ್ತದೆ. ತೋಳುಗಳ ಬಲವನ್ನು ಹೆಚ್ಚಿಸುತ್ತದೆ. ಬೆನ್ನು ನೋವು ನಿವಾರಣೆಯಾಗುತ್ತದೆ.

4 / 5
 ಚಕ್ರಾಸನ: ನೀವು ನೇರವಾಗಿ ನಿಂತುಕೊಳ್ಳಿ. ಹಿಂದಕ್ಕೆ ಸಂಪೂರ್ಣವಾಗಿ ಬಾಗಿ ನಿಮ್ಮ ಕೈಗಳನ್ನು ನೆಲಕ್ಕೆ ತಾಗಿಸಿ. ಈ ಆಸನ ಅಭ್ಯಾಸ ಮಾಡುವ ಮೂಲಕ ನೀವು ಸದೃಢರಾಗುತ್ತೀರಿ. ಬೆನ್ನು ನೋವಿನಿಂದ ಮುಕ್ತರಾಗಲು ಈ ಆಸನ ಮಾಡಿ. ಈ ಆಸನವನ್ನು ಎಳೆಯ ವಯಸ್ಸಿನಿಂದಲೂ ಮಾಡಿಕೊಂಡು ಬಂದಾಗ ವೃದ್ಧಾಪ್ಯದಲ್ಲಿ ಬೆನ್ನು ಬಾಗುವುದಿಲ್ಲ.

5 / 5
Follow us
ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದೆ ಶಕ್ತಿಸೌಧ, ಏನು ವಿಶೇಷ ಗೊತ್ತಾ?

ಯುಗಾದಿ ಹಬ್ಬಕ್ಕೆ ಊರುಗಳತ್ತ ಜನ: ಬೆಂಗಳೂರಿನಲ್ಲಿ ಫುಲ್​ ಟ್ರಾಫಿಕ್​ ಜಾಮ್​

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..

ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ

0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ

ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಅಪಘಾತ: ನಾಲ್ವರ ಜೀವ ಉಳಿಸಿದ ಮೂವರು ಯುವಕರು
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು

ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?

ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ