AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣಿನ ಒಳಭಾಗದಲ್ಲಿ ಬದಲಾವಣೆಗಳಾಗಿದೆಯೇ? ಇದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು ಎಚ್ಚರ

ಕಿಬ್ಬೊಟ್ಟೆಯಲ್ಲಿನ ನೋವು ಕೆಲವೊಮ್ಮೆ ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಮರೆವು ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಸುಳಿವು ನೀಡಬಹುದು ಮತ್ತು ಚರ್ಮದ ಮೇಲಿನ ಉಬ್ಬು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸಬಹುದು. ಅದರಂತೆ ಕಣ್ಣುಗಳು ಸಹ ದೀರ್ಘಕಾಲದ ಕಾಯಿಲೆಗಳ ಮೇಲೆ ಬೆಳಕು ಚೆಲ್ಲಬಹುದು ಎಚ್ಚರ ವಹಿಸಿ.

ಕಣ್ಣಿನ ಒಳಭಾಗದಲ್ಲಿ ಬದಲಾವಣೆಗಳಾಗಿದೆಯೇ? ಇದು ಗಂಭೀರ ಕಾಯಿಲೆಯ ಸಂಕೇತವಾಗಿರಬಹುದು ಎಚ್ಚರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on:Dec 28, 2021 | 11:59 AM

ಆರೋಗ್ಯದ ವಿಷಯಕ್ಕೆ ಬಂದರೆ ನಾವು ಅನೇಕ ಬಾರಿ ಸಣ್ಣಪುಟ್ಟ ಸಮಸ್ಯೆ ಎಂದು ನಿರ್ಲಕ್ಷ್ಯ ವಹಿಸುತ್ತೇವೆ. ಜತೆಗೆ ಪ್ರತಿಯೊಂದಕ್ಕೂ ವೈದ್ಯರನ್ನು ಭೇಟಿ ಆಗುವುದು ಏಕೆ ಎಂದು ಹಿಂಜರಿಯುತ್ತೇವೆ. ಆದರೆ ಇದು ಒಳ್ಳೆಯ ಅಭ್ಯಾಸ ಅಲ್ಲ. ಆರೋಗ್ಯಕ್ಕೆ ( Health) ಸಂಬಂಧಿಸಿದಂತೆ ನಾವು ಮಾಡುವ ಒಂದು ಸಣ್ಣ ತಪ್ಪು ಕೂಡ ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಅಂದರೆ ಕೆಲವೊಮ್ಮೆ ಗಂಭೀರ ಕಾಯಿಲೆಯ ಬಗ್ಗೆ ದೇಹದಲ್ಲಿ ಸಣ್ಣಪುಟ್ಟ ಬದಲಾಣೆಯಾಗಿ ಆ ಮೂಲಕ ಎಚ್ಚರಿಕೆಯನ್ನು ನೀಡುತ್ತದೆ. ಆದರೆ ನಾವು ಈ ರೋಗಲಕ್ಷಣಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತೇವೆ. ಇದು ಮುಂದೆ ದೊಡ್ಡ ಸಮಸ್ಯೆಯಾಗಿ ಜೀವಕ್ಕೆ ಹಾನಿಯಾಗಬಹುದು. ಉದಾಹರಣೆಗೆ ಕಿಬ್ಬೊಟ್ಟೆಯಲ್ಲಿನ ನೋವು ಕೆಲವೊಮ್ಮೆ ಯಕೃತ್ತಿನ ಸಮಸ್ಯೆಗಳ ಸಂಕೇತವಾಗಿರಬಹುದು. ಮರೆವು ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಸುಳಿವು ನೀಡಬಹುದು ಮತ್ತು ಚರ್ಮದ ಮೇಲಿನ ಉಬ್ಬು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸಬಹುದು. ಅದರಂತೆ ಕಣ್ಣುಗಳು ಸಹ ದೀರ್ಘಕಾಲದ ಕಾಯಿಲೆಗಳ ಮೇಲೆ ಬೆಳಕು ಚೆಲ್ಲಬಹುದು ಎಚ್ಚರ ವಹಿಸಿ.

ನಿಮ್ಮ ಕಣ್ಣುಗಳಲ್ಲಿನ ಬದಲಾವಣೆ ಈ ಐದು ಪ್ರಮುಖ ಕಾಯಿಲೆಗಳ ಸಂಕೇತವಾಗರಬಹುದು

ದೃಷ್ಟಿ ದೋಷ ನಿದ್ರೆಯ ಕೊರತೆ ಅಥವಾ ಹೆಚ್ಚು ಟಿವಿ, ಕಂಪ್ಯೂಟರ್​, ಮೊಬೈಲ್​ ನೋಡುವುದರಿಂದ ದೃಷ್ಟಿ ಕೆಲವೊಮ್ಮೆ ಮಂದವಾಗಬಹುದು. ಆದಾಗ್ಯೂ, ಮಧುಮೇಹ ರೋಗಿಗಳಲ್ಲಿ ಆಗಾಗ್ಗೆ ಈ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುವಿಕೆಯನ್ನು ಇದು ಸೂಚಿಸುತ್ತದೆ. ದೃಷ್ಟಿ ದೋಷ ಕಂಡು ಬಂದಾಗ ಇದು ಕಣ್ಣಿನ ಪೊರೆ ಅಥವಾ ಮ್ಯಾಕ್ಯುಲರ್ ಡಿಜೆನರೇಶನ್‌ನ ಲಕ್ಷಣವೂ ಆಗಿರಬಹುದು ನಿರ್ಲಕ್ಷ್ಯ ವಹಿಸುವ ಮುನ್ನ ವೈದ್ಯರನ್ನು ಭೇಟಿ ಮಾಡಿ.

ಕಾರ್ನಿಯಾದ ಸುತ್ತ ಬಿಳಿ ಸುತ್ತು ನಿಮ್ಮ ಕಣ್ಣುಗಳ ಮಧ್ಯ ಇರುವ ಕಪ್ಪು ಗೋಲಿಯ ಸುತ್ತ ಬಿಳಿ ರಿಮ್ ಬೆಳವಣಿಗೆಯಾಗುವುದನ್ನು ನೀವು ಗಮನಿಸಿದರೆ, ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸುವ ಲಕ್ಷಣವಾಗಿರಬಹುದು. ಬರಿಗಣ್ಣಿಗೆ ಕಾಣಿಸದ ಚಿಹ್ನೆಯಾದರೂ, ನೇತ್ರಶಾಸ್ತ್ರಜ್ಞರನ್ನು ಭೇಟಿಯಾಗಿ. ವಯಸ್ಸಾದ ಅಥವಾ ಹೆಚ್ಚಿನ ಎಲ್​ಡಿಎಲ್​ (low-density lipoproteins) ಮಟ್ಟಗಳ ಕಾರಣದಿಂದಾಗಿ ಇದು ಬೆಳವಣಿಗೆಯಾಗಬಹುದು. ಜತೆಗೆ ಇದು ಪಾರ್ಶ್ವವಾಯು ಅಪಾಯದ ಬಗ್ಗೆ ಸುಳಿವು ಕೂಡ ನೀಡುತ್ತಿರಬಹುದು.

ಊತ ಮತ್ತು ಕೆಂಪು ಗೆರೆ ನೀವು ಎಚ್ಚರವಾದಾಗ ನಿಮ್ಮ ಕಣ್ಣುಗಳ ಸುತ್ತ ಊತ ಮತ್ತು ಕೆಂಪು ಬಣ್ಣದ ಗೆರೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆಯೇ? ಇದು ಸೋಂಕಿನ ಬಗ್ಗೆ ಸುಳಿವು ನೀಡುತ್ತಿರಬಹುದು. ಆದಾಗ್ಯೂ, ಇದು ಅಪರೂಪಕ್ಕೆ ಒಮ್ಮೆ ಸಂಭವಿಸಿದ್ದಲ್ಲಿ, ನಿದ್ರೆಯ ಕೊರತೆಯಿಂದ ಆಗಿರಬಹುದು. ನಿದ್ರೆಯಿಂದ ವಂಚಿತರಾಗಿರುವುದು ಕಿರಿಕಿರಿಯನ್ನು ಉಂಟುಮಾಡಬಹುದು. ಹೀಗಾಗಿ ಸರಿಯಾಗಿ ನಿದ್ರೆ ಮಾಡಿ.

ಕಾರ್ನಿಯಾದ ಬಳಿ ಬಿಳಿ ಚುಕ್ಕೆಗಳು ಕೆಲವರು ಕನ್ನಡಕವನ್ನು ಧರಿಸಿದರೆ, ಇತರರು ಕಾಂಟ್ಯಾಕ್ಟ್ ಲೆನ್ಸ್‌ಗಳಿಗೆ ಆದ್ಯತೆ ನೀಡುತ್ತಾರೆ. ಆದರೆ ಲೆನ್ಸ್​ ತೆಗೆಯುವುನ್ನು ಮರೆತು ಹಾಗೆಯೇ ಒಂದೊಮ್ಮೆ ನೀವು ಮಲಗಿದರೆ. ಕಾಲಾನಂತರದಲ್ಲಿ ಕಾರ್ನಿಯಾದ ಬಳಿ ಬಿಳಿ ಚುಕ್ಕೆಗಳ ರಚನೆಗೆ ಕಾರಣವಾಗಬಹುದು. ನೇತ್ರಶಾಸ್ತ್ರಜ್ಞರ ಬಳಿ ಇದಕ್ಕೆ ಸಲಹೆ ಪಡೆಯುವುದು ಉತ್ತಮ.

ಅಧಿಕ ರಕ್ತದೊತ್ತಡ ಅಧಿಕ ರಕ್ತದೊತ್ತಡವು ಅಪಧಮನಿ ಸಮಸ್ಯೆಯನ್ನು ಸೂಚಿಸುತ್ತದೆ. ಕಾಲಾನಂತರದಲ್ಲಿ, ಅನಿಯಂತ್ರಿತ ಅಧಿಕ ರಕ್ತದೊತ್ತಡವು ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇದು ಅಧಿಕ ರಕ್ತದೊತ್ತಡದ ರೆಟಿನೋಪತಿಗೆ ಕಾರಣವಾಗುವ ರೆಟಿನಾದ ರಕ್ತನಾಳಗಳನ್ನು ಹಾನಿಗೊಳಿಸಬಹುದು. ಕನ್ನಡಿಯಲ್ಲಿ ನಿಮ್ಮ ಕಣ್ಣುಗಳನ್ನು ನೋಡುವಾಗ ಇದು ಎದ್ದುಕಾಣುವುದಿಲ್ಲ. ಆದ್ದರಿಂದ, ನಿಯಮಿತ ಪರೀಕ್ಷೆಗೆ ಹೋಗುವುದು ಮುಖ್ಯ.

ಇದನ್ನೂ ಓದಿ: Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್​ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ

Health Care Tips: ಸೀತಾಫಲ ತಿಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳಾಗುತ್ತದೆ; ಅಪಾಯದ ಬಗ್ಗೆ ಇರಲಿ ಎಚ್ಚರ

Published On - 11:54 am, Tue, 28 December 21

ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್​ ಬಿಚ್ಚಿಟ್ಟ ಕಮಿಷನರ್
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್​ಗೆ ಉಳಿಗಾಲವಿಲ್ಲ: ವಾಟಾಳ್
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಅಲ್ಲು ಅರ್ಜುನ್ ಜೊತೆ ಎಕ್ಸ್​ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್​ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ