Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್​ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ

ಮೂಗಿನ ಎರಡೂ ಹೊಳ್ಳೆಗಳು ಅಲರ್ಜಿ, ಶೀತ, ಬ್ಯಾಕ್ಟೀರಿಯಾಗಳಿಂದ ಮುಚ್ಚಿಹೋಗುತ್ತವೆ. ಇದರಿಂದ ಎದೆಯಲ್ಲಿ ಲೋಳೆಯಂತಹ ದ್ರವ ಸಿಲುಕಿಕೊಂಡು ತಲೆನೋವು, ಉಸಿರಾಟ ಸಂಬಂಧೀ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ

Winter Health Tips: ಚಳಿಗಾಲದಲ್ಲಿ ಈ ಆಹಾರಗಳ ಸೇವನೆಯಿಂದ ಸೈನಸ್​ ಹೆಚ್ಚಾಗಬಹುದು: ಎಚ್ಚರಿಕೆಯಿಂದಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Dec 25, 2021 | 7:30 AM

ಮೈಕೊರೆಯುವ ಚಳಿಗಾಲ ಆರಂಭವಾಗಿದೆ. ಚಳಿಯ ಜತೆಗೆ ಆರೋಗ್ಯದ ಸಮಸ್ಯೆಗಳೂ ಎದುರಾಗುತ್ತವೆ. ಶೀತ, ನೆಗಡಿ, ಫ್ಲೂನಂತಹ ಕಾಯಿಲೆಗಳು ಹರಡಬಹುದು ಹೀಗಾಗಿ ನಿಮ್ಮ ಆಹಾರ ಪದ್ಧತಿಯೆಡೆಗೆ ಹೆಚ್ಚು ಗಮನ ನೀಡಿ ಅಲ್ಲದೆ ಮೈಯನ್ನು ಬೆಚ್ಚಗಿರಿಸುವ ಉಡುಪುಗಳನ್ನು ಧರಿಸಿ. ಆಗ ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಿಂದ ದೂರವಿರಬಹುದು. ಚಳಿಗಾಲದಲ್ಲಿ ಕಾಡುವ ಮುಖ್ಯ ಸಮಸ್ಯೆ ಎಂದರೆ ಸೈನಸ್​ ಅಥವಾ ಸೈನುಟೀಸ್. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಸೈನಸ್​ ಸಮಸ್ಯೆ ಉಲ್ಬಣವಾಗುತ್ತಿದೆ. ಚಳಿಗಾಲದಲ್ಲಿ ಸೈನಸ್​ನ ತೀವ್ರತೆ ಹೆಚ್ಚು. ವಾತಾವರಣದಲ್ಲಿ ಬೀಸುವ ತಣ್ಣನೆಯ ಗಾಳಿ ಮೂಗಿಗೆ ಸೋಕಿ ಉಸಿರಾಟಕ್ಕೆ ತೊಂದರೆ ನೀಡುತ್ತದೆ. ಈ ಕಾಯಿಲೆಯನ್ನು ಆರಂಭದಲ್ಲೇ ಕಡಿಮೆ ಮಾಡಿಕೊಂಡರೆ ಒಳಿತು. ಇಲ್ಲವಾದರೆ ಕ್ರಮೇಣ ಉಸಿರಾಟ ಸಂಬಂಧೀ ಕಾಯಿಲೆಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ. ಸೈನಸ್​ಅನ್ನು ನೀವು ಸೇವಿಸುವ ಆಹಾರದ ಮೂಲಕವೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಸೈನಸ್​ ಎಂದರೇನು? ಮೂಗಿನ ಎರಡೂ ಹೊಳ್ಳೆಗಳು ಅಲರ್ಜಿ, ಶೀತ, ಬ್ಯಾಕ್ಟೀರಿಯಾಗಳಿಂದ ಮುಚ್ಚಿಹೋಗುತ್ತವೆ. ಇದರಿಂದ ಎದೆಯಲ್ಲಿ ಲೋಳೆಯಂತಹ ದ್ರವ ಸಿಲುಕಿಕೊಂಡು ತಲೆನೋವು, ಉಸಿರಾಟ ಸಂಬಂಧೀ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಸೈನಸ್​ನಿಂದ ದವಡೆ, ಹಣೆ, ಮುಖದ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸೈನಸ್​ ಅನ್ನು ನಿರ್ಲಕ್ಷಿಸಿದರೆ ಕ್ರಮೇಣ ಅದರ ತೀವ್ರತೆ ಜಾಸ್ತಿಯಾಗಿ ಮೆದುಳು ಜ್ವರ, ಮಿನಿಜೈಂಡೀಸ್​ನಂತಹ ಹಲವು ಮಾರಣಾಂತಿಕ ಕಾಯಿಲೆಗಳು ಉಲ್ಬಣವಾಗುತ್ತವೆ.

ಹಾಗಾದರೆ ಸೈನಸ್​ ತೊಂದರೆ ಇರುವವರಿಗೆ ಚಳಿಗಾಲದಲ್ಲಿ ಯಾವೆಲ್ಲ ಆಹಾರಗಳು ತೊಂದರೆಯಾದೀತು? ಅದರ ಮಾಹಿತಿ ಇಲ್ಲಿದೆ.

ಮೈದಾ ಮತ್ತು ಆಲೂಗಡ್ಡೆ ಮೈದಾ ಮತ್ತು ಆಲೂಗಡ್ಡೆಯಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್​ಗಳಿರುತ್ತವೆ. ಇವು ನಿಮಗೆ ಮೂಗಿನಲ್ಲಿ ಉರಿಯೂತ ಉಂಟುಮಾಡಬಹುದು. ಆದ್ದರಿಂದ ಚಳಿಗಾಲದಲ್ಲಿ ಮೈದಾದಿಂದ ತಯಾರಿಸಿದ ಆಹಾರ ಮತ್ತು ಆಲೂಗಡ್ಡೆಯಿಂದ ಆದಷ್ಟು ದೂರವಿರಿ.

ಒಮೆಗಾ 3 ಕೊಬ್ಬಿನಾಮ್ಲಗಳು ಸೂರ್ಯಕಾಂತಿ, ಜೋಳ, ಬಾದಾಮಿಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು ಯಥೇಚ್ಛವಾಗಿರುತ್ತವೆ. ನಿಮಗೆ ಸೈನಸ್​ ಸಮಸ್ಯೆಯಿದ್ದರೆ ಚಳಿಗಾಲದಲ್ಲಿ ಈ ಆಹಾರಗಳಿಂದ ಆದಷ್ಟು ದೂರವಿರಿ. ಒಮೆಗಾ 3 ಕೊಬ್ಬಿನಾಮ್ಲಗಳು ನಿಮ್ಮ ಸೈನಸ್​ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಸಂಸ್ಕರಿಸಿದ ಸಕ್ಕರೆ ಸೈನಸ್​ ಸಮಸ್ಯೆಯುಳ್ಳವರು ಸಿಹಿತಿಂಡಿಗಳು, ಪೇಸ್ಟ್ರೀ, ಸೋಡಾ, ತಣ್ಣನೆಯ ಪಾನೀಯಗಳಿಂದ ದೂರವಿರಿ. ಇವುಗಳಲ್ಲಿ ಸಂಸ್ಕರಿಸಿದ ಸಕ್ಕರೆ ಪ್ರಮಾಣವಿರುತ್ತದೆ. ಇವು ನಿಮ್ಮ ದೇಹವನ್ನು ಮತ್ತಷ್ಟು ಹದಗೆಡುವಂತೆ ಮಾಡುತ್ತದೆ. ತಣ್ಣನೆಯ ಪಾನೀಯಗಳಿಂದ ನಿಮ್ಮ ಉಸಿರಾಟಕ್ಕೂ ತೊಂದರೆಯಾಗುತ್ತದೆ.

ಫಾಸ್ಟ್​ ಫುಡ್​ ಸೇವನೆ ಮೋನೋ ಸೋಡಿಯಂ ಗ್ಲುಟಮೇಟ್​ ಎನ್ನುವ ಅಂಶವನ್ನು ಫಾಸ್ಟ್​ ಫುಡ್​ಗಳು ಹೊಂದಿರುತ್ತವೆ. ಇದು ನಿಮ್ಮ ಸೈನಸ್​ಅನ್ನು ತೀವ್ರಗೊಳಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಆದಷ್ಟು ಫಾಸ್ಟ್​ ಅಥವಾ ಜಂಕ್​ ಫುಡ್​ಗಳನ್ನು ಅವೈಡ್​ ಮಾಡಿ. ಇಲ್ಲವಾದರೆ ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾಗಬಹುದು.

ಡೈರಿ ಉತ್ಪನ್ನಗಳು ಸೈನಸ್​ ಸಮಸ್ಯೆಗಳಿಂದ ಬಳಲುತ್ತಿರುವವರು, ಹಾಲು, ಮೊಸರಿನಂತಹ ಡೈರಿ ಉತ್ಪನ್ನಗಳಿಂದ ದೂರವಿರಿ. ಇವು ನಿಮ್ಮ ಸೈನಸ್​ ಸಮಸ್ಯೆಗೆ ಹೆಚ್ಚಿನ ತೊಂದರೆ ನೀಡುತ್ತವೆ. ಜತೆಗೆ ಸೋಯಾಬಿನ್​ ನಂತಹ ಪದಾರ್ಥಗಳು ಅಲರ್ಜಿಯನ್ನು ಜಾಸ್ತಿ ಮಾಡಿ ಸೈನಸ್​ ತೊಂದರೆ ಹೆಚ್ಚಾಗುವಂತೆ ಮಾಡುತ್ತದೆ.​

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್