ಹಸಿ ಈರುಳ್ಳಿ ತಿನ್ನುವ ಅಭ್ಯಾಸ ಇದೆಯೇ? ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಚ್ಚರ ವಹಿಸಿ
ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನೀವು ಸಾಲ್ಮೊನೆಲ್ಲಾದಂತಹ ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ಹೀಗಾಗಿ ಅತಿಯಾಗಿ ಹಸಿ ಈರುಳ್ಳಿ ತಿನ್ನುವವರು ಎಚ್ಚರ ವಹಿಸಿ.
ಆಹಾರದ ರುಚಿಯನ್ನು ಹೆಚ್ಚಿಸಲು ಅಥವಾ ಸೇವಿಸುವ ಆಹಾರದ ಜತೆಗೆ ಹಸಿ ಈರುಳ್ಳಿಯನ್ನು ತಿನ್ನುವ ಅಭ್ಯಾಸ ಅನೇಕರಲ್ಲಿ ಇದೆ. ಉದಾಹರಣೆಗೆ ಪಾವ್ ಭಾಜಿ, ಗೋಬಿ, ಚಿಕನ್ ಕಬಾಬ್ ಹೀಗೆ ಅನೇಕವನ್ನು ಹಸಿ ಈರುಳ್ಳಿಯ (Onion) ಜತೆಗೆ ಸೇವಿಸಲಾಗುತ್ತದೆ. ಇನ್ನು ಹಸಿ ಈರುಳ್ಳಿಯನ್ನು ತಿನ್ನುವುದರಿಂದ ದೇಹದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂದು ನಾವು ಸಾಮಾನ್ಯವಾಗಿ ಕೇಳಿದ್ದೇವೆ. ಆದರೆ ಅತಿಯಾಗಿ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ನೀವು ಸಾಲ್ಮೊನೆಲ್ಲಾದಂತಹ ಗಂಭೀರ ಕಾಯಿಲೆಗಳಿಗೆ ಗುರಿಯಾಗಬಹುದು. ಹೀಗಾಗಿ ಅತಿಯಾಗಿ ಹಸಿ ಈರುಳ್ಳಿ ತಿನ್ನುವವರು ಎಚ್ಚರ ವಹಿಸಿ.
ಕೆಲವು ಸಮಯದ ಹಿಂದೆ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾದಿಂದ ಉಂಟಾದ ಅನೇಕ ಸೋಂಕಿನ ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದ್ದವು. ಕಲುಷಿತ ಈರುಳ್ಳಿ ಸೇವನೆಯಿಂದ ಈ ರೋಗ ಬಂದಿದೆ ಎಂದು ಹೇಳಲಾಗಿದೆ. ಹೀಗಿರುವಾಗ ಹಸಿ ಈರುಳ್ಳಿ ತಿಂದರೆ ಬರುವ ಕಾಯಿಲೆ ಏನೆಂದು ತಿಳಿಯುವುದು ಸೂಕ್ತ.
ಸಾಲ್ಮೊನೆಲ್ಲಾ ಎಂದರೇನು? ಸಾಲ್ಮೊನೆಲ್ಲಾ ಒಂದು ರೀತಿಯ ಬ್ಯಾಕ್ಟೀರಿಯಾವಾಗಿದ್ದು, ಇದು ಆಹಾರಕ್ಕೆ ಸಂಬಂಧಿಸಿದ ರೋಗಗಳನ್ನು ಉಂಟುಮಾಡುತ್ತದೆ. ಈ ಬ್ಯಾಕ್ಟೀರಿಯಾದಿಂದ ಕಲುಷಿತವಾಗಿರುವ ಆಹಾರವನ್ನು ತಿನ್ನುವುದು ಸಾಮಾನ್ಯವಾಗಿ ಕರುಳಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹೊಟ್ಟೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳನ್ನು ಸಾಲ್ಮೊನೆಲೋಸಿಸ್ ಎಂದು ಕರೆಯಲಾಗುತ್ತದೆ. ಇದು ಮಾನವನ ಕರುಳಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ.
ವಿಚಿತ್ರವೆಂದರೆ ಈ ಬ್ಯಾಕ್ಟೀರಿಯಾ ಇರುವಿಕೆಯನ್ನು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಿಲ್ಲ. ಇದು ಹೆಚ್ಚಾಗಿ ಹಸಿ ಅಥವಾ ಬೇಯಿಸದ ಮಾಂಸ, ಕೋಳಿ, ಮೊಟ್ಟೆ ಅಥವಾ ಇನ್ನಿತರ ಉತ್ಪನ್ನಗಳ ಸೇವನೆಯಿಂದಾಗಿ ಬರುತ್ತದೆ.
ಸಾಲ್ಮೊನೆಲ್ಲಾ ಸೋಂಕಿನ ಲಕ್ಷಣಗಳು ಸಾಲ್ಮೊನೆಲ್ಲಾ ಸೋಂಕಿನ ಲಕ್ಷಣಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾದಂತೆ ತಕ್ಷಣವೇ ಕಂಡುಬರುವುದಿಲ್ಲ. ಇದು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಇದು ವಿಶೇಷವಾಗಿ 5 ವರ್ಷದೊಳಗಿನ ಚಿಕ್ಕ ಮಕ್ಕಳಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ ಅಪಾಯಕಾರಿ. ಹಾಳಾದ ಹಸಿ ಈರುಳ್ಳಿಯ ಸೇವನೆಯಿಂದ ಇದು ಸಂಭವಿಸುವ ಸಾಧ್ಯತೆ ಹೆಚ್ಚು.
ಸಾಲ್ಮೊನೆಲ್ಲಾ ಅಪಾಯಗಳು ತೀವ್ರತರವಾದ ಪ್ರಕರಣಗಳಲ್ಲಿ ಈ ಸೋಂಕು ಕೀಲು ನೋವನ್ನು ಉಂಟುಮಾಡಬಹುದು. ಇದನ್ನು ಗೌಟ್ ಅಥವಾ ರೈಟರ್ಸ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಇಷ್ಟೇ ಅಲ್ಲ ಈ ಬ್ಯಾಕ್ಟೀರಿಯಾಗಳು ರಕ್ತ ಸಂಚಲನದ ಜತೆ ಪ್ರವೇಶಿಸಿದರೆ, ಇದು ಮೆದುಳು ಮತ್ತು ಬೆನ್ನುಹುರಿಯ ಅಂಗಾಂಶಗಳನ್ನು ಹಾನಿಗೊಳಿಸುತ್ತದೆ. ನಿಮ್ಮ ಹೃದಯ, ಮೂಳೆ ಮತ್ತು ಮೂಳೆಯ ಒಳಪದರವನ್ನು ಸಹ ಹಾನಿಗೊಳಿಸುತ್ತದೆ.
ಯಾವಾಗ ವೈದ್ಯರ ಬಳಿಗೆ ಹೋಗಬೇಕು? ಸಾಲ್ಮೊನೆಲ್ಲಾ ಸೋಂಕಿತ ಆಹಾರಗಳನ್ನು ಸೇವಿಸಿದ ನಂತರ ಹೆಚ್ಚಿನ ಜನರು ಗಂಭೀರವಾದ ಹೊಟ್ಟೆಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ಸಾಮಾನ್ಯವಾಗಿ 5 ರಿಂದ 6 ದಿನಗಳಲ್ಲಿ ಈ ಕಾಯಿಲೆಯಿಂದ ನಿಮಗೆ ತಾನಾಗಿಯೇ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಆ ನಂತರವೂ ಸಮಸ್ಯೆ ದೂರವಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಇದನ್ನೂ ಓದಿ: Carrot Benefits: ಚಳಿಗಾಲದಲ್ಲಿ ಕ್ಯಾರೆಟ್ ಸೇವನೆ ಎಷ್ಟು ಮುಖ್ಯ? ಸಮಸ್ಯೆ ಬಂದ ಮೇಲೆ ಚಿಂತಿಸುವ ಮೊದಲೇ ಎಚ್ಚರ ವಹಿಸಿ
ನಿಂತು ನೀರು ಕುಡಿಯುವ ಅಭ್ಯಾಸ ಇದೆಯೇ? ಆರೋಗ್ಯ ಸಮಸ್ಯೆ ಉಂಟಾಗುವ ಮೊದಲು ಎಚ್ಚರ ವಹಿಸಿ