Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ವಯಾಡಕ್ಟ್​ ಲಾರಿಯಿಂದ ಉರುಳಿ ಬಿದ್ದು ಆಟೋರಿಕ್ಷಾ ಚಾಲಕ ಸಾವು, ಸ್ಥಳದಲ್ಲಿದ್ದವರು ಹೇಳೋದೇನು?

ಮೆಟ್ರೋ ವಯಾಡಕ್ಟ್​ ಲಾರಿಯಿಂದ ಉರುಳಿ ಬಿದ್ದು ಆಟೋರಿಕ್ಷಾ ಚಾಲಕ ಸಾವು, ಸ್ಥಳದಲ್ಲಿದ್ದವರು ಹೇಳೋದೇನು?

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 16, 2025 | 10:25 AM

ವಯಡಕ್ಟ್​ಗಳನ್ನು ಮೆಟ್ರೋ ಟ್ರ್ಯಾಕ್​ಗಳಿಗೆ ತಡೆಗೋಡೆಗಳ ಹಾಗೆ ಬಳಸಲಾಗುತ್ತದೆ, ಇವುಗಳ ಆಕಾರ ಬೃಹತ್ತಾಗಿರುತ್ತದೆ ಮತ್ತು ತೂಕವೂ ಭಯಂಕರ. ಆಟೋ ಮೇಲೆ ಉರುಳಿ ಬಿದ್ದ ಅದನ್ನು ಸರಿಸಲು ಎರಡು ಗಂಟೆ ಸಮಯ ಬೇಕಾಯಿತು ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ. ದುರ್ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಅಗಮಿಸಿ ಎಷ್ಟೋ ಹೊತ್ತಿನ ನಂತರ ಬಿಎಂಅರ್​​ಸಿಎಲ್ ಅಧಿಕಾರಿಗಳು ಬಂದಿದ್ದಾರೆ.

ಬೆಂಗಳೂರು, ಏಪ್ರಿಲ್ 16: ಕಳೆದ ರಾತ್ರಿ ಸರಿಯಾಗಿ 12 ಗಂಟೆಗೆ ನಗರದ ಯಲಹಂಕ ಬಳಿಯ ಕೋಗಿಲು ಕ್ರಾಸ್ ಬಳಿ ದುರ್ಘಟನೆಯೊಂದು ನಡೆದಿದ್ದು ಲಾರಿಯಲ್ಲಿ ಸಾಗಿಸುತ್ತಿದ್ದ ವಯಾಡಕ್ಟ್ (viaduct) ಉರುಳಿಬಿದ್ದ ಪರಿಣಾಮ ಆಟೋರಿಕ್ಷಾವೊಂದು ಅಪ್ಪಚ್ಚಿಯಾಗಿದ್ದು ಅದರ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕನನ್ನು ಖಾಸಿಮ್ ಎಂದು ಗುರುತಿಸಲಾಗಿದ್ದು ಅವರು ಹೆಗಡೆನಗರದ ನಿವಾಸಿಯಂತೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಪ್ರತ್ಯಕ್ಷದರ್ಶಿ ಹೇಳುವ ಪ್ರಕಾರ ಆಟೋದಲ್ಲಿದ್ದ ಪ್ರಯಾಣಿಕರೊಬ್ಬರು ಇಳಿದು ದೂರ ಬಂದ ಕಾರಣ ಬಚಾವಾಗಿದ್ದಾರೆ.

ಇದನ್ನೂ ಓದಿ:  KSRTC ಚಾಲಕನಿಗೆ ಹೃದಯಾಘಾತ: ನಿಯಂತ್ರಣ ತಪ್ಪಿ ಮಹಿಳೆಗೆ ಗುದ್ದಿದ ಬಸ್, ಇಬ್ಬರ ಸಾವು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ