Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ನಾಲ್ಕೇ ತಿಂಗಳಿಗೆ ಗಂಡನನ್ನು ಕೊಂದು ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿದ ಯುವತಿ!

ಮಧ್ಯಪ್ರದೇಶದ ಇಂದೋರ್‌ನಲ್ಲಿ ರಾಹುಲ್ ಎಂಬ ಯುವಕನ ಶವ ಪತ್ತೆಯಾಗಿದೆ. ಇತ್ತೀಚೆಗೆ ಮದುವೆಯಾಗಿದ್ದ ಆತನನ್ನು ಆತನ ಹೆಂಡತಿಯೇ ಕೊಲೆ ಮಾಡಿದ್ದಾಳೆ. ಆತನ ಮೇಲೆ 36 ಬಾರಿ ಚಾಕುವಿನಿಂದ ಹಲ್ಲೆ ನಡೆಸಿದ್ದ ಆಕೆ ನಂತರ ತನ್ನ ಗೆಳೆಯನಿಗೆ ಕರೆ ಮಾಡಿ ಆ ಹೆಣವನ್ನು ತೋರಿಸಿದ್ದಾಳೆ. ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿ ಈ ಘಟನೆ ನಡೆದಿದೆ. ನವವಿವಾಹಿತ ವಧು ಮದುವೆಯಾದ ಕೇವಲ 4 ತಿಂಗಳ ನಂತರ ತನ್ನ ಪತಿಯನ್ನು ಕ್ರೂರವಾಗಿ ಕೊಂದಿದ್ದಾಳೆ. ಅದಾದ ನಂತರ ಅವಳು ತನ್ನ ಗೆಳೆಯನಿಗೆ ವಿಡಿಯೋ ಕರೆ ಮಾಡಿ ಕೆಲಸ ಮುಗಿಯಿತು ಬೇಬಿ! ಎಂದು ಹೇಳಿದ್ದಾಳೆ!

ಮದುವೆಯಾದ ನಾಲ್ಕೇ ತಿಂಗಳಿಗೆ ಗಂಡನನ್ನು ಕೊಂದು ಪ್ರಿಯಕರನಿಗೆ ವಿಡಿಯೋ ಕಾಲ್ ಮಾಡಿದ ಯುವತಿ!
Marriage
Follow us
ಸುಷ್ಮಾ ಚಕ್ರೆ
|

Updated on: Apr 16, 2025 | 4:06 PM

ಬುರ್ಹಾನ್​ಪುರ, ಏಪ್ರಿಲ್ 16: ಮಧ್ಯಪ್ರದೇಶದ (Madhya Pradesh) ಬುರ್ಹಾನ್‌ಪುರದಲ್ಲಿ ಪೊಲೀಸರು ರಾಹುಲ್ ಎಂಬ ಯುವಕನ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ರಾಹುಲ್‌ನನ್ನು ಬೇರೆ ಯಾರೋ ಕೊಲೆ ಮಾಡಿಲ್ಲ. ಆತನನ್ನು 4 ತಿಂಗಳ ಹಿಂದೆ ಮದುವೆಯಾಗಿದ್ದ ಅವನ ಅಪ್ರಾಪ್ತ ವಯಸ್ಸಿನ ಹೆಂಡತಿಯೇ ಕೊಲೆ ಮಾಡಿದ್ದಾಳೆ. ಆ ಯುವತಿಗೆ ಈಗಾಗಲೇ ಒಬ್ಬ ಪ್ರಿಯಕರನಿದ್ದ. ಪ್ರಿಯಕರನಿಗಾಗಿ ಪತ್ನಿಯೇ ಪತಿಯ ಮೇಲೆ 36 ಬಾರಿ ಹಲ್ಲೆ ನಡೆಸಿ ಕೊಂದಿದ್ದಾಳೆ.

ಏಪ್ರಿಲ್ 13ರಂದು ಇಂದೋರ್-ಇಚಾಪುರ್ ಹೆದ್ದಾರಿಯ ಬುರ್ಹಾನ್‌ಪುರ ಐಟಿಐ ಕಾಲೇಜು ಬಳಿಯ ಪೊದೆಗಳಲ್ಲಿ ಯುವಕನ ಶವ ಪತ್ತೆಯಾಗಿತ್ತು. ಈ ಘಟನೆಯನ್ನು ಬಹಿರಂಗಪಡಿಸಿದ ಪೊಲೀಸರು ಮೃತನ ಪತ್ನಿ, ಆಕೆಯ ಪ್ರಿಯಕರ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ. ಪೊದೆಗಳಲ್ಲಿ ಪತ್ತೆಯಾದ ಶವವನ್ನು ಶಹಪುರದ ನಿವಾಸಿ ರಾಮಚಂದ್ರ ಪಾಂಡೆ ಅವರ ಪುತ್ರ ರಾಹುಲ್ ಎಂದು ಗುರುತಿಸಲಾಗಿದೆ.

ಏಪ್ರಿಲ್ 12ರಂದು ರಾಹುಲ್ ತನ್ನ ಪತ್ನಿಯೊಂದಿಗೆ ಮನೆಯಿಂದ ಹೊರಟಿದ್ದ. ಆದರೆ ಏಪ್ರಿಲ್ 13ರಂದು ಆತನ ಶವ ಪತ್ತೆಯಾದಾಗ ಆತನ ಪತ್ನಿ ಕಾಣೆಯಾಗಿದ್ದಳು. ತನಿಖೆಯಲ್ಲಿ ರಾಹುಲ್‌ನನ್ನು ಆತನ ಪತ್ನಿ, ಆಕೆಯ ಪ್ರಿಯಕರ ಭರತ್ ಅಲಿಯಾಸ್ ಯುವರಾಜ್ ಪಾಟೀಲ್ ಮತ್ತು ಆತನ ಇಬ್ಬರು ಸಹಚರರು ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ರಾಹುಲ್ ದೇಹದ ಮೇಲೆ ಚಾಕುವಿನಿಂದ 36 ಬಾರಿ ಇರಿದಿದ್ದರು.

ಇದನ್ನೂ ಓದಿ
Image
WITT 2025: ಪ್ರಧಾನಿಯನ್ನು ಶ್ಲಾಘಿಸಿದ ಟಿವಿ9 ನೆಟ್ವರ್ಕ್ ಸಿಇಒ
Image
WITT 2025: ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’: ಮೋದಿ ಭಾಷಣ
Image
WITT 2025: ಪಿಎಂ ಮೋದಿ ಭಾಗಿ; ನೇರಪ್ರಸಾರ ವೀಕ್ಷಿಸಿ
Image
ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು?

ಇದನ್ನೂ ಓದಿ: ಆಂಧ್ರಪ್ರದೇಶ: ನವವಿವಾಹಿತೆಯ ಶವ ಪತ್ತೆ, ಮರ್ಯಾದಾ ಹತ್ಯೆ ಶಂಕೆ

ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ, ಏಪ್ರಿಲ್ 12ರ ಸಂಜೆ ರಾಹುಲ್ ಮತ್ತು ಅವರ ಪತ್ನಿ ಮಾರ್ಕೆಟಿಗೆ ಹೋಗುವ ನೆಪದಲ್ಲಿ ಬುರ್ಹಾನ್‌ಪುರಕ್ಕೆ ಬಂದಿರುವುದು ಕಂಡುಬಂದಿದೆ. ಅವರು ಹಿಂತಿರುಗುವಾಗ ಆತನ ಪತ್ನಿ ಉದ್ದೇಶಪೂರ್ವಕವಾಗಿ ತನ್ನ ಚಪ್ಪಲಿಯನ್ನು ಐಟಿಐ ಕಾಲೇಜು ಬಳಿ ಬೀಳಿಸಿದ್ದಳು. ಆ ಚಪ್ಪಲಿ ಹೆಕ್ಕಿ ತರಲು ಗಂಡನ ಬಳಿ ಹೇಳಿ ಬೈಕು ನಿಲ್ಲಿಸಿದಳು. ಈ ಮಧ್ಯೆ, ಯುವರಾಜ್ ಅವರನ್ನು ಹಿಂಬಾಲಿಸುತ್ತಿದ್ದ. ಅವನ ಇಬ್ಬರು ಸ್ನೇಹಿತರು ರಾಹುಲ್ ಮೇಲೆ ಹಲ್ಲೆ ನಡೆಸಿದರು. ನಂತರ ಆ ಮಹಿಳೆ ರಾಹುಲ್ ನ ತಲೆಗೆ ಹೊಲದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯಿಂದ ಹೊಡೆದು, ನಂತರ ಹೊಂಡಕ್ಕೆ ತಳ್ಳಿದ್ದಾಳೆ. ಇದಾದ ನಂತರ, ರಾಹುಲ್‌ನ ಕುತ್ತಿಗೆ, ಬೆನ್ನು, ಹೊಟ್ಟೆ ಮತ್ತು ತಲೆಗೆ ಚಾಕು ಪದೇ ಪದೇ ದಾಳಿ ಮಾಡಿದ್ದಾರೆ. ಇದರಿಂದಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದ.

ಇದನ್ನೂ ಓದಿ: ಪ್ರೇಮಿಯೊಂದಿಗೆ ಸಿಕ್ಕಿ ಬಿದ್ದ ಪತ್ನಿ, ದುಪಟ್ಟಾದಿಂದ ಕುತ್ತಿಗೆ ಬಿಗಿದು ಪತಿಯ ಕೊಲೆ

ಕೊಲೆಯ ನಂತರ, ಮೃತನ ಪತ್ನಿ ತನ್ನ ಪ್ರಿಯಕರ ಯುವರಾಜ್‌ಗೆ ವೀಡಿಯೊ ಕರೆ ಮಾಡಿದ್ದಾಳೆ. ಬೀಬಿ, ಕೆಲಸ ಮುಗೀತು ಎಂದು ಹೇಳಿದ ಆಕೆ ಗಂಡನ ರಕ್ತಸಿಕ್ತ ದೇಹವನ್ನು ಅವನಿಗೆ ತೋರಿಸಿದ್ದಾಳೆ. ಇದಾದ ನಂತರ ಆರೋಪಿಗಳು ರೈಲಿನಲ್ಲಿ ಇಂದೋರ್ ಕಡೆಗೆ ಮತ್ತು ನಂತರ ಉಜ್ಜಯಿನಿ ಕಡೆಗೆ ಪರಾರಿಯಾಗಿದ್ದಾರೆ. ಮೊಬೈಲ್ ಸ್ಥಳ ಮತ್ತು ಇತರ ತಾಂತ್ರಿಕ ಪುರಾವೆಗಳ ಆಧಾರದ ಮೇಲೆ, ಪೊಲೀಸರು ಇಂದೋರ್‌ನ ಸನ್ವರ್‌ನ ಎಲ್ಲರನ್ನೂ ಬಂಧಿಸಿದರು.

ರಾಹುಲ್ ಪತ್ನಿ ಮದುವೆಗೂ ಮುನ್ನ ಯುವರಾಜ್ ಜೊತೆ ಸಂಬಂಧ ಹೊಂದಿದ್ದಳು. ಮದುವೆಯ ನಂತರವೂ ಅವರ ಸಂಪರ್ಕ ಮುಂದುವರೆಯಿತು. ಆರೋಪಿ ಯುವರಾಜ್ ಸ್ವತಃ ಇಡೀ ಕೊಲೆಯನ್ನು ಯೋಜಿಸಿದ್ದ. ಪೊಲೀಸರ ಪ್ರಕಾರ, ಮೊಬೈಲ್ ವಿವರಗಳು ಮತ್ತು ಚಾಟ್ ನಿಂದ ರಾಹುಲ್ ಕೊಲೆ ಸಂಪೂರ್ಣವಾಗಿ ಮೊದಲೇ ಪ್ಲಾನ್ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ