ಮೂಲವ್ಯಾಧಿ ನರಕ ಯಾತನೆಯಿಂದ ಹೊರಬರಲು ಇವುಗಳನ್ನು ಸೇವಿಸಿ
ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಉಷ್ಣತೆ ನೀಡುವ ಆಹಾರ ಸೇವಿಸಿದಾಗ ಮೂಲವ್ಯಾಧಿ ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ವೈದ್ಯರು ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ.
ಇತ್ತೀಚೆಗೆ ಮೂಲವ್ಯಾಧಿಯಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಕೂರಕ್ಕೆ ಆಗ್ತಾಯಿಲ್ಲ, ನಡೆಯಕ್ಕೂ ಆಗ್ತಯಿಲ್ಲ, ಮಲಗಕ್ಕೂ ಆಗ್ತಾಯಿಲ್ಲ ಅಂತ ಗೋಳಾಡುತ್ತಾರೆ. ನರಕ ತೋರಿಸುವ ಮೂಲವ್ಯಾಧಿಗೆ ಮುಖ್ಯ ಕಾರಣ ಜೀವನ ಶೈಲಿ. ಮೂಲವ್ಯಾಧಿಯನ್ನು ಆಂಗ್ಲ ಭಾಷೆಯಲ್ಲಿ ಪೈಲ್ಸ್ (Piles) ಅಂತ ಕರೆಯುತ್ತೇವೆ. ಅತಿಯಾದ ಮಾಂಸ ಸೇವಿಸುವುದರಿಂದ ಹೆಚ್ಚಾಗಿ ಮೂಲವ್ಯಾಧಿ ಕಾಡಬಹುದು. ಆದರೆ ಮೂಲವ್ಯಾಧಿ ಬಗ್ಗೆ ಆತಂಕ ಬೇಡ. ನಾವು ಇಲ್ಲಿ ತಿಳಿಸಿದ ಕೆಲ ಮದ್ದುಗಳು ಮೂಲವ್ಯಾಧಿಯನ್ನು ನಿವಾರಿಸುತ್ತದೆ.
* ಹಂದಿ ಮಾಂಸ ಸೇವನೆ ಸಾಮಾನ್ಯವಾಗಿ ದೇಹಕ್ಕೆ ಹೆಚ್ಚು ಉಷ್ಣತೆ ನೀಡುವ ಆಹಾರ ಸೇವಿಸಿದಾಗ ಮೂಲವ್ಯಾಧಿ ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ವೈದ್ಯರು ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಲು ಸೂಚಿಸುತ್ತಾರೆ. ಇನ್ನು ಹಂದಿ ಮಾಂಸ ದೇಹಕ್ಕೆ ತೀರ ತಂಪು ನೀಡುತ್ತದೆ. ಹಂದಿ ಮಾಂಸದ ಡ್ರೈ ಅಥವಾ ಸಾಂಬಾರನ್ನು ಸೇವಿಸಿದರೆ ಪ್ರಾರಂಭಿಕ ಹಂತದ ಮೂಲವ್ಯಾಧಿಯನ್ನು ನಿವಾರಿಸಬಹುದು. ಆದರೆ ಕೋಳಿ ಮಾಂಸವನ್ನು ಸೇವಿಸುವುದು ಸ್ವಲ್ಪ ಸಮಯ ನಿಲ್ಲಿಸಿ.
* ನಿಂಬೆ ಗಿಡದ ಹೂ ಮಲದ ಜೊತೆ ವಿಪರೀತ ರಕ್ತ ಹೋಗುವುದು ಮೂಲವ್ಯಾಧಿಯ ಲಕ್ಷಣ. ಮಲದ ಜೊತೆ ರಕ್ತಸ್ರಾವವಾಗುತ್ತಿದ್ದರೆ ನಿಂಬೆ ಗಿಡದ ಹೂ ಮತ್ತು ಬೇರನ್ನು ಅರಿದು, ಅಕ್ಕಿ ತೊಳೆದ ನೀರಿಗೆ ಸೇರಿಸಿ ಸೇವಿಸಿದರೆ ಒಳ್ಳೆಯದು.
* ಸಿಹಿಗುಂಬಳ ಬಳಸಿ ಸಿಹಿಗುಂಬಳವನ್ನು ಊಟದ ಜೊತೆ ಹೆಚ್ಚು ಬಳಸಬೇಕು. ಇದರ ಪಲ್ಯೆ ಅಥವಾ ಸಾಂಬಾರು ತುಂಬಾ ರುಚಿಯಾಗಿರುತ್ತದೆ. ಆದರೆ ಇದನ್ನು ಇಷ್ಟಪಡುವವರು ತುಂಬಾ ಕಡಿಮೆ. ಮೂಲವ್ಯಾಧಿಯಿಂದ ಬಳಲುತ್ತಿರುವವರು ಸಿಹಿಗುಂಬಳವನ್ನು ಹೆಚ್ಚಾಗಿ ಸೇವಿಸಿ.
* ಹೊನಗೊನೆ ಸೊಪ್ಪು ಹೊನಗೊನೆ ಸೊಪ್ಪು ಮಾರುಕಟ್ಟೆಯಲ್ಲಿ ಹೆಚ್ಚು ಸಿಗಲ್ಲ. ಇದು ತೋಟದಲ್ಲಿ ಸಿಗುವ ಸೊಪ್ಪು. ಇದರ ಪಲ್ಯೆ ನಾಲಿಗೆಗೆ ಹೆಚ್ಚು ರುಚಿ ನೀಡುತ್ತದೆ. ಹೊನಗೊನೆ ಹೆಚ್ಚು ಸೇವಿಸುವುದರಿಂದ ಮೂಲವ್ಯಾಧಿಯಿಂದ ಪಾರಾಗಬಹುದು. ಹೊನಗೊನೆ ಸೊಪ್ಪಿನ ಜೊತೆ ಮೂಲಂಗಿ ಸೊಪ್ಪು ಕೂಡಾ ಬಳಸಿ.
* ಹುಣಸೆ ಬೀಜ ಮೊದಲು ಹುಣಸೆ ಬೀಜದ ಸಿಪ್ಪೆ ತೆಗೆಯಿರಿ. ಹುಣಸೆ ಬೀಜದೊಳಗಿರುವ ಬಿಳಿ ಬಣ್ಣದ ಬೀಜವನ್ನು ನುಣುವಾಗುವಂತೆ ರುಬ್ಬಿ. ಅದನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇರಿವಿಸಿದರೆ ಮೂಲವ್ಯಾಧಿ ನಿವಾರಣೆಯಾಗುತ್ತದೆ.
ಇದನ್ನೂ ಓದಿ
Health Tips: ನಿಮಗೆ ಡಯಾಬಿಟಿಸ್ ಇದೆಯಾ?; ಮಧುಮೇಹಿಗಳಿಗೆ ವ್ಯಾಯಾಮದಿಂದ ಇದೆ ಭಾರೀ ಉಪಯೋಗ
Winter Health Tips: ಚಳಿಗಾಲದಲ್ಲಿ ಎದುರಾಗಲಿದೆಯೇ ಶೀತ, ಜ್ವರ? 5 ಆಹಾರ ಪದಾರ್ಥಗಳಲ್ಲಿದೆ ಸಮಸ್ಯೆಗೆ ಪರಿಹಾರ