AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿಮಗೆ ಡಯಾಬಿಟಿಸ್​ ಇದೆಯಾ?; ಮಧುಮೇಹಿಗಳಿಗೆ ವ್ಯಾಯಾಮದಿಂದ ಇದೆ ಭಾರೀ ಉಪಯೋಗ

Diabetes Symptoms: ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಡಯಾಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಕ್ಲಿನಿಕಲ್ ನಡೆಸಿದ ಅಧ್ಯಯನವು ಮೂರು ವರ್ಷಗಳವರೆಗೆ ಮಧುಮೇಹಿಗಳನ್ನು ಅಧ್ಯಯನಕ್ಕೆ ಒಳಪಡಿಸಿದೆ. ನಿಯಮಿತ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು ಶೇ. 58ರಷ್ಟು ಕಡಿಮೆ ಮಾಡುತ್ತದೆ.

Health Tips: ನಿಮಗೆ ಡಯಾಬಿಟಿಸ್​ ಇದೆಯಾ?; ಮಧುಮೇಹಿಗಳಿಗೆ ವ್ಯಾಯಾಮದಿಂದ ಇದೆ ಭಾರೀ ಉಪಯೋಗ
ಡಯಾಬಿಟಿಸ್
TV9 Web
| Updated By: ಸುಷ್ಮಾ ಚಕ್ರೆ|

Updated on: Dec 14, 2021 | 4:11 PM

Share

ಮೊದಲೆಲ್ಲ ಬಿಪಿ, ಡಯಾಬಿಟಿಸ್​ ಶ್ರೀಮಂತರ ಕಾಯಿಲೆ ಎನಿಸಿಕೊಂಡಿತ್ತು. ಆದರೀಗ ಈ ಎರಡೂ ರೋಗಗಳು ಎಲ್ಲ ವರ್ಗ, ವಯಸ್ಸಿನವರಲ್ಲೂ ಸಾಮಾನ್ಯವಾಗಿಬಿಟ್ಟಿದೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಮಧುಮೇಹದಿಂದ ಬಳಲುತ್ತಿರುವ ಜನರ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ. ವ್ಯಾಯಾಮವು ಮಾನವರ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ. ವ್ಯಾಯಾಮದ ಮೂಲಕ ಪ್ರಚೋದಿಸಲ್ಪಡುವ ಸಂಕೀರ್ಣ ಪ್ರಕ್ರಿಯೆಯ ಮೂಲಕ ಸ್ನಾಯುಗಳಿಂದ ಸಕ್ಕರೆಯನ್ನು ಹೀರಿಕೊಳ್ಳಲು ಸಹಾಯ ಮಾಡುವ ಶಕ್ತಿಯಾಗಿ ಪ್ರೋಟೀನ್‌ಗಳು ಕಾರ್ಯ ನಿರ್ವಹಿಸುತ್ತವೆ. ಈ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಆ ಅಧ್ಯಯನದ ಕೆಲವು ಮುಖ್ಯಾಂಶಗಳು ಇಲ್ಲಿವೆ:

ಸ್ನಾಯುಗಳಲ್ಲಿನ ಪ್ರೋಟೀನ್ ಮಾಪನಕ್ಕೆ ಸಹಾಯ ಮಾಡುವ ಮಾಸ್ ಸ್ಪೆಕ್ಟ್ರೋಮೆಟ್ರಿಯ ಬಳಕೆಯನ್ನು ಅಧ್ಯಯನವು ಒಳಗೊಂಡಿತ್ತು. ಪ್ರೋಟೀನ್ ಚಟುವಟಿಕೆಯು ವಿಶಿಷ್ಟವಾಗಿದೆ ಮತ್ತು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತದೆ. ಪ್ರೋಟೀನ್ ಚಟುವಟಿಕೆಯಲ್ಲಿನ ವ್ಯತ್ಯಾಸವು ಸಕ್ಕರೆ ಹೀರಿಕೊಳ್ಳುವಿಕೆಯ ಮಟ್ಟದಲ್ಲಿನ ವ್ಯತ್ಯಾಸವನ್ನು ಸಹ ಸೂಚಿಸುತ್ತದೆ.

ಸಿಡ್ನಿ ವಿಶ್ವವಿದ್ಯಾನಿಲಯದ ಪ್ರೆಸ್ ಪ್ರಕಾರ, ಅಧ್ಯಯನದ ಹಿರಿಯ ಸಹ-ಲೇಖಕ ಪ್ರೊಫೆಸರ್ ಡೇವಿಡ್ ಜೇಮ್ಸ್ ಈ ರೀತಿ ಹೇಳಿದ್ದಾರೆ. ವ್ಯಾಯಾಮವು ನಮಗೆ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಇದು ನಿರ್ದಿಷ್ಟ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಉದಾಹರಣೆಗೆ, ಊಟದ ನಂತರ ರಕ್ತದಿಂದ ಸಕ್ಕರೆಯನ್ನು ಹೀರಿಕೊಳ್ಳುವ ನಮ್ಮ ಸ್ನಾಯುಗಳ ಸಾಮರ್ಥ್ಯವನ್ನು ಇದು ಸುಧಾರಿಸುತ್ತದೆ.

ಈ ಪ್ರಕ್ರಿಯೆಯು ವಿಫಲವಾದಾಗ ಇದನ್ನು ‘ಪ್ರಿಡಯಾಬಿಟಿಸ್’ ಎಂದು ಕರೆಯಲಾಗುತ್ತದೆ. 2ನೇ ಟೈಪ್​ನ 2 ಡಯಾಬಿಟಿಸ್ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಇದು ಅಪಾಯಕಾರಿ ಅಂಶವಾಗಿದೆ. ಪ್ರಿಡಿಯಾಬಿಟಿಸ್‌ಗೆ ಕಾರಣವೇನು ಎಂದು ಸಂಶೋಧಕರಿಗೆ ತಿಳಿದಿಲ್ಲ.

ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಡಯಾಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಕ್ಲಿನಿಕಲ್ ನಡೆಸಿದ ಅಧ್ಯಯನವು ಮೂರು ವರ್ಷಗಳವರೆಗೆ ಮಧುಮೇಹ ಅಪಾಯದಲ್ಲಿರುವ ಜನರೊಂದಿಗೆ ಅಧ್ಯಯನ ನಡೆಸಿದೆ. ನಿಯಮಿತ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು ಶೇ. 58ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಿರುವಾಗ ವ್ಯಾಯಾಮದ ಮೂಲಕ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದು ಈ ಕೆಳಗಿನಂತಿದೆ.

ವ್ಯಾಯಾಮದಿಂದ ಪ್ರಯೋಜನಗಳು: *ತೂಕದ ನಿಯಂತ್ರಣ *ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ *ಬಲವಾದ ಸ್ನಾಯುಗಳು *ಬಲವಾದ ಮೂಳೆಗಳು *ಮನಸ್ಥಿತಿ ಸುಧಾರಣೆ *ಶಕ್ತಿ *ಉತ್ತಮ ನಿದ್ರೆ *ಒತ್ತಡ ನಿರ್ವಹಣೆ

ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಿರುವಾಗ ಹೃದಯವನ್ನು ಆರೋಗ್ಯವಾಗಿರಿಸಲು ಮತ್ತು ಸದೃಢವಾಗಿರಿಸಲು ವ್ಯಾಯಾಮ ಅತ್ಯವಶ್ಯಕ. ಜತೆಗೆ ವ್ಯಾಯಾಮ ಮಾಡುವ ಮೂಲಕ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು

Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ