Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

Health Tips: ಮಧುಮೇಹ ದೀರ್ಘಕಾಲದ ಕಾಯಿಲೆಯಾಗಿದೆ ಮತ್ತು ಅದರ ಪರಿಣಾಮಗಳು ತಕ್ಷಣವೇ ಸ್ಪಷ್ಟವಾಗಿ ಪ್ರಕಟಗೊಳ್ಳುವುದಿಲ್ಲ. ಅಲ್ಲದೇ ಡಯಾಬಿಟಿಸ್​ ಲಕ್ಷಣಗಳು ಇತರ ಸಾಮಾನ್ಯ ಕಾಯಿಲೆಗಳ ಲಕ್ಷಣಗಳಂತೆಯೇ ಇರುವ ಕಾರಣದಿಂದಲೂ ಇವುಗಳನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ.

Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
ಸಂಗ್ರಹ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Nov 10, 2021 | 1:37 PM

ಮಧುಮೇಹ ಅಥವಾ ಡಯಾಬಿಟಿಸ್ (Diabetes) ಮೊದಲೆಲ್ಲ ಶ್ರೀಮಂತರ ಕಾಯಿಲೆ ಎನಿಸಿಕೊಂಡಿತ್ತು. ಆದರೆ, ಈಗ ಎಲ್ಲರಿಗೂ ಈ ಸಕ್ಕರೆ ಕಾಯಿಲೆ ಸಾಮಾನ್ಯವಾಗಿದೆ. ಆರಂಭಿಕ ಹಂತದಲ್ಲೇ ಮಧುಮೇಹವನ್ನು ಕಂಡುಹಿಡಿದರೆ ಸುಲಭವಾಗಿ ಅದನ್ನು ನಿಯಂತ್ರಿಸಬಹುದು. ಮಧುಮೇಹದ 2ನೇ ಟೈಪ್ (Type 2 Diabetes) ಬಂದರೆ ಅದರ ಲಕ್ಷಣಗಳು ಯಾವ ರೀತಿಯಲ್ಲಿರುತ್ತದೆ? ದೇಹದಲ್ಲಿ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ. 2ನೇ ವಿಧದ ಮಧುಮೇಹದ ಲಕ್ಷಣದಲ್ಲಿ ಆಯಾಸ, ತೂಕ ಕಡಿಮೆಯಾಗುವುದು, ಆಗಾಗ ಮೂತ್ರ ವಿಸರ್ಜನೆ, ದೃಷ್ಟಿ ಮಂದವಾಗುವುದು, ಅತಿಯಾದ ಹಸಿವು, ಕಾಲು ನೋವು ಹೀಗೆ ಹಲವು ಲಕ್ಷಣಗಳನ್ನು ನಾವು ಕಾಣಬಹುದು.

2014ರಲ್ಲಿ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ ಎಂಬ ಮಾಧ್ಯಮದಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತದಲ್ಲಿ 6.51 ಕೋಟಿ ವಯಸ್ಕರಿಗೆ ಮಧುಮೇಹಕ್ಕೆ ಸಂಬಂಧಿಸಿದ ರೋಗದ ಲಕ್ಷಣಗಳಿವೆ. ಹೆಚ್ಚಿನ ಜನರು ಆರಂಭಿಕ ರೋಗಲಕ್ಷಣಗಳನ್ನು ಕಡೆಗಣಿಸುತ್ತಾರೆ ಎಂದು ಈ ಅಧ್ಯಯನವು ವಿವರಿಸುತ್ತದೆ. ವಾಸ್ತವದಲ್ಲಿ ಮಧುಮೇಹ ದೀರ್ಘಕಾಲದ ಕಾಯಿಲೆಯಾಗಿದೆ ಮತ್ತು ಅದರ ಪರಿಣಾಮಗಳು ತಕ್ಷಣವೇ ಸ್ಪಷ್ಟವಾಗಿ ಪ್ರಕಟಗೊಳ್ಳುವುದಿಲ್ಲ. ಅಲ್ಲದೇ ಈ ಲಕ್ಷಣಗಳು ಇತರ ಸಾಮಾನ್ಯ ಕಾಯಿಲೆಗಳ ಲಕ್ಷಣಗಳಂತೆಯೇ ಇರುವ ಕಾರಣದಿಂದಲೂ ಇವುಗಳನ್ನು ಹೆಚ್ಚಿನವರು ನಿರ್ಲಕ್ಷಿಸುತ್ತಾರೆ.

ಮಧುಮೇಹ ಎಂದಾಕ್ಷಣ ಕೆಲವರಲ್ಲಿ ಅಳುಕಿನ ಭಾವ ಎದುರಾಗುತ್ತದೆ. ಇದರಿಂದ ತಮ್ಮ ಜೀವನವೇ ಮುಗಿದ ಹಾಗೆ ಎಂದು ಹೆಚ್ಚಿನವರು ಭಾವಿಸುತ್ತಾರೆ. ಇನ್ನು ಕೆಲವರು ಅನೇಕ ಔಷಧಿ ಮತ್ತು ಮಾತ್ರೆಗಳನ್ನು ಸೇವಿಸುತ್ತಾ ನರಳುತ್ತಿರುತ್ತಾರೆ. ತಾವು ಸೇವಿಸುವ ಔಷಧಿಗಳಿಂದ ಕೆಲವರಿಗೆ ಅಡ್ಡಪರಿಣಾಮಗಳು ಉಂಟಾಗಿ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಟೈಪ್ 2 ಡಯಾಬಿಟಿಸ್ ದೀರ್ಘಕಾಲದ ಚಯಾಪಚಯ ಸ್ಥಿತಿಯಾಗಿದ್ದು, ಇದು ಅಧಿಕ ರಕ್ತದ ಸಕ್ಕರೆಯ ಮಟ್ಟದಿಂದ ನಿರೂಪಿಸಲ್ಪಟ್ಟಿದೆ, ಇದನ್ನು ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಮಾತ್ರ ನಿರ್ವಹಿಸಬಹುದು. ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ (ಹಾರ್ಮೋನ್) ಅನ್ನು ಉತ್ಪಾದಿಸದಿದ್ದಾಗ ಅಥವಾ ಆಹಾರದಿಂದ ಉತ್ಪತ್ತಿಯಾಗುವ ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಮಾಡಲು ಜೀವಕೋಶಗಳು ಅದನ್ನು ಬಳಸಿಕೊಳ್ಳಲು ಸಾಧ್ಯವಾಗದಿದ್ದರೆ ಒಬ್ಬ ವ್ಯಕ್ತಿಗೆ ಮಧುಮೇಹ ರೋಗನಿರ್ಣಯ ಮಾಡಲಾಗುತ್ತದೆ.

ಈ ಕಾರಣದಿಂದಾಗಿ, ಗ್ಲೂಕೋಸ್ ರಕ್ತದಲ್ಲಿ ಉಳಿಯುತ್ತದೆ, ಇದು ದೇಹದ ವಿವಿಧ ಕಾರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹದ ಚಿಹ್ನೆಗಳು ಮತ್ತು ಲಕ್ಷಣಗಳು ನಿಧಾನವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆ. ಆದಾಗ್ಯೂ, ಮಧುಮೇಹದ ಹೆಚ್ಚಿನ ಸಂದರ್ಭಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ಚಿಹ್ನೆಗಳು ಇವೆ. ಪಾಲಿಡಿಪ್ಸಿಯಾ ಎನ್ನುವುದು ಅತಿಯಾದ ಬಾಯಾರಿಕೆಯನ್ನು ವಿವರಿಸಲು ಬಳಸುವ ವೈದ್ಯಕೀಯ ಪದವಾಗಿದೆ, ಇದು ಮಧುಮೇಹ ರೋಗಿಗಳಲ್ಲಿ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಅತಿಯಾದ ಬಾಯಾರಿಕೆ ಅಥವಾ ಶುಷ್ಕತೆಯನ್ನು ಅನುಭವಿಸುತ್ತಾನೆ. ಬಾತ್​ರೂಂಗೆ ಹೋದಾಗ ಮಧುಮೇಹದ ಸಂದರ್ಭದಲ್ಲಿ ಇದು ಸಂಭವಿಸುತ್ತದೆ. ರಕ್ತಪ್ರವಾಹದಲ್ಲಿ ಅತಿಯಾದ ಗ್ಲೂಕೋಸ್ ಇರುವ ಕಾರಣ, ನಮ್ಮ ಮೂತ್ರಪಿಂಡಗಳು ನಮ್ಮ ವ್ಯವಸ್ಥೆಯಿಂದ ಅವುಗಳನ್ನು ತೆಗೆದುಹಾಕಲು ಹೆಚ್ಚುವರಿ ಕೆಲಸ ಮಾಡಬೇಕಾಗುತ್ತದೆ. ಇದು ಮೂತ್ರ ವಿಸರ್ಜನೆಯ ಆವರ್ತನ ಮತ್ತು ದೇಹದ ನೀರಿನ ಅಗತ್ಯವನ್ನು ಹೆಚ್ಚಿಸುತ್ತದೆ. ದೇಹದಿಂದ ದ್ರವದ ನಷ್ಟವನ್ನು ಸರಿದೂಗಿಸಲು ನೀವು ಅಂತಿಮವಾಗಿ ಹೆಚ್ಚು ಬಾಯಾರಿಕೆಯನ್ನು ಅನುಭವಿಸುತ್ತೀರಿ.

ಪೊಲುರಿಯಾ ಒಂದು ವೈದ್ಯಕೀಯ ಸ್ಥಿತಿಯಾಗಿದ್ದು, ಮೂತ್ರದ ಅತಿಯಾದ ವಿಸರ್ಜನೆಯನ್ನು ವ್ಯಾಖ್ಯಾನಿಸಲು ಬಳಸಲಾಗುತ್ತದೆ, ಇದು ಮಧುಮೇಹದ ಮತ್ತೊಂದು ವಿಶಿಷ್ಟ ಲಕ್ಷಣವಾಗಿದೆ. ಅನಿಯಂತ್ರಿತ ಅಥವಾ ಅಧಿಕ ರಕ್ತದ ಸಕ್ಕರೆ ಮಟ್ಟವು ರಕ್ತಪ್ರವಾಹದಲ್ಲಿನ ಬಳಕೆಯಾಗದ ಗ್ಲೂಕೋಸ್ ಮತ್ತು ವಿಷವನ್ನು ತೆಗೆದುಹಾಕಲು ಮೂತ್ರಪಿಂಡಗಳು ಅತಿಯಾದ ಕೆಲಸ ಮಾಡಲು ಒತ್ತಾಯಿಸುತ್ತದೆ. ಮೂತ್ರಪಿಂಡಗಳು ಅತಿಯಾದ ಗ್ಲೂಕೋಸ್ ಅನ್ನು ಫಿಲ್ಟರ್ ಮಾಡಿದ ನಂತರ ಅವು ಮೂತ್ರದ ಮೂಲಕ ಹೊರಹಾಕಲ್ಪಡುತ್ತವೆ. ಹೆಚ್ಚಿನ ಜನರು ದಿನಕ್ಕೆ ಸುಮಾರು 1-2 ಲೀಟರ್ ಮೂತ್ರವನ್ನು ಉತ್ಪಾದಿಸುತ್ತಾರೆ, ಆದರೆ ಪಾಲಿಯುರಿಯಾದ ಸಂದರ್ಭದಲ್ಲಿ, ಇದು ದಿನಕ್ಕೆ 3 ಲೀಟರ್​ಗಿಂತ ಮೂತ್ರಕ್ಕೆ ಅರ್ಜೆಂಟ್ ಆಗುತ್ತದೆ. ಪಾಲಿಯುರಿಯಾಕ್ಕೆ ಕಾರಣವಾಗುವ ಇತರ ಪರಿಸ್ಥಿತಿಗಳು ಗರ್ಭಧಾರಣೆ, ಮೂತ್ರಪಿಂಡದ ಕಾಯಿಲೆ, ಹೆಚ್ಚಿನ ಕ್ಯಾಲ್ಸಿಯಂ ಮಟ್ಟಗಳು ಮತ್ತು ಮೂತ್ರವರ್ಧಕ ಔಷಧಿಗಳಾಗಿವೆ.

ಟೈಪ್ 2 ಮಧುಮೇಹ ಸಮಸ್ಯೆಯು ಇತ್ತೀಚಿನ ಜನರಿಗೆ ಹೆಚ್ಚು ಕಾಡುತ್ತಿದೆ. ನಿಯಮಿತವಾದ ಆಹಾರ ಮತ್ತು ವ್ಯಾಯಾಮದ ಮೂಲಕ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಟೈಪ್ 2 ಡಯಾಬಿಟಿಸ್ ತೊಂದರೆಯಲ್ಲಿರುವವರು ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಲು ಸಹಾಯಕವಾಗುತ್ತದೆ. ಕೇವಲ ವ್ಯಾಯಾಮ ಮಾತ್ರ ಸಾಕಾಗುವುದಿಲ್ಲ ಆಹಾರ ಸೇವನೆಯಲ್ಲಿನ ನಿಯಂತ್ರಣದ ಜತೆಗೆ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಸಮಸ್ಯೆಯ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್ ಡಯಾಬಿಟಿಸ್ ಆ್ಯಂಡ್ ಡೈಜೆಸ್ಟಿವ್ ಕ್ಲಿನಿಕಲ್ ಅಧ್ಯಯನವು ಮೂರು ವರ್ಷಗಳವರೆಗೆ ಮಧುಮೇಹ ಅಪಾಯದಲ್ಲಿರುವ ಜನರೊಂದಿಗೆ ಅಧ್ಯಯನ ನಡೆಸಿದೆ. ನಿಯಮಿತ ವ್ಯಾಯಾಮವು ಟೈಪ್ 2 ಡಯಾಬಿಟಿಸ್ ಸಮಸ್ಯೆಯ ಅಪಾಯವನ್ನು ಶೇ. 58ರಷ್ಟು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಿರುವಾಗ ವ್ಯಾಯಾಮದ ಮೂಲಕ ಎಷ್ಟೆಲ್ಲ ಆರೋಗ್ಯ ಪ್ರಯೋಜನಗಳು ಸಿಗುತ್ತವೆ ಎಂಬುದು ಈ ಕೆಳಗಿನಂತಿದೆ.

ಮಧುಮೇಹ ಸಮಸ್ಯೆ ಹೊಂದಿರುವವರಿಗೆ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುವುದು ಹೆಚ್ಚು. ಹಾಗಿರುವಾಗ ಹೃದಯವನ್ನು ಆರೋಗ್ಯವಾಗಿರಿಸಲು ಮತ್ತು ಸದೃಢವಾಗಿರಿಸಲು ವ್ಯಾಯಾಮ ಅತ್ಯವಶ್ಯಕ. ಜತೆಗೆ ವ್ಯಾಯಾಮ ಮಾಡುವ ಮೂಲಕ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು. ಹಾಗಾಗಿ, ಪ್ರತಿನಿತ್ಯ ವ್ಯಾಯಾಮ ಅಭ್ಯಾಸ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ.

ಟೈಪ್ 2 ಮಧುಮೇಹಕ್ಕೆ ಆಯುರ್ವೇದದಲ್ಲೂ ಚಿಕಿತ್ಸೆಯಿದೆ. ಕಹಿ ಬೇವಿನ ಎಲೆಯ ಜ್ಯೂಸ್, ನೆಲ್ಲಿಕಾಯಿಯನ್ನು ನೆನೆಸಿಟ್ಟ ನೀರು, ಹಾಗಲಕಾಯಿ ಜ್ಯೂಸ್, ಪಾನಾಕ್ಸ್ ಗಿನ್ಸೆಂಗ್, ಗುರ್ಮರ್ ಬಳ್ಳಿ ಮತ್ತು ಎಲೆಯ ಕಷಾಯವನ್ನು ಕುಡಿಯುವುದರಿಂದ ಡಯಾಬಿಟಿಸ್​ ನಿಯಂತ್ರಿಸಬಹುದು.

ಇದನ್ನೂ ಓದಿ: Health Tips: ಪಾರ್ಶ್ವವಾಯುವಿನ ಲಕ್ಷಣ, ಅಪಾಯ, ಮುನ್ನೆಚ್ಚರಿಕೆ ಕ್ರಮಗಳೇನು?

Health Tips: ಬೆಂಡೆಕಾಯಿ ನೋಡಿ ಮೂಗು ಮುರಿಯಬೇಡಿ; ಬಿಪಿ, ಡಯಾಬಿಟಿಸ್​ಗೆ ಇದೇ ರಾಮಬಾಣ

Published On - 1:26 pm, Wed, 10 November 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್