ನೀವು ಮಲಗುವ ಮೊದಲು ಈ ರೀತಿಯ ಅಭ್ಯಾಸಗಳು ಸರಿಯಲ್ಲ!

ನಿಮ್ಮ ಆಹಾರ ಪದ್ಧತಿ ಮತ್ತು ನಿಯಮಿತವಾದ ವ್ಯಾಯಾಮ ಮಾಡುವ ಅಭ್ಯಾಸದಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ನಿಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ಕಾಳಜಿ ಇರಲಿ.

ನೀವು ಮಲಗುವ ಮೊದಲು ಈ ರೀತಿಯ ಅಭ್ಯಾಸಗಳು ಸರಿಯಲ್ಲ!
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 11, 2021 | 7:43 AM

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಂಬಂಧಿತ ಸಮಸ್ಯೆಗಳು ಜನರನ್ನು ಹೆಚ್ಚು ಕಾಡುತ್ತಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಅದಕ್ಕೆ ಕಾರಣ ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು. ಪೌಷ್ಟಿಕ ಆಹಾರ ಸೇವನೆಯ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಸರಿಯಾದ ಸಮಯಕ್ಕೆ ಆಹಾರ ಸೇವನೆ ಜೊತೆಗೆ ನಿಯಮಿತವಾದ ವ್ಯಾಯಾಮ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಬೇಕು. ಸಾಕಷ್ಟು ನಿದ್ರೆ ಮಾಡಬೇಕು. ಇವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ. 

ಸಮಯಕ್ಕೆ ಸರಿಯಾದ ಆಹಾರ ನಾವು ಆಹಾರ ಸೇವಿಸುವಾಗ ನಿಯಮಿತವಾಗಿ ಸೇವಿಸಬೇಕು. ಜೊತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆಯನ್ನು ರೂಢಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕೆಲವು ಆರೋಗ್ಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿ ಊಟ ಮಾಡಿದ ಬಳಿಕವೇ ನಿದ್ರೆ ಮಾಡುವುದು ಆರೋಗ್ಯಕ್ಕೆ ಒಳಿತಲ್ಲ. ಕೆಲವರು ಕೊಬ್ಬಿನಾಂಶ ಹೆಚ್ಚಿರುವ ಆಹಾರ, ಮೆಣಸು ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸಿದ ತಕ್ಷಣ ನಿದ್ರೆ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದು ಗ್ಯಾಸ್, ಆಸಿಡಿಟಿ, ತಲೆತಿರುಗುವುದು, ತೂಕ ಹೆಚ್ಚಾಗುವುದು, ಹೃದಯಾಘಾತ ಮತ್ತು ಮಧುಮೇಹದ ತೊಂದರೆಗಳಿಗೆ ಕಾರಣವಾಗಬಹುದು. ಆದ್ದರಿಂದ ಮಲಗುವ ಮುನ್ನ ಜೀರ್ಣವಾಗುವ ಆಹಾರ ಸೇವಿಸುವುದು ಉತ್ತಮ. ಜೊತೆಗೆ ಊಟ ಮಾಡಿದ ತಕ್ಷಣವೇ ನಿದ್ರೆ ಮಾಡುವ ಅಭ್ಯಾಸವಿದ್ದರೆ ಆ ಅಭ್ಯಾಸದಿಂದ ದೂರವಿರಿ.

ಮದ್ಯಪಾನ ಸೇವನೆ ಮದ್ಯಪಾನ ಸೇವನೆಯ ಬಳಿಕವೇ ಮಲಗುವುದು ನಿದ್ರಾಹೀನತೆಗೆ ಕಾರಣವಾಗುತ್ತದೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕಾದರೆ ಮದ್ಯಪಾನದಿಂದ ದೂರವಿರಿ. ಕೆಮ್ಮು, ಶೀತ, ಜ್ವರ ಪದೇ ಪದೇ ಕಾಡುತ್ತಿದ್ದರೆ ನಿದ್ರಾ ಹೀನತೆಗೆ ಕಾರಣವಾಗುತ್ತದೆ. ಸಣ್ಣ ಪುಟ್ಟ ಸಮಸ್ಯೆಯೆಂದು ವೈದ್ಯರ ಸಲಹೆ ಇಲ್ಲದೇ ಯಾವುದೇ ಔಷಧಿಗಳನ್ನು ಸೇವಿಸಬೇಡಿ. ಇದು ನಿದ್ರಾಹೀನತೆಯ ಜೊತೆಗೆ ಇನ್ನಿತರ ಸಮಸ್ಯೆಗೆ ಕಾರಣವಾಗಬಹುದು.

ರಾತ್ರಿ ಹೊತ್ತು ಟಿವಿ, ಫೋನ್ ನೋಡುವುದು ರಾತ್ರಿಯಲ್ಲಿ ಟಿವಿ, ಫೋನ್, ಕಂಪ್ಯೂಟರ್ ನೋಡುತ್ತಾ ಮಲಗುವ ಅಭ್ಯಾಸವಿದ್ದರೆ ಅವುಗಳಿಂದ ದೂರವಿರಿ. ಇದು ನಿಮ್ಮ ನಿದ್ರಾಹೀನತೆಗೆ ಕಾರಣವಾಗುತ್ತದೆ. ಹಾಗಾಗಿ ಕಣ್ಣಿಗೆ ವಿಶ್ರಾಂತಿ ಮತ್ತು ಮನಸ್ಥಿತಿ ಸುಧಾರಣೆಗೆ ಒಳ್ಳೆಯ ನಿದ್ರೆ ಪಡೆಯಿರಿ.

ಇದನ್ನೂ ಓದಿ:

Health Tips: ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆಯೇ? ಆಹಾರ ಕ್ರಮದ ಬಗ್ಗೆ ಇರಲಿ ಎಚ್ಚರ

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ