Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ

ಸಾಮಾನ್ಯವಾಗಿ ಕಹಿ ರುಚಿಯ ಪದಾರ್ಥಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಉದಾಹರಣೆಗೆ ಹಾಗಲಕಾಯಿ. ಇವು ರುಚಿಯಲ್ಲಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಹಾಗಿದ್ದರೆ ಕಹಿಯಾದರೂ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥಗಳ ಬಗ್ಗೆ ತಿಳಿಯಿರಿ.

Health Tips: ಕಹಿಯಾಗಿದ್ದರೂ ಆರೋಗ್ಯಕರ ಗುಣಗಳನ್ನು ಹೊಂದಿರುವ ಈ 5 ಪದಾರ್ಥಗಳ ಬಗ್ಗೆ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Oct 28, 2021 | 9:16 AM

ಹೆಚ್ಚಿನವರು ಕಹಿ ಪದಾರ್ಥಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಕಹಿ ಆಹಾರವು ದೇಹಕ್ಕೆ ಒಳ್ಳೆಯದು ಮತ್ತು ನಮ್ಮನ್ನು ಸದಾ ಆರೋಗ್ಯವಾಗಿಡುತ್ತದೆ. ಕಹಿ ತಿನ್ನುವುದು ಕಷ್ಟವಾದರೂ, ಕಹಿ ರುಚಿಯ ಆಹಾರಗಳು ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಮಾನ್ಯವಾಗಿ ಕಹಿ ರುಚಿಯ ಪದಾರ್ಥಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಉದಾಹರಣೆಗೆ ಹಾಗಲಕಾಯಿ. ಇವು ರುಚಿಯಲ್ಲಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಒಳ್ಳೆಯದು. ಹಾಗಿದ್ದರೆ ಕಹಿಯಾದರೂ ಆರೋಗ್ಯಕ್ಕೆ ಉತ್ತಮವಾದ ಆಹಾರ ಪದಾರ್ಥಗಳ ಬಗ್ಗೆ ತಿಳಿಯಿರಿ.

ಸಬ್ಬಸಿಗೆ ಸೊಪ್ಪು ರುಚಿಯಲ್ಲಿ ಕಹಿಯಾಗಿದ್ದರೂ ಆರೋಗ್ಯಕ್ಕೆ ಇದು ಒಳ್ಳೆಯದು. ಸಬ್ಬಸಿಗೆ ಸೊಪ್ಪು ಖನಿಜಗಳು, ವಿಟಮಿನ್​ಗಳು ಮತ್ತು ಫೈಬರ್​ನಿಂದ ಸಮೃದ್ಧವಾಗಿದೆ. ಸಬ್ಬಸಿಗೆ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತವೆ. ಜೊತೆಗೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಯೂ ಕೆಲಸ ಮಾಡುತ್ತವೆ.

ಹಾಗಲಕಾಯಿ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಗಲಕಯಿ ರಸವು ದೇಹಕ್ಕೂ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಸಿ, ಪೊಟ್ಯಾಶಿಯಂ, ಆ್ಯಂಟಿಆಕ್ಸಿಡೆಂಟ್​ಗಳಂತಹ ಪೋಷಕಾಂಶಗಳು ಹೇರಳವಾಗಿವೆ. ಮಧುಮೇಹ ನಿಯಂತ್ರಣದಲ್ಲಿ ಹಾಗಲಕಾಯಿ ತುಂಬಾ ಸಹಕಾರಿ.

ಗ್ರೀನ್ ಟೀ ಕಹಿ ರುಚಿಯ ಹೊರತಾಗಿಯೂ ಆರೋಗ್ಯಕ್ಕೆ ಒಳ್ಳೆಯದು. ಸಿಹಿ ಚಹಾದ ಬದಲಿಗೆ ಗ್ರೀನ್ ಟೀ ಸೇವಿಸುವುದರಿಂದ ನಿಮ್ಮ ತೂಕವನ್ನು ಕಳೆದುಕೊಳ್ಳಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಗ್ರೀನ್ ಟೀ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ಕ್ಯಾನ್ಸರ್ ವಿರೋಧಿ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಪಾಲಿಫಿನಾಲ್​ಗಳನ್ನು ಹೊಂದಿರುತ್ತದೆ.

 ಪಾಲಕ್ ಸೊಪ್ಪು ಪಾಲಕ್ ಮತ್ತು ಇನ್ನಿತರ ಸೊಪ್ಪು ತರಕಾರಿಗಳು ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತವೆ. ಇವು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿನ ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಮತ್ತು ಇತರ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ನೀವು ಫಿಟ್ ಆಗಿರಿಸಲು ಸಹಾಯ ಮಾಡುತ್ತದೆ.

ಡಾರ್ಕ್ ಚಾಕೊಲೇಟ್ ಡಾರ್ಕ್ ಚಾಕೊಲೇಟ್ ಕಹಿಯಾಗಿದೆ. ಹೀಗಾಗಿ ಹಲವರು ಇದನ್ನು ಸೇವಿಸಲು ಇಷ್ಟ ಪಡುವುದಿಲ್ಲ. ಕೋಕೋ ಪೌಡರ್ ಸೇರಿಸುವುದರಿಂದ ಇದು ಕಹಿಯಾಗಿರುತ್ತದೆ. ಇದರಲ್ಲಿ ಸತು, ತಾಮ್ರ, ಮೆಗ್ನೀಸಿಯಮ್, ಕಬ್ಬಿಣ, ಪಾಲಿಫಿನಾಕ್​ಗಳು, ಆಂಟಿಆಕ್ಸಿಡೆಂಟ್ ಅಂಶಗಳನ್ನು ಒಳಗೊಂಡಿದೆ. ಇವು ರಕ್ತನಾಳಗಳನ್ನು ಹಿಗ್ಗಿಸಿ ಉರಿಯೂತದ ಸಮಸ್ಯೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ:

ಕೊವಿಡ್ ಸಮಯದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ದೀಪಾವಳಿ ಆಚರಣೆಗೆ ಸರಳ ಸಲಹೆಗಳು

Turmeric Water: ಬಿಸಿ ನೀರಿಗೆ ಚಿಟಿಕೆ ಅರಿಶಿಣ ಪುಡಿ ಮಿಶ್ರಣ ಮಾಡಿ ಸೇವಿಸಿ; ಆರೋಗ್ಯ ಪ್ರಯೋಜನಗಳೆಷ್ಟಿವೆ? ಮಾಹಿತಿ ಇಲ್ಲಿದೆ

ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ವಜೀರಾಬಾದ್ ಬ್ಯಾರೇಜ್‌ನಲ್ಲಿ ಯಮುನಾ ದಂಡೆ ಪರಿಶೀಲಿಸಿದ ಸಿಎಂ ರೇಖಾ ಗುಪ್ತಾ
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್
ರಂಗಾಯಣ ರಘು ಮಾತು ಕೇಳಿ ತಬ್ಬಿಕೊಂಡ ಡಾಲಿ ಧನಂಜಯ್