ಕೊವಿಡ್ ಸಮಯದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ದೀಪಾವಳಿ ಆಚರಣೆಗೆ ಸರಳ ಸಲಹೆಗಳು

ದೀಪಾಳಿ ಅಂದರೆ ಎಲ್ಲರೂ ಕೂಡಿ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬ. ಆದರೆ ಕೊವಿಡ್​ನಿಂದ ಈ ಬಾರಿ ಹೆಚ್ಚು ಎಚ್ಚರಿಕೆಯಿಂದ ನಮ್ಮ ಆರೋಗ್ಯದ ಕುರಿತಾಗಿ ಕಾಳಜಿವಹಿಸಿ ಆಚರಿಸುವ ಅಗತ್ಯವಿದೆ. ಈ ಸಮಯದಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಕೊವಿಡ್ ಸಮಯದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ದೀಪಾವಳಿ ಆಚರಣೆಗೆ ಸರಳ ಸಲಹೆಗಳು
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on:Oct 26, 2021 | 9:55 AM

ದೀಪಾವಳಿ ಹಬ್ಬ ಅಂದಾಕ್ಷಣ ಖುಷಿ, ಸಂಭ್ರಮ. ಆದರೆ ಈ ಬಾರಿಯ ದೀಪಾಳಿ ಸಮಯದಲ್ಲಿ ಕೊವಿಡ್ ಸಾಂಕ್ರಾಮಿಕದ ಕುರಿತಾಗಿ ಹೆಚ್ಚು ಗಮನವಿರಲೇಬೇಕಾದ ಅಗತ್ಯತೆ ಇದೆ. ಆರೋಗ್ಯಕರವಾಗಿ ಮತ್ತು ಜವಾಬ್ದಾರಿಯುತವಾಗಿ ಹಬ್ಬದ ಆಚರಣೆ ಮಾಡುವುದು ಹೇಗೆ ಎಂಬ ಅರಿವು ಅಗತ್ಯವಾಗಿದೆ. ದೀಪಾಳಿ ಅಂದರೆ ಎಲ್ಲರೂ ಕೂಡಿ ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬ. ಆದರೆ ಕೊವಿಡ್​ನಿಂದ ಈ ಬಾರಿ ಹೆಚ್ಚು ಎಚ್ಚರಿಕೆಯಿಂದ ನಮ್ಮ ಆರೋಗ್ಯದ ಕುರಿತಾಗಿ ಕಾಳಜಿವಹಿಸಿ ಹಬ್ಬವನ್ನು ಆಚರಿಸುವ ಅಗತ್ಯವಿದೆ. ಈ ಸಮಯದಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.

ಯಾವುದೇ ಕಾರಣಕ್ಕೂ ಆರೋಗ್ಯ ಮತ್ತು ಸುರಕ್ಷತೆಗೆ ಧಕ್ಕೆಯಾಗದಂತೆ ಬೆಳಕಿನ ಹಬ್ಬವನ್ನು ಆಚರಿಸುವ ಬಗ್ಗೆ ಎಚ್ಚರವಿರಬೇಕು. ದೀಪಾವಳಿ ಸಂದರ್ಭದಲ್ಲಿ ಆರೋಗ್ಯದ ಮೇಲೆ ಯಾವುದೇ ರೀತಿಯ ಅನಾಹುತ ಮತ್ತು ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುವ ಅಗತ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಗುರುಗ್ರಾಮ್ ಪ್ಯಾರಾಸ್ ಆಸ್ಪತ್ರೆಯ ಮುಖ್ಯಸ್ಥ ಡಾ.ಅರುಣೇಶ್ ಕುಮಾರ್ ಹಂಚಿಕೊಂಡಿರುವ ಮಾಹಿತಿಯನ್ನು ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ ಆದರೆ ಈ ಕೆಲವು ಸಲಹೆಗಳು ನೆನಪಿನಲ್ಲಿರಲಿ ದೈಹಿಕ ಅಂತರ ಕಾಯ್ದುಕೊಳ್ಳಿ ಕತ್ತಲೆಯನ್ನು ಹೊಡೆದೋಡಿಸಿ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯುವ ಹಬ್ಬ ದೀಪಾವಳಿ. ದೀಪ ಬೆಳೆಗುವ ಮೂಲಕ ನಮ್ಮ ಜೀವನ ಯಾವಾಗಲು ಸಂತೋಷದಿಂದಿರಲಿ ಎಂಬ ಆಶಯದೊಂದಿಗೆ ದೀಪ ಹಚ್ಚಿ ಹಬ್ಬವನ್ನು ಸಂಭ್ರಮಿಸಲಾಗುತ್ತದೆ. ಭಾಂದ್ಯವವನ್ನು ಬಲಪಡಿಸುವ ಹಬ್ಬವೂ ಇದಾಗಿದೆ. ಇದರ ನಡುವೆ ಕೊವಿಡ್ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ಹೊಡೆದೋಡಿಸಲು ನಾವು ಸಿದ್ಧರಾಗಬೇಕಿದೆ. ಹಬ್ಬದ ದಿನ ನಾವು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಮುಖಗವಸನ್ನು ಧರಿಸಿ ಕೊವಿಡ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆಯ ಕ್ರಮವಾಗಿ ಮಾಸ್ಕ್ ಬಳಕೆ ಅಗತ್ಯವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳಿಂದ ಹೊರಬರುವ ಹೊಗೆಯು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ತೀವ್ರ ಸಮಸ್ಯೆಯನ್ನುಂಟು ಮಾಡಬಹುದು. ಇದರ ಜೊತೆಗೆ ಕೊವಿಡ್ ಸಾಂಕ್ರಾಮಿಕ ತಡೆಗಟ್ಟಲು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.

ಸುರಕ್ಷಿತ ಬಟ್ಟೆಯನ್ನು ಧರಿಸಿ ದೀಪಾವಳಿಯ ಸಮಯದಲ್ಲಿ ಆಕರ್ಷಕವಾಗಿ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಅದರಲ್ಲಿಯೂ ಹೆಚ್ಚಿನವರು ರೇಷ್ಮೆ ಬಟ್ಟೆಗಳನ್ನು ಧರಿಸುತ್ತಾರೆ. ಇವು ಹಬ್ಬದ ಸಮಯದಲ್ಲಿ ಧರಿಸಲು ಇಷ್ಟಪಡುವ ಟ್ರೆಂಡಿಂಗ್ ಬಟ್ಟೆಗಳೂ ಹೌದು. ಆದರೆ ದೀಪ ಬೆಳಗುವ ಸಂದರ್ಭದಲ್ಲಿ ಮತ್ತು ಪಟಾಕಿ ಸಿಡಿಸುವ ಸಂದರ್ಭದಲ್ಲಿ ಹೆಚ್ಚು ಎಚ್ಚರವಿರಲಿ. ಇಲ್ಲವೇ ಹತ್ತಿ ರೇಷ್ಮೆ, ಹತ್ತಿ ಬಟ್ಟೆಗಳನ್ನು ಹೆಚ್ಚಾಗಿ ಆಯ್ದುಕೊಳ್ಳಿ. ಪೌಷ್ಟಿಕ ಆಹಾರ ದೀಪಾವಳಿಯಲ್ಲಿ ವಿವಿಧ ಖಾದ್ಯಗಳನ್ನು ಮಾಡಿ ಸಿಹಿ ತಿಂದು ಸಂಭ್ರಮಿಸುವ ದಿನವಾಗಿದೆ. ಆದರೆ ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚು ಗಮನವಿರಲಿ. ಅತಿಯಾದ ಆಹಾರ ಸೇವನೆ ಅಸ್ವಸ್ಥತೆ, ಗ್ಯಾಸ್ ಮತ್ತು ಎದೆಯುರಿಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಯಮಿತವಾಗಿ ಆಹಾರ ಸೇವಿಸಿ ಮನೆಯವರೊಂದಿಗೆ ಉತ್ತಮ ಆರೋಗ್ಯದ ಜತೆ ಖುಷಿಯಿಂದ ಹಬ್ಬ ಆಚರಿಸಿ. ಇದರ ಜೊತೆಗೆ ಪೌಷ್ಟಿಕಾಂಶಯುಕ್ತ ಆಹಾರ, ಹಣ್ಣು, ತರಕಾರಿಗಳನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಇದನ್ನೂ ಓದಿ:

Diwali 2021: ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?

Color Rice Benefits: ನಾವು ಸೇವಿಸುವ ಅಕ್ಕಿಯಲ್ಲೂ ಬಣ್ಣಗಳಿವೇ? ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?

Published On - 9:48 am, Tue, 26 October 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್