AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Diwali 2021: ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?

ಸುಖ ಸೌಭಾಗ್ಯವ ಬೇಡುತ್ತಾ ಎಲ್ಲರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾಯಿ ಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ದೀಪಾವಳಿ ಹಬ್ಬದಲ್ಲಿ ಗಣೇಶ ಮತ್ತು ಕುಬೇರನನ್ನೂ ಆರಾಧಿಸುತ್ತಾರೆ. ಆದರೆ ವಿಷ್ಣು ಪರಮಾತ್ಮನಿಗೆ ಮಾತ್ರ ಪೂಜೆ ಸಲ್ಲಿಸುವುದಿಲ್ಲ, ಏಕೆ? ಈ ಕುತೂಹಲ ಕಥನ ಕೇಳಲು ಈ ಲೇಖನ ಓದಿ. ಜೀವನದಲ್ಲಿ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಧನರಾಶಿ ಬೇಕಾಗುತ್ತದೆ. ದವಸ, ಧನ, ಧಾನ್ಯ ಸಮೃದ್ಧಿಯಾಗಿ ದೊರಕುವಂತಾಗಲು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ಮಾತೆಯನ್ನು ಆರಾಧಿಸುವ ದಿನವೇ ದೀಪಾವಳಿ. ಅಂಧಕಾರವನ್ನು ಹೋಗಲಾಡಿಸಿ, ವಿಜಯ ಪರ್ವ ಆಚರಿಸುವ […]

Diwali 2021: ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?
ದೇವ ದೀಪಾವಳಿ ಯಾವಾಗ? ದೀಪಾವಳಿ ವೇಳೆ ಲಕ್ಷ್ಮಿಗೆ ಮಾತ್ರ ಪೂಜೆ ಮಾಡುತ್ತಾರೆ! ವಿಷ್ಣುವಿಗೆ ಪೂಜೆ ಏಕಿಲ್ಲ?
TV9 Web
| Updated By: ಸಾಧು ಶ್ರೀನಾಥ್​|

Updated on: Oct 26, 2021 | 8:40 AM

Share

ಸುಖ ಸೌಭಾಗ್ಯವ ಬೇಡುತ್ತಾ ಎಲ್ಲರೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಾಯಿ ಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ದೀಪಾವಳಿ ಹಬ್ಬದಲ್ಲಿ ಗಣೇಶ ಮತ್ತು ಕುಬೇರನನ್ನೂ ಆರಾಧಿಸುತ್ತಾರೆ. ಆದರೆ ವಿಷ್ಣು ಪರಮಾತ್ಮನಿಗೆ ಮಾತ್ರ ಪೂಜೆ ಸಲ್ಲಿಸುವುದಿಲ್ಲ, ಏಕೆ? ಈ ಕುತೂಹಲ ಕಥನ ಕೇಳಲು ಈ ಲೇಖನ ಓದಿ. ಜೀವನದಲ್ಲಿ ಎಲ್ಲ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಧನರಾಶಿ ಬೇಕಾಗುತ್ತದೆ. ದವಸ, ಧನ, ಧಾನ್ಯ ಸಮೃದ್ಧಿಯಾಗಿ ದೊರಕುವಂತಾಗಲು ತಾಯಿ ಲಕ್ಷ್ಮಿಯನ್ನು ಪೂಜಿಸುತ್ತಾರೆ. ಲಕ್ಷ್ಮಿ ಮಾತೆಯನ್ನು ಆರಾಧಿಸುವ ದಿನವೇ ದೀಪಾವಳಿ. ಅಂಧಕಾರವನ್ನು ಹೋಗಲಾಡಿಸಿ, ವಿಜಯ ಪರ್ವ ಆಚರಿಸುವ ದಿನ ಇದಾಗಿದೆ. ದೀಪಾವಳಿಯ ದಿನ ಲಕ್ಷ್ಮಿ ಮಾತೆಯನ್ನು ಆರಾಧಿಸುವುದರಿಂದ ಮುಂದೆ ವರ್ಷದುದ್ದಕ್ಕೂ ಆರ್ಥಿಕವಾಗಿ ಬಲಾಢ್ಯರಾಗಬಹುದು ಎಂಬ ಮಾತಿದೆ.

ಕಾರ್ತಿಕ ಮಾಸ ಎಂಬುದು ಅತ್ಯಂತ ಮಹತ್ವದ ತಿಂಗಳು. ಪೂಜೆ ಪುನಸ್ಕಾರಗಳಿಗೆ ಈ ತಿಂಗಳಲ್ಲಿ ಜಾಸ್ತಿಯಾಗಿರುತ್ತದೆ. ಹಿಂದೂ ಪಂಚಾಂಗದಲ್ಲಿ 8ನೆಯ ತಿಂಗಳು ಕಾರ್ತಿಕ ಮಾಸವಾಗಿದೆ. ಈ ಮಾಸದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ವಿಷ್ಣು ಭಗವಾನ್ ತನ್ನ ನಾಲ್ಕು ತಿಂಗಳ ನಿದ್ರಾವಸ್ಥೆಯನ್ನು ಪೂರೈಸಿ, ಭೂಮಂಡಲದಲ್ಲಿ ಸಂಚಾರಕ್ಕೆ ಬರುತ್ತಾರೆ ಎಂಬ ಪ್ರತೀತಿ ಇದೆ. ಜೊತೆಗೆ ಲಕ್ಷ್ಮಿ ದೇವಿ ಸಹ ಶ್ರೀಮನ್ನಾರಾಯಣನ ಜೊತೆ ಭೂಲೋಕ ಸಂಚಾರವಾಸಿಗಳಾಗುತ್ತಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ದೇವ-ದೇವತೆಗಳ ವಿಶೇಷ ಪೂಜೆ ನಡೆಯುತ್ತದೆ: ದೀಪಾವಳಿಯ ಪವಿತ್ರ ದಿನಗಳಲ್ಲಿ ಲಕ್ಷ್ಮಿ ದೇವಿಯ ಮತ್ತು ಗಣೇಶನ ಪೂಜೆಯ ಜೊತೆಗೆ ಧನ ದೇವ ಅಂದರೆ ಸಂಪತ್ತಿನ ಅಧಿದೇವ ಕುಬೇರನಿಗೆ ವಿಶೇಷ ಪೂಜೆ ನಡೆಯುತ್ತದೆ. ಜೊತೆಗೆ ಕಾಳಿ ಮಾತೆ ಮತ್ತು ಸರಸ್ವತಿಯ ಪೂಜೆಯೂ ನೆರವೇರುತ್ತದೆ. ಆದರೆ ಇಲ್ಲಿ ಒಂದು ಕುತೂಹಲಕಾರಿ ಪ್ರಶ್ನೆ ಉದ್ಭವವಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ವಿಷ್ಣು ಆರಾಧನೆ ನಡೆಯುವುದಿಲ್ಲ, ಏಕೆ ಎಂಬುದೇ ಸರಳ ಆದರೆ ಅರ್ಥಗರ್ಭಿತ ಪ್ರಶ್ನೆಯಾಗಿದೆ.

ದೀಪಾವಳಿಯ ಕೊನೆಯ ರಾತ್ರಿ ಲಕ್ಷ್ಮಿ ದೇವಿಯ ಪೂಜೆ ಮಾತ್ರವೇ ನಡೆಯುತ್ತದೆ; ವಿಷ್ಣುವಿಗೆ ಪೂಜೆ ಸಲ್ಲುವುದಿಲ್ಲ ಏಕೆಂದರೆ ಈ ಪವಿತ್ರ ಹಬ್ಬವು ಚಾತುರ್ಮಾಸದ ಮಧ್ಯೆ ಬರುತ್ತದೆ. ಈ ಚಾತುರ್ಮಾಸದಲ್ಲಿ ಭಗವಂತ ವಿಷ್ಣು ನಾಲ್ಕೂ ತಿಂಗಳೂ ಯೋಗ ನಿದ್ರೆಯಲ್ಲಿ ತಲ್ಲೀನವಾಗಿರುತ್ತಾನೆ. ಹಾಗಾಗಿ ಈ ನಾಲ್ಕು ತಿಂಗಳ ಚಾತುರ್ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯ ಬಂದರೂ ಸ್ವಾಭಾವಿಕವಾಗಿ ಅಲ್ಲಿ ಭಗವಂತ ವಿಷ್ಣುವಿನ ಅನುಪಸ್ಥಿತಿಯಲ್ಲಿ ಪೂಜೆ ಪುನಸ್ಕಾರಗಳು ನೆರವೇರುತ್ತವೆ.

ಕಾರ್ತಿಕ ಮಾಸದ ಹುಣ್ಣಿಮೆಯ ದಿನ ದೇವ ದೀಪಾವಳಿ: ಇದೇ ಕಾರಣವಾಗಿ ದೀಪಾವಳಿಯ ಸಂದರ್ಭವೂ ಚಾತುರ್ಮಾಸದಲ್ಲಿ ಬರುವುದರಿಂದ ವಿಷ್ಣುವಿನ ಯೋಗ ನಿದ್ರೆಗೆ ಭಂಗ ಬಾರದಿರಲಿ ಎಂದು ಭಕ್ತರು ವಿಷ್ಣುವಿನ ಪೂಜೆ, ಆರಾಧನೆ ಮಾಡುವುದಿಲ್ಲ. ಹಾಗಾಗಿಯೇ ದೀಪಾವಳಿಯ ಸಂದರ್ಭದಲ್ಲಿ ತಾಯಿ ಲಕ್ಷ್ಮಿ ತನ್ನ ಪತಿ ವಿಷ್ಣುವಿನ ಜೊತೆಗೆ ಬಾರದೆ, ತನ್ನ ಭಕ್ತರ ಮನೆಗೆ ಬರುತ್ತಾಳೆ. ಆದರೆ ಪ್ರಥಮ ಪೂಜಕ ಗಣೇಶ ಇತರೆ ದೇವಾನುದೇವತೆಗಳ ಪ್ರತಿನಿಧಿಯಾಗಿ ಲಕ್ಷ್ಮಿಯ ಜೊತೆಜೊತೆಗೆ ಪೂಜಿಸಲ್ಪಡುತ್ತಾನೆ. ದೀಪಾವಳಿಯ ಬಳಿಕ ಕಾರ್ತಿಕ ಹುಣ್ಣಿಮೆಯ ದಿನ ಭಗವಂತ ವಿಷ್ಣು ತನ್ನ ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಅಂದು ವಿಶೇಷವಾಗಿ ಮತ್ತೊಮ್ಮೆ ಭಗವಂತ ವಿಷ್ಣು ಜೊತೆಗೂಡಿ ಲಕ್ಷ್ಮಿ ಮತ್ತು ಇತರೆ ದೇವ-ದೇವತೆಗಳಿಗೆ ಒಟ್ಟಿಗೆ ಪೂಜಿಸುತ್ತಾರೆ. ಕಾರ್ತಿಕ ಮಾಸದ ಹುಣ್ಣಿಮೆಯ ದಿನವನ್ನು ದೇವ ದೀಪಾವಳಿ (Deva Deepawali) ಎಂದೂ ಕರೆಯುತ್ತಾರೆ.

(Diwali 2021 Why Vishnu Is Not Worshiped On Deepawali what is deva Deepawali)

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ