Color Rice Benefits: ನಾವು ಸೇವಿಸುವ ಅಕ್ಕಿಯಲ್ಲೂ ಬಣ್ಣಗಳಿವೇ? ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?

ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಕಪ್ಪು ಅಕ್ಕಿಯು ಕೆಂಪು ಅಕ್ಕಿಯಂತೆಯೇ ವರ್ಣರಂಜಿತವಾಗಿದೆ. ಈ ಬಣ್ಣ ಬಣ್ಣದ ಅಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿದ್ದರೆ ಯಾವ ಅಕ್ಕಿ ಹೆಚ್ಚು ಆರೋಗ್ಯಯುತ ಪರಿಣಾಮಮ ಬೀರುತ್ತದೆ ಎಂದು ತಿಳಿಯೋಣ.

Color Rice Benefits: ನಾವು ಸೇವಿಸುವ ಅಕ್ಕಿಯಲ್ಲೂ ಬಣ್ಣಗಳಿವೇ? ಯಾವ ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Oct 25, 2021 | 11:10 AM

ಸಾಮಾನ್ಯವಾಗಿ ಹೆಚ್ಚಿನ ಜನರು ಬಿಳಿ ಅಕ್ಕಿಯನ್ನು ಮಾತ್ರ ಸೇವಿಸುತ್ತಾರೆ. ಅಕ್ಕಿಯು ಅನೇಕ ಪೌಷ್ಠಿಕಾಂಶದ ಮೌಲ್ಯಗಳನ್ನು ಹೊಂದಿದೆ. ಅದರಲ್ಲೂ ಕಡಿಮೆ ಪಾಲಿಶ್ ಮಾಡಿದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು. ಆದರೆ ಅಕ್ಕಿಯಲ್ಲೂ ಅನೇಕ ಬಣ್ಣಗಳಿವೆ. ಇತ್ತೀಚಿನ ದಿನಗಳಲ್ಲಿ ಕಂದು ಬಣ್ಣದ ಅಕ್ಕಿ ಎಂಬ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಕಂದು ಬಣ್ಣದ ಅಕ್ಕಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಕಪ್ಪು ಅಕ್ಕಿಯು ಕೆಂಪು ಅಕ್ಕಿಯಂತೆಯೇ ವರ್ಣರಂಜಿತವಾಗಿದೆ. ಈ ಬಣ್ಣ ಬಣ್ಣದ ಅಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿದ್ದರೆ ಯಾವ ಅಕ್ಕಿ ಹೆಚ್ಚು ಆರೋಗ್ಯಯುತ ಪರಿಣಾಮಮ ಬೀರುತ್ತದೆ ಎಂದು ತಿಳಿಯೋಣ.

ಕಪ್ಪು ಅಕ್ಕಿ ಕಪ್ಪು ಅಕ್ಕಿಯಲ್ಲಿ ಆ್ಯಂಟಿಆಕ್ಸಿಡೆಂಟ್ ಹೇರಳವಾಗಿದೆ. ಅಲ್ಲದೆ, ಇದರಲ್ಲಿ ಪ್ರೋಟೀನ್, ಫೈಬರ್ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಬಿಳಿ ಅಕ್ಕಿಯಂತೆಯೇ ಕಪ್ಪು ಅಕ್ಕಿಯೂ ಹೆಚ್ಚು ಲಭ್ಯವಿದೆ. ಕಪ್ಪು ಅಕ್ಕಿಯು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೆಂಪಕ್ಕಿ ಕೆಂಪು ಅಕ್ಕಿ ಕಂದು ಅಕ್ಕಿಗಿಂತ ಸ್ವಲ್ಪ ಭಿನ್ನ. ಇದು ಫೈಬರ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿದೆ. ಇದು ತಿಂದ ನಂತರ ನಿಮಗೆ ಹಸಿವನ್ನು ಉಂಟುಮಾಡುವುದಿಲ್ಲ. ಅಲ್ಲದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕೆಂಪು ಅಕ್ಕಿ ಕೂಡ ತೂಕ ಇಳಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತದೆ.

ಕಂದು ಅಕ್ಕಿ (ಬ್ರೌನ್ ರೈಸ್) ಕಂದು ಅಕ್ಕಿ ಇತ್ತೀಚೆಗೆ ಕೇಳಿಬರುತ್ತಿರುವ ಹೆಸರು. ಸಕ್ಕರೆ ಕಾಯಿಲೆ ಇರುವವರು ಕಂದು ಅಕ್ಕಿಯನ್ನು ತೆಗೆದುಕೊಳ್ಳಲು ಆಸಕ್ತಿ ಹೊಂದಿರುತ್ತಾರೆ. ಇದು ಬಿಳಿ ಅಕ್ಕಿಗಿಂತ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುತ್ತದೆ. ಫೈಬರ್ ಮತ್ತು ಪ್ರೊಟೀನ್‌ ಇದರಲ್ಲಿ ಸಮೃದ್ಧವಾಗಿದೆ. ಆದರೆ ಕ್ಯಾಲೊರಿಗಳು ಬಿಳಿ ಅಕ್ಕಿಯಲ್ಲಿರುವಂತೆಯೇ ಇರುತ್ತವೆ. ಕಂದು ಅಕ್ಕಿ ಹಸಿವನ್ನು ಕಡಿಮೆ ಮಾಡುವುದಲ್ಲದೆ ತೂಕವನ್ನು ಕೂಡ ಕಡಿಮೆ ಮಾಡುತ್ತದೆ.

ಬಿಳಿ ಅಕ್ಕಿ ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಬಿಳಿ ಅಕ್ಕಿಯನ್ನು ಮಾತ್ರ ಬಳಸಲಾಗುತ್ತದೆ. ಇದರಲ್ಲಿ ಪ್ರೋಟೀನ್, ಆ್ಯಂಟಿಆಕ್ಸಿಡೆಂಟ್ ಮತ್ತು ಇತರ ಪೋಷಕಾಂಶಗಳು ಅಧಿಕವಾಗಿದೆ. ಬಿಳಿ ಅಕ್ಕಿಯಲ್ಲಿ ಕ್ಯಾಲ್ಸಿಯಂ ಅಧಿಕವಾಗಿದೆ.

ಇದನ್ನೂ ಓದಿ: Children Eye Health: ಮಕ್ಕಳ ಕಣ್ಣಿಗೆ ಕಪ್ಪು ಕಾಡಿಗೆ ಹಚ್ಚುವುದು ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ?

ಇಂಗು ನೀರು ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಆಶ್ಚರ್ಯವಾಗುತ್ತೆ