AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಟ್ಟಾದಾಗ ಶುಚಿತ್ವ ಕಾಪಾಡಿಕೊಳ್ಳಿ; ಕೆಲ ಸಲಹೆಗಳು ಇಲ್ಲಿವೆ ಗಮನಿಸಿ

ಮುಟ್ಟದಾಗ ಮಾತ್ರವಲ್ಲ, ಯಾವಾಗಲು ಗುಪ್ತಾಂಗ ಶುಚಿಯಾಗಿರಬೇಕು. ಆದರೆ ಪೀರಿಯಡ್ಸ್ ಆದಾಗ ಹೆಚ್ಚು ಗಮನ ಕೊಡಬೇಕು.

ಮುಟ್ಟಾದಾಗ ಶುಚಿತ್ವ ಕಾಪಾಡಿಕೊಳ್ಳಿ; ಕೆಲ ಸಲಹೆಗಳು ಇಲ್ಲಿವೆ ಗಮನಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Oct 25, 2021 | 9:41 AM

Share

ಪ್ರತಿ ತಿಂಗಳಿಗೊಮ್ಮೆ ಮುಟ್ಟಾಗುವುದು ಪ್ರಕೃತಿ ನಿಯಮ. ಆದರೆ ಹಲವು ಮಹಿಳೆಯರು ಕೆಲ ಕಾರಣಗಳಿಂದ ಅನಿಯಮಿತ ಮುಟ್ಟಾಗುತ್ತಾರೆ. ಅಂಥವರು ವೈದ್ಯರ ಮೊರೆ ಹೋಗಿ ಸೂಕ್ತ ಪರಿಹಾರ ಪಡೆಯುತ್ತಾರೆ. ಇದೇನೆ ಇರಲಿ. ಮುಟ್ಟಾದಾಗ ಹೆಚ್ಚು ಸೂಕ್ಷ್ಮವಾಗಿರಬೇಕು. ಶುಚಿತ್ವದ ಕಡೆ ಗಮನ ಕೊಡಬೇಕು. ಇಲ್ಲದಿದ್ದರೆ ಕೆಲ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮುಟ್ಟಾದಾಗ ಸಾಮಾನ್ಯವಾಗಿ 5ರಿಂದ 6 ದಿನ ರಕ್ತಸ್ರಾವವಾಗುತ್ತದೆ. ಹೀಗಾಗಿ ರಕ್ತಸ್ರಾವವಾಗುವವರೆಗೂ ಶುಚಿತ್ವದ ಬಗ್ಗೆ ಹೆಚ್ಚು ಗಮನವಿರಬೇಕು.

ಮುಟ್ಟದಾಗ ಮಾತ್ರವಲ್ಲ, ಯಾವಾಗಲು ಗುಪ್ತಾಂಗ ಶುಚಿಯಾಗಿರಬೇಕು. ಆದರೆ ಪಿರಿಯಡ್ಸ್ ಆದಾಗ ಹೆಚ್ಚು ಗಮನ ಕೊಡಬೇಕು. ಹಾಗಾದರೆ ಮುಟ್ಟಾದ ದಿನಗಳಲ್ಲಿ ಹೇಗೆ ಶುಚಿಯಾಗಿರಬೇಕು? ಎಂಬುವುದನ್ನು ಇಲ್ಲಿ ತಿಳಿಸಲಾಗಿದೆ.

* ಪ್ರತಿದಿನ ಸ್ನಾನ ಮಾಡಬೇಕು ಮುಟ್ಟಾದಾಗ ಪ್ರತಿದಿನ ಸ್ನಾನ ಮಾಡಬೇಕು. ಆದರೆ ಮುಟ್ಟಾದಾಗ ಸ್ನಾನ ಮಾಡಲು ಹಿಂಜರಿಯುತ್ತಾರೆ. ಹಿರಿಯರು ಮುಟ್ಟಾಗುತ್ತಿದ್ದಂತೆ ಸ್ನಾನ ಗೃಹಕ್ಕೆ ಹೋಗುತ್ತಿದ್ದರು. ಆದರೆ ಇತ್ತೀಚೆಗೆ ಹೆಣ್ಣು ಮಕ್ಕಳು ಮುಟ್ಟಾದಾಗ ಸ್ನಾನ ಮಾಡಲು ಹಿಂಜರಿಯುತ್ತಾರೆ. ಮುಟ್ಟಾದಾಗ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಸ್ನಾನ ಮಾಡಬೇಕು. ಜೊತೆಗೆ ಪ್ಯಾಡ್​ಗಳನ್ನು ಬದಲಿಸಿದ ಬಳಿಕ ಮತ್ತು ಗುಪ್ತಾಂಗವನ್ನು ತೊಳೆದುಕೊಂಡ ನಂತರ ಹ್ಯಾಂಡ್ ವಾಶ್​ನಿಂದ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.

* ಒಳ ಉಡುಪು ಶುಚಿಯಾಗಿರಲಿ ತುಂಬಾ ಶುಚಿಯಾಗಿರುವ ಒಳ ಉಡುಪನ್ನು ಬಳಸಬೇಕು. ಒಳ ಉಡುಪು ಬಳಸಿದಾಗ ಕಿರಿ ಕಿರಿ ಅನಿಸಬಾರದು. ತುಂಬಾ ಆರಾಮಾಗಿದೆ ಅಂತ ಅನಿಸಬೇಕು. ಒಳ ಉಡುಪನ್ನು ಬಳಸಿದ ನಂತರ ಬಿಸಿ ನೀರಿನಿಂದ ತೊಳೆದು ಒಣಗಿಸಿ. ಇನ್ನೊಮ್ಮೆ ಬಳಸುವಾಗ ಚೆನ್ನಾಗಿ ಒಣಗಿರಬೇಕು. ಹಸಿ ಒಳ ಉಡುಪು ಬಳಸಿದರೆ ಕಾಲಿನ ಸಂದಿಗಳಲ್ಲಿ ಗಾಯವಾಗುವ ಸಾಧ್ಯತೆಯಿದೆ. ಕಾಟನ್ ಒಳ ಉಡುಪುಗಳನ್ನು ಬಳಸಿದರೆ ಮುಟ್ಟಾದಾಗ ತುಂಬಾ ಆರಾಮೆನಿಸುವುದು.

* ಪ್ಯಾಡ್ ಬದಲಾಯಿಸಬೇಕು ಕಾಲೇಜು ಅಥವಾ ಆಫೀಸ್ ಕೆಲಸದಲ್ಲಿದ್ದಾಗ ಪ್ಯಾಡ್ ಬದಲಾಯಿಸುವ ಗೋಜಿಗೆ ಹೋಗಲ್ಲ. ಹೀಗೆ ಮಾಡುವುದು ತಪ್ಪು. ಪ್ರತಿ ನಾಲ್ಕು ಗಂಟೆಗೆ ಪ್ಯಾಡ್​ನ ಬದಲಾಯಿಸಬೇಕು. ಕೇವಲ ಪ್ಯಾಡ್ ಅಲ್ಲ. ಮೆನ್ ಸ್ಟ್ರುವಲ್ ಕಪ್ ಮತ್ತು ಬಟ್ಟೆಗಳನ್ನು ಬಳಸುವವರಿದ್ದಾರೆ. ಪ್ರತಿ ನಾಲ್ಕು ಗಂಟೆಗೊಮ್ಮೆ ಮೆನ್ ಸ್ಟ್ರುವಲ್ ಕಪ್ ಬದಲಾಯಿಸಬೇಕು.

* ಗುಪ್ತಾಂಗವನ್ನು ಬಿಸಿ ನೀರಿನಿಂದ ತೊಳೆಯಿರಿ ಮುಟ್ಟಿನ ಸಮಯದಲ್ಲಿ ಗುಪ್ತಾಂಗ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಗುಪ್ತಾಂಗವನ್ನು ತೊಳೆಯುವಾಗ ಸೋಪ್ನ ಬಳಸಬಾರದು. ಮುಟ್ಟಿನ ಸಮಯದಲ್ಲಿ ಹೆಚ್ಚು ರಕ್ತಸ್ರಾವವಾಗಿ ಗುಪ್ತಾಂಗದ ಸುತ್ತಾ ಹಿಡಿದಿರುತ್ತದೆ. ಹೀಗಾಗಿ ಈ ಬಗ್ಗೆಯೂ ಶುಚಿತ್ವಕ್ಕೆ ಹೆಚ್ಚು ಗಮನಕೊಡಿ.

ಇದನ್ನೂ ಓದಿ: Periods: ಮುಟ್ಟಾದಾಗ ಮಹಿಳೆಯರು ಈ ತಪ್ಪುಗಳನ್ನು ಮಾಡಬೇಡಿ

ಇದನ್ನೂ ಓದಿ: Periods: ಮಹಿಳೆಯರ ಸಮಸ್ಯೆಗಳು ಹಲವಾರು; ಅದರಲ್ಲೊಂದು ಅನಿಯಮಿತ ಮುಟ್ಟು.. ಕಾರಣ, ಪರಿಹಾರವೇನು?